
ಶಿವಮೊಗ್ಗ,ಮಾ.29:
ಶಿವಮೊಗ್ಗ ಊರಗಡೂರು ಖಾಸಗಿ ಲೇಔಟ್ ನಲ್ಲಿ ಕಸ ಹಾಕುತ್ತಿದ್ದ ಕಿಡಿಗೇಡಿಗಳ ಕೆಲಸ ಒಂದೆಡೆಯಾದರೆ, ಈ ಉರಿ ಬಿಸಿಲಲ್ಲಿ ಅದಕ್ಕೆ ಯಾರೋ ಹಚ್ಚಿದ ಬೆಂಕಿ ಅಲ್ಲಿನ ನಾಗರಿಕರ ಆತಂಕಕ್ಕೆ ಕಾರಣವಾಗಿದೆ.


ಇಲ್ಲಿ ಮಹಾನಗರ ಪಾಲಿಕೆ ಕಸ ಹಾಕಬೇಡಿ ದಂಡ ವಿಧಿಸಲಾಗುವುದು ಎಂದು ಬೋರ್ಡ್ ಹಾಕಿದೆ ಅಷ್ಟೆ. ಆದರೆ ಈ ಕಸವನ್ನು ಯಾರು ಹಾಕಿದರು ಎಂಬುದೇ ಈಗ ನೂರಾರು ಅನುಮಾನಗಳಿಗೆ ಕಾರಣವಾಗಿದೆ.

ಸುಡುವ ಬಿಸಿಲ ನಡುವೆ ಈ ಕಸದ ರಾಶಿಗೆ ಬೆಂಕಿ ಹಚ್ಚಿದ್ದು ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದೆ ಎಂಬ ಸಣ್ಣ ಕಳಕಳಿ ಇರುವಂತಿಲ್ಲ. ಮನೆಗಳು ಹಾಗೂ ಶಾಲೆ ಸಹ ಇರುವ ಈ ಸ್ಥಳದಲ್ಲಿ ಬೆಂಕಿ ಹಚ್ಚಿರುವುದು ಈಗ ಬಹುದೊಡ್ಡ ಆತಂಕವನ್ನು ಸೃಷ್ಟಿಸಿದೆ .
ಕೂಡಲೇ ಸಂಬಂಧಪಟ್ಟವರು ಈ ಬೆಂಕಿಯನ್ನು ನಂದಿಸಿ ಅಲ್ಲಿನ ಕಸದ ರಾಶಿಯನ್ನು ತೆಗೆದು ಹಾಕುವ ಕಾರ್ಯವನ್ನು ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯ.