
ಶಿವಮೊಗ್ಗ.ಮಾ.24 ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸುಮಾರು 30 ವರ್ಷ ವಯಸ್ಸಿನ ಶಶಿಕುಮಾರ್ ಎಂಬವವರು ಮಾ.11 ರ ಸಂಜೆ 6.30 ಕ್ಕೆ ಮನೆಯಿಂದ ಹೊರ ಹೋದವರು ವಾಪಸ್ಸು ಬರದೇ, ಕಾಣೆಯಾಗಿರುತ್ತಾರೆ.


ಕಾಣೆಯಾದ ಶಶಿಕುಮಾರ್ ಸುಮಾರು 6 ಅಡಿ ಎತ್ತರ, ಗೋದಿ ಮೈಬಣ್ಣ ,ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು,

ಎದೆ ಮಧ್ಯದಲ್ಲಿ ಜಿಂಕೆ ಪ್ರಾಣಿ ಅಚ್ಚೆ ಗುರುತು ಇರುತ್ತದೆ. ಕಾಣೆಯಾದ ವೇಳೆ ಸಿಮೆಂಟ್ ಬಣ್ಣದ ನೈಟ್ ಪ್ಯಾಂಟ್

,ಪಾಚಿ ಹಸಿರು ಬಣ್ಣದಟೀ ಶರ್ಟು ಧರಿಸಿರುತ್ತಾರೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆAದು ಪ್ರಕಟಣೆ ತಿಳಿಸಿದೆ.