ಸಾಗರ : ತಾಲ್ಲೂಕಿನ ಭೈರಾಪುರ ಗ್ರಾಮದ ಬಳಿ ಕಾರು ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಗೋವಾದಿಂದ ಶಿಕಾರಿಪುರದ ಹಿತ್ತಲ ಗ್ರಾಮಕ್ಕೆ ಎರಿಟಿಗಾ ಕಾರಿನಲ್ಲಿ ಬರುತ್ತಿದ್ದ ಎರಿಟಿಗಾ ಕಾರಿಗೆ ಶಿಕಾರಿಪುರದಿಂದ ಆನಂದಪುರಂ ಕಡೆ ಬರುತ್ತಿದ್ದ ಜಲ್ಲಿ ತುಂಬಿದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ೩೪ ವರ್ಷದ ಫರಹಾನ್ನಿಸಾ ಮತ್ತು ೨೩ವರ್ಷದ ಅಬ್ದುಲ್ ರಜಾ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.

ಕಾರಿನಲ್ಲಿದ್ದ ಸೈಯದ್ ಸಲೀಂ, ಜೋಯಾ ಶೇಕ್, ಬುಷಿರಾ ಫಾತೀಮಾ ಶೇಕ್, ಜೋಯಾ ಶೇಕ್, ಬೀಬಿ ಆಯಿಷಾ ಎಂಬುವವರಿಗೆ

ಸಣ್ಣಪುಟ್ಟ ಗಾಯವಾಗಿದ್ದು, ಟಿಪ್ಪರ್ ಚಾಲಕ ಅನಿಲ್ ಅವರಿಗೆ ಗಾಯವಾಗಿದೆ. ಗಾಯಾಗಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಆನಂದಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.