ಶಿವಮೊಗ್ಗ: ಹೊರಗುತ್ತಿಗೆ ಪದ್ಧತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಜೀವನಾಂಶ ಹಾಗೂ ಉದ್ಯೋಗದ ಭದ್ರತೆ ನೀಡಿ ತಮಗೆ ಕುಟುಂಬ ನಿರ್ವಹಣೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘ ಸರ್ಕಾರವನ್ನು ಆಗ್ರಹಿಸಿ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿ ಕಚೇರಿ ಎದುರು ಸೋಮವಾರದಿಂದ ಅನಿಧಿ?ವಧಿ ಮು?ರ ಆರಂಭಿಸಿದ್ದಾರೆ.
ಶಿವಮೊಗ್ಗ ಹಿಂದಿನ ನಗರಸಭೆ ಅಂದರೆ ಪ್ರಸ್ತುತ ಮಹಾನಗರಪಾಲಿಕೆಯಲ್ಲಿ ಸುಮಾರು ೧೫-೨೦ ವ?ಗಳಿಂದ ಗುತ್ತಿಗೆ ಪದ್ಧತಿ ಅಡಿಯಲ್ಲಿ ೧೧೬ ನೌಕರರಲ್ಲಿ ನೀರು ಸರಬರಾಜು ಸಹಾಯಕರಾಗಿ ವಿವಿಧ ವೃಂದದಲ್ಲಿ ಮೇಲಾಧಿಕಾರಿಗಳು ನೀಡಿದ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ. ಇ? ಸುಧೀರ್ಘ ಸೇವೆ ಸಲ್ಲಿಸಿದರೂ ನಮಗೆ ಯಾವುದೇ ಜೀವನಾಂಶ ಹಾಗೂ ಸೇವಾ ಭದ್ರತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅವರಂತೆ ಶಿವಮೊಗ್ಗ ನಗರಕ್ಕೆ ಘನ ಸರ್ಕಾರದ ಮಹತ್ತರ ಯೋಜನೆಯಾದ ೨೪ಘಿ೭ ನಿರಂತರ ನೀರು ಸರಬರಾಜು ಯೋಜನೆಯ ಅನು?ನಗೊಳಿಸುವ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ನಿರ್ವಹಣಾ ವಿಭಾಗ, ಶಿವಮೊಗ್ಗ ರವರಿಗೆ ಒಡಂಬಡಿಕೆಯಂತೆ ನೌಕರರೊಂದಿಗೆ ಹಸ್ತಾಂತರವಾಗಿರುತ್ತದೆ.

ಅದರನ್ವಯ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳಲ್ಲಿ ಬಹುಮುಖ್ಯವಾದ ನೀರು ಸರಬರಾಜು ಪೂರೈಕೆ ವ್ಯವಸ್ಥೆಯಲ್ಲಿ ನಮ್ಮ ನೌಕರರುಗಳು ಹಗಲು ಮತ್ತು ರಾತ್ರಿ ಪಾಳಿಗಳಲ್ಲಿ ಮತ್ತು ಹಬ್ಬ-ಹರಿದಿನಗಳಲ್ಲಿ ಹಾಗೂ ಸರ್ಕಾರದ ಸಾರ್ವತ್ರಿಕ ರಜೆ ದಿನಗಳಲ್ಲಿಯೂ ಸಹಾ ವಿಶೇ?ವಾಗಿ ಮಹಾಮಾರಿಯಾದ ಕರೋನ ಸಂದರ್ಭದಲ್ಲಿ ನಮ್ಮ ೩ ಜನ ಸಹೋದ್ಯೋಗಿಗಳನ್ನು ಕಳೆದು ಕೊಂಡರೂ ನಮ್ಮ ನೌಕರರುಗಳು ಜೀವದ ಹಂಗನ್ನು ತೊರೆದು ಯಾವುದೇ ಭಯಭೀತಿ ಇಲ್ಲದೇ ನಗರದ ಸಾರ್ವಜನಿಕರಿಗೆ ನಮ್ಮಿಂದ ಯಾವುದೇ ರೀತಿ ನೀರಿನ ತೊಂದರೆಯಾಗದಂತೆ ರಾತ್ರಿ ಇರುಳು ಎನ್ನದೇ ನಿರಂತರವಾಗಿ ನೀರು ಸರಬರಾಜು ವಿತರಣಾ ಕೆಲಸವನ್ನು ನಿರ್ವಹಿಸುತ್ತಿದ್ದೇವೆ. ಹಾಗೂ ಯಾವುದೇ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಪ್ರತಿಭಟನಾಕಾರರು ಅಸಮಾಧಾನ ತೋಡಿಕೊಂಡರು.

