ಶಿವಮೊಗ್ಗ: ಆರೋಗ್ಯಕರ ಸಮಾಜದಲ್ಲಿ ದೈಹಿಕ ಸದೃಢತೆ ಅಗತ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಅವರು ಭಾನುವಾರ ಪೋಲಿಸ್ ಇಲಾಖೆಯು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಮ್ಮ ಪೊಲೀಸ್ ನಮ್ಮ ಹೆಮ್ಮೆ, ದೈಹಿಕ ಸದೃಢತೆಗಾಗಿ ಹಾಗೂ ಮಾದಕ ವಸ್ತುಗಳ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಪೋಲಿಸ್ ಇಲ್ಲಿಯ ಡಿಎಆರ್ ಮೈದಾನದಿಂದ ಆಯೋಜಿಸಿದ್ದ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಈ ಹಿಂದೆ ನಡೆದಿದ್ದ ಚನ್ನಗಿರಿ ಟು ಶಿವಮೊಗ್ಗದ ಮ್ಯಾರಥಾನ್ನ್ನು ಮೆಲಕು ಹಾಕಿದರು. ಒಂದು ಉದ್ದೇಶಕ್ಕಾಗಿ ಮ್ಯಾರಥಾನ್ ನಡೆದಿದೆ. ಸದುದ್ದೇಶದಿಂದ ಓಟ ನಡೆಸಲಾಗಿದೆ ಎಂದರು. ಹಾಡ್ತಾ ಹಾಡ್ತಾ ರಾಗ. ಓಡ್ತಾ ಓಡ್ತಾ ಆರೋಗ್ಯಕರ ಸಮಾಜ ನಿರ್ಮಿಸೋಣ, ಫಿಸಿಕಲ್ ಫಿಟ್ ನೆಸ್ ಬಗ್ಗೆ ಪ್ರಧಾನಿ ಮೋದಿ ಕೂಡ ಒತ್ತು ನೀಡುತ್ತಿದ್ದಾರೆ ಎಂದರು.

ಎಂ.ಎಲ್. ಸಿ. ಡಾ.ಧನಂಜಯ ಸರ್ಜಿ ಮತನಾಡಿ, ಚಟ ಮತ್ತು ದು?ಟದ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಚಟ ಎಂದ ತಕ್ಷಣ ಕಾಫಿ ಟೀ ನೆನಪಾಗಬಹುದು. ದು?ಟ ಎಂದರೆ ಸಿಗರೇಟ್, ಮದ್ಯ ವ್ಯಸನಗಳನ್ನು ನಿರಂತರ ಮಾಡುವ ಮೂಲಕ ದುಶ್ಚಟಕ್ಕೆ ಒಳಗಾಗುವುದು. ಆದರೆ ಅದಕ್ಕಿಂತ ಮಾರಕವಾಗಿರುವುದು ಮಾದಕ ವಸ್ತುಗಳು. ಕಿಕ್ ಗಾಗಿ ಮಾದಕ ವಸ್ತು ಸೇವನೆ ಮಾಡಲಾಗುತ್ತದೆ. ಅದರ ವಿರುದ್ಧ ಜಾಗೃತಿ ಮೂಡಿಸುವುದು ಈ ಮ್ಯಾರಾಥಾನ್ ಉದ್ಧೇಶ ಎಂದರು.

