ಶಿವಮೊಗ್ಗ,ಮಾ.17:
ರೈತರ ಮಹಾಸಂಗ್ರಾಮಕ್ಕೆ ಬೆಂಬಲಿಸದಿದ್ದರೆ ಮುಂದಿನ ದಿನಗಳಲ್ಲಿ ನಾವೂ ಸಹ ಎಪಿಎಂಸಿ ತರಕಾರಿ ಮಂಡಿಗಳಿಗೆ ಬಾಗಿಲು ಹಾಕಬೇಕಾಗುತ್ತೆ ಎಂದು ಅಧ್ಯಕ್ಷ ಎನ್ ರಮೇಶ್ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರದಲ್ಲಿ 20-03-2021 ರಂದು ನಡೆಯಲಿರುವ ರೈತರ ಮಹಾ ಪಂಚಾಯತ್ ಬೃಹತ್ ಪ್ರತಿಭಟನೆಯ ಅಂಗವಾಗಿ ಎಪಿಎಂಸಿ ಯಾರ್ಡ್ ನಲ್ಲಿ ( ಹಣ್ಣು ಮತ್ತು ತರಕಾರಿ ಮಾರುಕಟ್ಟೆ) ಭೇಟಿ ನೀಡಿ ರೈತರು ಹಾಗೂ ವ್ಯಾಪಾರಿಗಳೊಂದಿಗೆ ಚರ್ಚಿಸಿ ಹಾಗೂ ಪ್ರತಿಭಟನೆಗೆ ಆಮಂತ್ರಣ ನೀಡಿದ ಸಮಾರಂಭದಲ್ಲಿ ಮಾತನಾಡುತ್ತಾ ರೈತ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದರು.
ರೈತ ಸಂಘದ ಮುಖಂಡ ಎಚ್ ಆರ್ ಬಸವರಾಜಪ್ಪ ಮಾತನಾಡುತ್ತಾ, ರೈತರಿಗೆ ಬೇಡ ಅಂದ ಕಾಯ್ದೆ ಮಾಡೋಕೆ ಇವರ್ಯಾರಪ್ಪ…, ಇದು ಮೋದಿ ಸರ್ಕಾರ ಅಲ್ಲ. ಕಾರ್ಪೂರೇಟರ್ ಗಳ ಸರ್ಕಾರ. ರೈತರ ಕಮಿಟಿ ರದ್ದು ಮಾಡಿ ಅಧಿಕಾರಿಗಳ ಕೈಗೆ ಅಧಿಕಾರ ಕೊಟ್ಟರೆ ಹೇಗೆ…. ಎಂದು ಪ್ರಶ್ನಿಸಿದರು.
ನಾವು ರೈತರು ಆರ್ಥಿಕ ಅವಶ್ಯಕತೆಗನುಗುಣವಾಗಿ ಸಾಲ ಪಡೆಯುತ್ತೇವೆ. ಇವರು ಸಾಲ ಕೊಟ್ಟಂತೆ ಮಾಡಿ ಕಾರ್ಪೂರೇಟ್ ವ್ಯವಸ್ಥೆ ಮಾಡಲು ಹೊರಟಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಚಾಲಕರು ಹಾಗೂ ಜೆಡಿಎಸ್ ರಾಜ್ಯ ಮುಖಂಡರೂ ಆದ ಎಂ. ಶ್ರೀಕಾಂತ್ , ರೈತ ನಾಯಕ ಕೆ.ಟಿ. ಗಂಗಾಧರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಹೆಚ್ ಸಿ ಯೋಗೇಶ್ ಹಾಗೂ ರೈತ ಸಂಘದ ಮುಖಂಡರುಗಳು, ಮಂಡಿ ವರ್ತಕರು ಉಪಸ್ಥಿತರಿದ್ದರು.

