
ಹೊಸನಗರ: ಕ್ಷಯರೋಗದಿಂದ ಬಳಲುತ್ತಿದ್ದ ಹೊಸನಗರ ತಾಲ್ಲೂಕು ಹುಲಿಕಲ್ ಗ್ರಾಮದ ರಾಘವೇಂದ್ರ ಅವರ ಕುಟುಂಬಕ್ಕೆ ಪೌಷ್ಟಿಕ ಆಹಾರ ವಿತರಿಸಿ ಕೆಪಿಸಿಸಿ ಶಿವಮೊಗ್ಗ ಜಿಲ್ಲಾ ವೈದ್ಯರ ಘಟಕದ ಅಧ್ಯಕ್ಷರಾದ ಡಾ ಪ್ರದೀಪ್ ಡಿಮೆಲ್ಲೋ ಮಾನವೀಯತೆ ಮೆರೆದಿದ್ದಾರೆ.

ರಾಘವೇಂದ್ರ ಅವರು ಕುಟುಂಬಕ್ಕೆ ಆಧಾರವಾಗಿದ್ದರು. ಅವರು ಕ್ಷಯರೋಗಕ್ಕೆ ತುತ್ತಾದ ನಂತರ ಕುಟುಂಬ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿತ್ತು. ಈ ಬಗ್ಗೆ ಸ್ಥಳೀಯರಿಂದ ಪಡೆದ ಡಾ.ಪ್ರದೀಪ್ ತಕ್ಷಣ ಅವರ ಮನೆಗೆ ತೆರಳಿ ಕಷ್ಟವನ್ನು ಆಲಿಸಿದ್ದಲ್ಲದೇ ಪೂರಕ ಪೌಷ್ಟಿಕ ಆಹಾರ ಹಾಗೂ ಧೈನಂದಿನ ಬಳಕೆಯ ವಸ್ತುಗಳನ್ನು ನೀಡಿ ಸಹಾಯದ ಹಸ್ತ ಚಾಚಿದರು.

ನಂತರ ಮಾತನಾಡಿದ ಅವರು, ’ಕ್ಷಯ ರೋಗ ಮಾರಕರೋಗವಲ್ಲ. ಸೂಕ್ತ ಚಿಕಿತ್ಸೆ ಪಡೆದ ರೋಗಿಯಿಂದ ರೋಗ ಹರಡುವ ಸಾಧ್ಯತೆ ಕಡಿಮೆ. ಯಾರು ಹೆದರಬೇಕಿಲ್ಲ. ರೋಗಿಗೆ ಪೌಸ್ಟಿಕ ಆಹಾರ ನೀಡಿದಲ್ಲಿ ಬೇಗ ಚೇತರಿಸಿಕೊಳ್ಳಬಹುದು ಎಂದರು.

ನಂತರ ಕುಟುಂಬಸ್ಥರಿಗೆ ರೋಗದ ಗುಣ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ ಧೈರ್ಯ ತುಂಬಿದರು. ಕಷ್ಟದ ಸಮಯದಲ್ಲಿ ನೆರವಾದ ವೈದ್ಯರಾದ ಡಾ ಪ್ರದೀಪ್ ಡಿಮೆಲ್ಲೋ ರವರಿಗೆ ಕುಟುಂಬದವರು ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿ ನಿವೃತ್ತ ಅಧಿಕಾರಿ ಅಲ್ಫೋನ್ಸ್ ಡೊಮೆಲ್ಲೋ , ಲಾಯ್ಡ್ ಡಿಸೋಜಾ ಮತ್ತಿದರು ಉಪಸ್ಥಿತರಿದ್ದರು.