ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ 15 ಆರೋಪಿಗಳನ್ನು ತುಂಗಾ ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತರಲ್ಲಿ ಗಾಂಜಾ ಮಾರಾಟ, ಮನೆಗಳ್ಳತನ, ಜಾತಿ ನಿಂದನೆ, ಅತ್ಯಾಚಾರ, ಹಲ್ಲೆ ಹಾಗೂ ಕೊಲೆ ಯತ್ನ ಆರೋಪಿಗಳಾಗಿದ್ದಾರೆ.
ಆರೋಪಿಗಳ ಹೆಸರು: ನಸೀರ್ (25), ಗಣೇಶ (23) ಮೋಹನ್ (37),ಅಹಮದ್ ವಜೀದ್ (27), ರಫೀಕ್ ಅಹಮದ್ (41), ರಮೇಶ್ (24), ಅಂಜು ಮಹಮದ್ ಆಶ್ರಫ್ (31), ಶಾಹಿದ್ (30), ಅಮ್ಜದ್ ಅಮ್ಜು (30), ಅಪ್ಸರ್ ಪಾಷಾ(35), ವೆಂಕಟೇಶ (30), ತಿರುಮಲೇಶ್(26), ತಬ್ರೇಜ್ (24), ಅರುಣ (28), ಚಂದ್ರಾನಾಯ್ಕ (57)

