
ಬೆಂಗಳೂರಿನ ಗ್ಲೋಬಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಟಿಯು ಯುವ ಉತ್ಸವ – 2025 ‘ಇಂಟರ್ಯಾಕ್ಟ್’ ಕಾರ್ಯಕ್ರಮದಲ್ಲಿ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಾಂಸ್ಕೃತಿಕ ತಂಡ ಭಾಗವಹಿಸಿ ರ್ಯಾಲಿ ಚಾಂಪಿಯನ್ ಶಿಪ್ ಪಡೆದಿದ್ದಾರೆ.

ಜನಪದ ನೃತ್ಯ ಸ್ಪರ್ಧೆ (ಪ್ರಥಮ), ಕೊಲ್ಯಾಜ್ (ದ್ವಿತೀಯ), ರಂಗೋಲಿ (ದ್ವಿತೀಯ), ಮಿಮಿಕ್ರಿ (ತೃತೀಯ), ಸ್ಥಳದಲ್ಲಿಯೆ ಚಿತ್ರಕಲೆ (ತೃತೀಯ), ಕ್ಲೇ ಮಾಡಲಿಂಗ್ (ತೃತೀಯ) ಬಹುಮಾನ ಪಡೆದಿದ್ದು, ಕ್ರಮವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದೆ.

ವಿಜೇತರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹುಮಾನ ವಿತರಿಸಿದರು. ಚಲನಚಿತ್ರ ನಟ ಧೃವ ಸರ್ಜಾ, ವಿಟಿಯು ಕುಲಪತಿ

ಡಾ.ವಿದ್ಯಾಶಂಕರ್ ಉಪಸ್ಥಿತರಿದ್ದರು. ಜೆ.ಎನ್.ಎನ್ ಕಾಲೇಜಿನ ಸಾಂಸ್ಕೃತಿಕ ಸಂಯೋಜಕ ಮಧುಸೂದನ್.ಜಿ, ಹರೀಶ್ ಕುಮಾರ್, ಅಕ್ಷತಾ, ನಿಶಾಂತ್ ತಂಡವನ್ನು ನಿರ್ವಹಿಸಿದ್ದರು.