ಆದರೆ ಸರ್ಕಾರವು ನೀರು ಸರಬರಾಜು ನೌಕರರನ್ನು ನೇರನೇಮಕಾತಿ/ನೇರಪಾವತಿಯಡಿ ತರಲು ಆನೇಕ ಬಾರಿ ಮಾಹಿತಿಯನ್ನು ಜಿಲ್ಲಾ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶದವರಿಂದ ಮಾಹಿತಿಯನ್ನು ಪಡೆದಿದೆ. ಸದರಿ ಮಾಹಿತಿಯು ಕಡತಗಳಿಗೆ? ಸೀಮಿತವಾಗಿದೆ ಅರೋಪಿಸಿದರು.
ಇದರಿಂದಾಗಿ ರಾಜ್ಯದ ಎಲ್ಲಾ ಮಹಾನಗರಪಾಲಿಕೆಗಳಲ್ಲಿ ಬಿಬಿಎಂಪಿ ಹಾಗೂ ಮೈಸೂರು ಮಹಾನಗರಪಾಲಿಕೆ ಹೊರತು ಪಡಿಸಿ ಮನನೊಂದು ಮಾನ್ಯ ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ೨೦೧೯-೨೦ನೇ ಸಾಲಿನಲ್ಲಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಅದರಂತೆ ಪ್ರಕರಣ ಸಂಖ್ಯೆ ೧೬೨/೨೦೧೯ರಂತೆ ನ್ಯಾಯಾಲಯವು ಸಮಾನ ಕೆಲಸಕ್ಕೆ ಸಮಾನ ವೇತನ/ನೇರನೇಮಕಾತಿ ಮಾಡುವಂತೆ ಕೋರಿದನ್ವಯ ಘನ ನ್ಯಾಯಾಲಯವು ಸರ್ಕಾರದ ಕಾನೂನಿನ ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳುವಂತೆ ೮ ವಾರಗಳ ಗಡುವು ನೀಡಿ ದಿ.೦೪.೦೭.೨೦೧೩ರಲ್ಲಿ ಆದೇಶವನ್ನು ಹೊರಡಿಸಿರುತ್ತದೆ. ಆದಾಗ್ಯೂ ಸರ್ಕಾರವು ಯಾವುದೇ ರೀತಿಯ ಕ್ರಮಕೈಗೊಳ್ಳಲಿಲ್ಲ. ನಾವು ಮೇಲ್ಮನವಿ ಸಲ್ಲಿಸಿದ ನಂತರದಲ್ಲಿ ಸರ್ಕಾರವು ತರಾತುರಿಯಲ್ಲಿ ನಮಗೆ ಕಾನೂನಿನ ವ್ಯಾಪ್ತಿಯಲ್ಲಿ ಎಲ್ಲಾ ಹೊರಗುತ್ತಿಗೆ ನೀರು ಸರಬರಾಜು ನೌಕರರನ್ನು ಕನಿ? ವೇತನ ಕಾಯ್ದೆಯಂತೆ ವೇತನ ಪಾವತಿಸಿ ಯಥಾಸ್ಥಿತಿ ಮುಂದುವರೆಸುವಂತೆ ಹಿಂಬರಹ ನೀಡಿರುತ್ತಾರೆ.

ಇದರಿಂದಾಗಿ ನಮಗೆ ಕಾನೂನು ರೀತಿಯ ಹೋರಾಟಕ್ಕೆ ಹಿನ್ನಡೆಯಾಗಿದ್ದು ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಸಂಬಂಧ ಕರ್ನಾಟಕ ರಾಜ್ಯ ನೀರು ಸರಬರಾಜು ನೌಕರರ ಸಂಘ (ರಿ)ವು ಇಂದಿನಿಂದ ರಾಜ್ಯಾದ್ಯಂತ ನೀರು ಸರಬರಾಜು ಕೆಲಸ ಸ್ಥಗಿತಗೊಳಿಸಿ ಅನಿರ್ಧಿ?ವಧಿ ಮು?ರ ಹಮ್ಮಿಕೊಂಡಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಅವರು ಬೆಂಬಲಿಸಿದ್ದ ಈ ಪ್ರತಿಭಟನೆಯಲ್ಲಿ ಗೊವಿಂದಣ್ಣ, ಸಂಘದ ಗೌರವಾಧ್ಯಕ್ ಮೋಹನಕುಮಾರ್, ಅಧ್ಯಕ್ಷ ನಾಗರಾಜ್ ಎಚ್.ಎನ್. ರಘುರಾಮ್, ಕಿರಣ್ ಕುಮಾರ್ ಡಿ.ಎನ್. ವಿನಯ್ ಜೆ. ರಘು ಎಲ್. ಪರಮೇಶ್ ಆರ್, ವಿನಾಯಕ ಎಲ್. ಮತ್ತಿತರರು ಪ್ರತಿಭಬಟನೆಯಲ್ಲಿದ್ದರು.