೧೦ಏ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕಿರಣ್, ದ್ವಿತೀಯ ಸ್ಥಾನವನ್ನು ನಂದನ್ ತೃತೀಯ ಸ್ಥಾನವನ್ನು ಭರತ್ ರವರು ಹಾಗೂ ೫ ಏ ಪುರು?ರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲು ದ್ವಿತೀಯ ಸ್ಥಾನವನ್ನು ಧನರಾಜ್ ತೃತೀಯ ಸ್ಥಾನವನ್ನು ಧನು? ಹಾಗೂ ೫ ಏ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಧೀಕ್ಷಾ ದ್ವಿತೀಯ ಸ್ಥಾನವನ್ನು ಸಾನಿಕ ತೃತೀಯ ಸ್ಥಾನವನ್ನು ಸೋನಿಯಾ ರವರು ಪಡೆದರು. ಪ್ರಥಮ ಸ್ಥಾನ ಪಡೆದ ವಿಜೇತರಿಗೆ ರೂ ೧೦,೦೦೦/- ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು, ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ ರೂ ೮,೦೦೦/- ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ಹಾಗೂ ತೃತೀಯ ಸ್ಥಾನ ಪಡೆದ ವಿಜೇತರಿಗೆ ರೂ ೫,೦೦೦/- ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು ಹಾಗೂ ಮ್ಯಾರಥಾನ್ ನಲ್ಲಿ ಭಾಗವಹಿಸಿ, ಪೂರ್ಣಗೊಳಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು ಹಾಗೂ ಈ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜ* ನಿರ್ಮಾಣ, ಸೈಬರ್ ಸುರಕ್ಷತಾ ಕ್ರಮಗಳು ಮತ್ತು ಸಂಚಾರ ನಿಯಮಗಳ ಕಡ್ಡಾಯ ಪಾಲನೆಯ ಕುರಿತು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಯುವಕುಮಾರ್ ಕಮಾಂಡೆಂಟ್, ೮ನೇ ಪಡೆ, ಮಾಚೇನಹಳ್ಳಿ, ಶಿವಮೊಗ್ಗ, ಶಿವಕುಮಾರ್ ಕಮಾಂಡೆಂಟ್, ೨ನೇ ಪಡೆ ಕೆ.ಎಸ್.ಐ.ಎಸ್.ಎಫ್, ಶಿವಮೊಗ್ಗ, ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – ೦೧, ಶಿವಮೊಗ್ಗ ಎ ಜಿ ಕಾರಿಯಪ್ಪ ಹೆಚ್ಚುವರಿ ಪೊಲೀಸ್ ಅಧೀಕ್ಷಕರು – ೦೨, ಶಿವಮೊಗ್ಗ ಜಿಲ್ಲೆ, ಬಾಬು ಆಂಜನಪ್ಪ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ, ಸಂಜೀವ್ ಕುಮಾರ್ ಟಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ನಾಗರಾಜ್, ಪೊಲೀಸ್

ಉಪಾಧೀಕ್ಷಕರು, ಭದ್ರಾವತಿ ಉಪ ವಿಭಾಗ, ಗೋಪಾಲ ಕೃ? ಟಿ ನಾಯಕ್ ಪೊಲೀಸ್ ಉಪಾಧೀಕ್ಷಕರು ಸಾಗರ ಉಪ ವಿಭಾಗ, ಕೃ? ಮೂರ್ತಿ, ಪೊಲೀಸ್ ಉಪಾಧೀಕ್ಷಕರು, ಸಿಇಎನ್ ಕ್ರೈಂ ಪೊಲೀಸ್ ಠಾಣೆ, ಶಿವಮೊಗ್ಗ ಮತ್ತು ಕೃ? ಮೂರ್ತಿ, ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ, ಶಿವಮೊಗ್ಗ ಜಿಲ್ಲಾ ಪೊಲೀಸ್ ನ ಅಧಿಕಾರಿ ಮತ್ತು ಸಿಬ್ಬಂಧಿಗಳು, ಕೆ.ಎಸ್.ಆರ್.ಪಿ ೮ನೇ* ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು, ಕೆ.ಎಸ್.ಐ.ಎಸ್.ಎಫ್ ೨ನೇ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಯುವಜನ ಮತ್ತು ಕ್ರೀಡಾ ಇಲಾಖೆಯವರಿದ್ದರು.

ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಎನ್.ಎಸ್.ಎಸ್., ಎನ್.ಸಿ.ಸಿ.ಸ್ವಯಂಸೇವಕರು, ಬ್ಯಾಂಕ್ ಸಿಬ್ಬಂದಿ, ಕೆಎಸ್ ಆರ್ ಪಿ, ಸಿಮ್ಸ್ ವೈದ್ಯರು, ಖಾಸಗಿ ವೈದ್ಯರು, ಮಕ್ಕಳು, ಮಹಿಳೆಯರು ಭಾಗವಹಿಸಿದ್ದ ಈ ಓಟ ನಗರದ ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಕರ್ನಾಟಕ ಸಂಘ, ಡಿವಿಎಸ್ ಸರ್ಕಲ್, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮೂಲಕ ಡಿಎಆರ್ ಮೈದಾನಕ್ಕೆ ಬಂದು ಮುಕ್ತಾಯಗೊಂಡಿತು.. ಈ ಒಂದು ಸುತ್ತು ೫ ಕೆ ಎಂದು ಪರಿಗಣಿಸಲಾಗಿದೆ. ಇದೇ ಮಾರ್ಗವಾಗಿ ಎರಡು ಸುತ್ತು ಓಡಿದರೆ ಅದೇ ೧೦ ಕೆ ಆಗಲಿದೆ. ಹೀಗೆ ೫ ಕೆ ಮತ್ತು ೧೦ ಕೆ ಮ್ಯಾರಥಾನ್ ನಲ್ಲಿ ೧,೭೦೦ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.