
ಇದನ್ನೂ ಓದಿ:- https://tungataranga.com/?p=40625
ಸ್ವಯಂ ಘೋಷಿತ ಸ್ಟಂಟ್ ನಾಯಕರೆನ್ನುವವರನ್ನ ದೂರ ಇಡಿ…, ಗಜೇಂದ್ರ ಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ
ಸಂಪೂರ್ಣ ಸುದ್ದಿ ಓದಲು ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ https://chat.whatsapp.com/DvWBmQxqpjV906mtKCFNZ5

ನೀನು ಈ ಕೆಲಸದಲ್ಲಿ ವಂಚನೆ ಮಾಡಿದ್ದೀಯಾ, ಈ ಕೆಲಸ ಮಾಡಿಕೊಡಲು ನೀನು ಇಷ್ಟು ಲಂಚ ಕೇಳಿದ್ದೀಯ? ಅವರಿಂದ ಇಷ್ಟು ರೂಪಾಯಿ ಪಡೆದಿದ್ದೀಯಾ., ನಿನ್ನ ಹಣೆಬರಹ ನನಗೆ ಗೊತ್ತು. ಬೀದಿಯಲ್ಲಿ ನಿನ್ನ ವಿಷಯವನ್ನ ಹರಾಜಾಕುತ್ತೇನೆ. ಪ್ರತಿಭಟಿಸುತ್ತೇನೆ. ಜನರನ್ನು ಕರೆದುಕೊಂಡು ಬಂದು ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ವಂಚನೆ ಮಾಡಿದ, ಮೋಸ ಮಾಡಿದ ವ್ಯಕ್ತಿಯಿಂದಲೇ ವಂಚನೆಯ ವಸೂಲಿ ಹಣದಿಂದ ಅದೇ ಹಣವನ್ನು ಬೆದರಿಸಿ ತಿನ್ನುವ ಕೆಲವೇ ಕೆಲವು ಕಿರಾತಕ ಮನಸುಗಳಿಗೆ ಏನು ಹೇಳಬೇಕು ಇವರನ್ನು ದೇವರನ್ನೇಬೇಕೆ,? ಹೋರಾಟಗಾರರನ್ನಬೇಕೆ? ಸಮಾಜ ಉದ್ಧಾರಕರು ಎನ್ನಬೇಕೇ ಎಂಬುದು ನಮ್ಮ ನಡುವಿನ ಪಬ್ಲಿಕ್ ಪ್ರಶ್ನೆ.

ಸಮಾಜದ ಎಲ್ಲ ಸ್ತರಗಳಲ್ಲಿ ಅನ್ಯಾಯ ಮಾಡಿದವರ ಮೋಸ ಮಾಡಿದವರ ವಿರುದ್ಧ ಇಂತಹ ಒಂದು ಒಳದಂಧೆ ನಿರಂತರವಾಗಿ ಕೆಲವರಿಂದ ನಡೆಯುತ್ತಾ ಬಂದಿದ್ದು ಅವರು ಅದರಲ್ಲೇ ಭವ್ಯವಾದ ಬದುಕು ಸಾಗಿಸುತ್ತಿರುವುದು ನಮಗೆ ಸದ್ದಿಲ್ಲದೆ ಗೊತ್ತಾಗುತ್ತಿದೆ ಅಷ್ಟೇ.

ಸಮಾಜಬಾಹಿರ ಕಾರ್ಯದ ವಿರುದ್ದ ಪ್ರತಿಭಟಿಸುವುದು, ಹೋರಾಟ ಮಾಡುವುದು, ಕಾನೂನಾತ್ಮಕ ಶಿಕ್ಷೆ ಕೊಡಿಸುವುದು ಒಂದು ಬಗೆಯ ಹೋರಾಟ.
ಆದರೆ ಇಲ್ಲಿ ಪ್ರತಿಭಟನೆ, ಹೋರಾಟ ಧಿಕ್ಕಾರ, ತಿರಸ್ಕಾರ ಎಂಬ ಪದಗಳು ಕೇವಲ ಇಣುಕು ಮೂಲೆಯಲ್ಲಿ ಕಾಣಸಿಗುವ ಪದಗಳಾಗುತ್ತಿರುವುದು ದುರಂತ. ಕೊನೆಯ ಅಂತ್ಯ ಯಾರಿಗೂ, ಯಾವುದು ಗೊತ್ತಾಗದಿರುವುದು ಮತ್ತೊಂದು ದುರಂತ.
ಯಾರೋ ಒಬ್ಬ ಭ್ರಷ್ಟಾಚಾರಿ ಜೈಲಿಗೆ ಹೋದನಂತೆ ಎಂದು ಅಪರೂಪಕ್ಕೆ ವರ್ಷಕ್ಕೆ ಒಂದೆರಡು ಬಾರಿ ಸುದ್ದಿ ರೂಪದಲ್ಲಿ ಹೊರ ಬಂದರೆ ಅಂತಹ ಘಟನೆಗಳ ಬಗ್ಗೆ ಸಹಸ್ರಾರು ದೂರುಗಳು ಹರಿದಾಡುತ್ತಿರುತ್ತವೆ ಪ್ರತಿಭಟನೆಗಳು ನಡೆದಿರುತ್ತವೆ.

ಆದರೆ ಅಂತ್ಯ ಸದ್ದಿಲ್ಲದೆ ಸುಮ್ಮನಾಗಿರುತ್ತದೆ ಯಾಕೆ?
ಕೊಳಕು ತಿಂದವನು ಕೊಳಕನ್ನೇ ತಿನಿಸುತ್ತಾನೆ ಎಂಬ ಚಿಕ್ಕ ಕಾಮನ್ ಸೆನ್ಸ್ ಇಲ್ಲದ ಕೆಲವರ ಎತ್ತುವಳಿದಂಧೆ, ಮುಂದೊಂದು ದಿನ ಅವರ ತಿನ್ನುವ ಅನ್ನವನ್ನೇ ಕೊಳಕನ್ನಾಗಿ ಮಾಡುತ್ತದೆ. ಇದು ಸಾಮಾನ್ಯವಾಗಿ ಹೇಳುವ ಮಾತು ಎಂದು ನೆಗೆಟಿವ್ ಥಿಂಕಿಂಗ್ ಅಂಕಣದ ಓದುಗರೊಬ್ಬರ ಅಭಿಪ್ರಾಯ.