ಶಿವಮೊಗ್ಗ: ಕಾಶ್ಮೀರದಲ್ಲಿ ನಡೆದ ಉಗ್ರರ ಅಮಾನವೀಯ ಕೃತ್ಯವನ್ನು ಖಂಡಿಸಿ ಶಿವಮೊಗ್ಗ ವಕೀಲರ ಸಂಘದ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಹಿಂದೂಗಳ ಮೇಲೆ ಉಗ್ರರಿಂದ ನರಮೇಧವಾಗಿದೆ. ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಘಟನೆ ಇದು. ಉಗ್ರರ ಅಟ್ಟಹಾಸವನ್ನು ತಡೆಯಲೇಬೇಕಾಗಿದೆ. ಈ ಚಟುವಟಿಕೆಗಳನ್ನು ಬೆಂಬಲಿಸುವವರನ್ನು ನಿರ್ಮೂಲನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ. ಮತ್ತು ಇಂದು ಕಲಾಪದಿಂದ ಹೊರಗುಳಿಯಲು ನಮ್ಮ ಸಂಘ ನಿರ್ಧರಿಸಿದೆ ಎಂದು ಪ್ರತಿಭಟನಕಾರರರು ತಿಳಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಜಿ.ಆರ್. ರಾಘವೇಂದ್ರಸ್ವಾಮಿ, ಪದಾಧಿಕಾರಿಗಳಾದ ಎಸ್.ಎ. ಶ್ರೀನಿವಾಸ್, ಎಂ.ಬಿ. ಮಾಲತೇಶ್, ಕಿಲಕಕುಮಾರಿ ಎಂ., ನಂದಿನಿದೇವಿ, ಜಗದೀಶ್, ಜನಾರ್ಧನ್ ಹೆಚ್.ಎಂ., ಅತಾವುಲ್ಲಾ ಖಾನ್, ನಿರಂಜನ್ ಮೋಹಿತೆ ಮುಂತಾದವರಿದ್ದರು.