ಬೆಂಗಳೂರು, ವೈಟ್ಫೀಲ್ಡ್, ಏ 24 – ಹೊಸದಾಗಿ ಆರಂಭಗೊಂಡಿರುವ ಮೆಡಿಕವರ್ ಆಸ್ಪತ್ರೆಯಲ್ಲಿ ಕಳೆದ 3 ತಿಂಗಳಲ್ಲಿ ಸುಮಾರು 50 ರೋಬೊಟಿಕ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಕೇವಲ 90 ದಿನಗಳಲ್ಲಿ 50 ರೋಬೋಟಿಕ್ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ, ಆಸ್ಪತ್ರೆ ಸಾಂಕೇತಿಕವಾಗಿ ಹೊಸ ತಂತ್ರಜ್ಞಾನದಲ್ಲಿ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದೆ .

“ಭವಿಷ್ಯದ ಜಿಐ ಶಸ್ತ್ರಚಿಕಿತ್ಸೆ ರೋಬೋಟಿಕ್,” ಎಂದು ಹಿರಿಯ ರೋಬೋಟಿಕ್ ಶಸ್ತ್ರಚಿಕಿತ್ಸಕ ಡಾ. ಕೌಸಿಕ್ ಸುಬ್ರಮನಿಯನ್ ಹೇಳಿದರು. “ಇದರಿಂದ ರೋಗಿಗೂ ಕಂಡಿಷನ್ ಎಷ್ಟೇ ಕ್ಲಿಷ್ಟಕರವಾಗಿದ್ರೂ, ಶಸ್ತ್ರಚಿಕಿತ್ಸೆಗಳನ್ನು ಸುಲಭವಾಗಿ ಮಾಡಬಹುದು ಮತ್ತು ರೋಗಿಯೂ 3-4 ದಿನಗಳಲ್ಲಿ ಮನೆಗೆ ವಾಪಾಸ್ ಕಳುಹಿಸಬಹುದು. ಅದು ರೋಬೋಟಿಕ್ ಶಸ್ತ್ರಚಿಕಿತ್ಸೆಯಿಂದ ಇರುವ ಲಾಭವಾಗಿದೆ”
ಡಾ. ಜಾವೇದ್ ಹುಸೇನ್, ಪ್ಯಾಂಕ್ರಿಯಾಟೆಕ್ಟಮಿ, ಗ್ಯಾಸ್ಟ್ರೆಕ್ಟಮಿ ಮತ್ತು ಸಂಕೀರ್ಣ ಹೆರ್ನಿಯಾ ಶಸ್ತ್ರಚಿಕಿತ್ಸೆಗಳ ರೋಬೋಟಿಕ್ ತಜ್ಞರು ಹೀಗೆ ಹೇಳಿದರು:
“ರೋಬೋಟಿಕ್ ತಂತ್ರಜ್ಞಾನದಿಂದ ನಮ್ಮ ಶಸ್ತ್ರಚಿಕಿತ್ಸಾ ದೃಷ್ಟಿಕೋನವೇ ಬದಲಾಗಿದೆ. ಈ ಮೈಲಿಗಲ್ಲು ತಲುಪಿರುವುದು ನಮಗೆ ಸಂತೋಷವನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನವೀನತೆ ತರುವಲ್ಲಿ ನಾವು ಬದ್ಧರಾಗಿದ್ದೇವೆ.”
ಹಿರಿಯ ಶಸ್ತ್ರಚಿಕಿತ್ಸಕ ಡಾ. ಪ್ರಮೊದ್ ಹೇಳಿದರು:

