ಶಿವಮೊಗ್ಗ, ಏ.17:
ತಾಲೂಕಿನ ದೇವಕಾತಿಕೊಪ್ಪ (ಜಕಾತಿಕೊಪ್ಪ) ದ ಮಾತೆ ಶ್ರೀ ಆದಿಶಕ್ತಿ ಜಕಾತಮ್ಮ ದೇವಿಯ ಹಬ್ಬ, ಪರಾವು, ಮಹಾರುದ್ರಾಭಿಷೇಕ, ಕೆಂಡದಾರ್ಚನೆ ನಾಳೆ ಏಪ್ರಿಲ್ 18 ರಂದು ನಡೆಯಲಿದೆ.

ದೇವಕಾತಿಕೊಪ್ಪದ ಶ್ರೀ ಬಸವೇಶ್ವರ ದೇವಸ್ಥಾನ ಕಮಿಟಿ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಇಂದು ರಾತ್ರಿ ಕಡೆನಂದಿಹಳ್ಳಿ ದುಗ್ಗಿ ಮತ್ತು ತಪೋ ಕ್ಷೇತ್ರದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಗಮಿಸಲಿದ್ದು,

ನಾಳೆ ಬೆಳಗ್ಗೆ ಶೀಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಹಾಗೂ ಶ್ರೀ ಮಹಾರುದ್ರಾಭಿಷೇಕ ಕೆಂಡದಾರ್ಚನೆ ಹಾಗೂ ಬಾಳೆಕೊಪ್ಪದ ವೀರಭದ್ರೇಶ್ವರ ಪುರವಂತಿಕೆ ಸಂಘದ ವೀರಗಾಸೆಯೊಂದಿಗೆ ರಾಜಭೀದಿ ಉತ್ಸವ ನಡೆಯಲಿದೆ.

ಮಧ್ಯಾಹ್ನ 53ನೇ ವರ್ಷದ ಶ್ರೀ ಆದಿಶಕ್ತಿ ಜಕಾತಮ್ಮ ದೇವಿಯ ಹಬ್ಬ ಪರಾವು ನಡೆಯಲಿದೆ.
ರಾತ್ರಿ 9:00ಗೆ ಶ್ರೀ ನಾಟ್ಯಮಯೂರಿ ಆರ್ಕೆಸ್ಟ್ರಾ, ಭದ್ರಾವತಿ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮಾತೆಯ ಕೃಪೆಗೆ ಪಾತ್ರರಾಗಲು ಶ್ರೀ ಬಸವೇಶ್ವರ ದೇವಸ್ಥಾನ ಕಮಿಟಿ ಹಾಗೂ ದೇವಕಾತಿಕೊಪ್ಪದ ಗ್ರಾಮಸ್ಥರು ಕೋರಿದ್ದಾರೆ.