“ಇದು ಕೇವಲ ಸಂಖ್ಯೆ ಅಲ್ಲ; ಇದು ತಂತ್ರಜ್ಞಾನವನ್ನು ಸ್ವೀಕರಿಸಿ ಉತ್ತಮ ಆರೈಕೆಯನ್ನು ನೀಡಲು ನಾವು ಮಾಡುತ್ತಿರುವ ಸತತ ಪ್ರಯತ್ನದ ಪ್ರತೀಕವಾಗಿದೆ. ಪ್ರತಿಯೊಂದು ಶಸ್ತ್ರಚಿಕಿತ್ಸೆಯೂ ಒಂದು ಜೀವನವನ್ನು ಬದಲಾಯಿಸುತ್ತದೆ, ಒಂದು ಕುಟುಂಬಕ್ಕೆ ಆಶ್ವಾಸನೆ ನೀಡುತ್ತದೆ.”
ಡಾ. ಕೌಸಿಕ್ ಸುಬ್ರಮನಿಯನ್, ಡಾ. ಪ್ರಮೊದ್, ಡಾ. ಶೈಕ್ ಜಾವೇದ್ ಹುಸೇನ್ ಮತ್ತು ಡಾ. ಜಕ್ಕಾ ಸಾಯಿ ಮಾನಸಾ ರೆಡ್ಡಿ ನೇತೃತ್ವದ ಶಸ್ತ್ರಚಿಕಿತ್ಸಾ ತಂಡ, da Vinci ರೋಬೋಟಿಕ್ ವ್ಯವಸ್ಥೆಯ ಸಹಾಯದಿಂದ ಈ ಸಾಧನೆಯನ್ನು ಸಾಧಿಸಿದ್ದಾರೆ. ಈ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆಗಳನ್ನು ಹೆಚ್ಚು ನಿಖರವಾಗಿ, ಕಡಿಮೆ ರಕ್ತಸ್ರಾವ, ಕಡಿಮೆ ನೋವಿನಿಂದ ಹಾಗೂ ಬೇಗನೆ ಚೇತರಿಕೆಯಿಂದ ನಡೆಸಬಹುದು. ಇದರಿಂದ ಪ್ಯಾಂಕ್ರಿಯಾಟೆಕ್ಟಮಿ, ಗ್ಯಾಸ್ಟ್ರೆಕ್ಟಮಿ ಮತ್ತು ಅಬ್ಡೋಮಿನಲ್ ವಾಲ್ ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆಯಂತಹ ಸಂಕೀರ್ಣ ಶಸ್ತ್ರಚಿಕಿತ್ಸೆಗಳೂ ಸುಲಭವಾಗಿ ನೆರವೇರಿಸುತ್ತವೆ.

ಡಾ. ಜಕ್ಕಾ ಸಾಯಿ ಮಾನಸಾ ರೆಡ್ಡಿ ಹೇಳಿದರು:
“ರೋಬೋಟಿಕ್ ಶಸ್ತ್ರಚಿಕಿತ್ಸೆ ಸರ್ಜಿಕಲ್ ತಂತ್ರದಲ್ಲಿ ಮಾತ್ರವಲ್ಲದೇ, ಇದು ಮಹಿಳೆಯರಿಗಾಗಿ ಹೆಚ್ಚು ವೈಯಕ್ತಿಕ, ನಿಖರ ಹಾಗೂ ರೋಗಿಕೇಂದ್ರಿತ ಆರೈಕೆಯತ್ತ ತೆಗೆದುಕೊಳ್ಳುವ ಒಂದು ದಿಟ್ಟ ಹೆಜ್ಜೆ. ಈ ನವೋತ್ಪತ್ತಿಯ ಮುಂಚೂಣಿಯಲ್ಲಿ ನಾವು ಇದ್ದದಕ್ಕೆ ಹೆಮ್ಮೆಪಡುತ್ತೇವೆ ಮತ್ತು ಈ ಜೀವನ ಬದಲಾಯಿಸುವ ತಂತ್ರಜ್ಞಾನವನ್ನು ಎಲ್ಲ ಮಹಿಳೆಯರಿಗೂ ಸರಿಯಾಗಿ ಸಿಗವಂತೆ ಮಾಡುವುದಕ್ಕೆ ನಾವು ಬದ್ಧರಾಗಿದ್ದೇವೆ.”
ಕೃಷ್ಣಮೂರ್ತಿ, ಆಸ್ಪತ್ರೆ ಮುಖ್ಯಸ್ಥರು ಹೇಳಿದರು:
“ಮೆಡಿಕವರ್ನಲ್ಲಿ ನಾವು ಯಶಸ್ಸನ್ನು ಅಂಕಿಗಳಲ್ಲಿ ಅಳೆಯುವುದಿಲ್ಲ ನಮ್ಮ ರೋಗಿಗಳ ನಗು, ವಿಶ್ರಾಂತಿ ಮತ್ತು ವಿಶ್ವಾಸವೇ ನಮ್ಮ ಅಳೆಯುವ ಮಾನದಂಡ. ಬೆಂಗಳೂರು ನಮ್ಮನ್ನು ಸ್ವೀಕರಿಸಿದೆ. ನಾವು ಸಹ ನಿಷ್ಠೆಯಿಂದ ಸೇವೆ ಸಲ್ಲಿಸುತ್ತೇವೆ.”
ಮಾಧ್ಯಮ ಗೋಷ್ಟಿಯಲ್ಲಿ ನೀರಜ್ ಲಾಲ್ ಆಸ್ಪತ್ರೆಯ ಪ್ರಾಂತೀಯ ನಿರ್ದೇಶಕ, ಮತ್ತು ಪ್ರಮೋದ್ ಮಾರ್ಕೆಟಿಂಗ್ ಮುಖ್ಯಸ್ಥ ಭಾಗಿಯಾಗಿದ್ದರು .