
ಶಿವಮೊಗ್ಗ, ಫೆ.25:
ಶಿವಮೊಗ್ಗ ಚಿತ್ರದುರ್ಗ ಮೂಲಕ ಬೆಂಗಳೂರು ತಲುಪುವ ರಾಷ್ಟ್ರೀಯ ಹೆದ್ದಾರಿಯು ಹೊಸದಾಗಿ ನಿರ್ಮಾಣವಾಗುತ್ತಿದೆ. ಹೊಳೆಹೊನ್ನೂರು ಹೊಸ ಸೇತುವೆ ಮೂಲಕ ಬೈಪಾಸ್ ರಸ್ತೆ ನಿನ್ನೆ ಸಂಜೆಯಿಂದ ಪ್ರಾಯೋಗಿಕವಾಗಿ ಸಂಚಾರ ವ್ಯವಸ್ಥೆಗೆ ಬಿಡಲಾಗಿದ್ದು, ಇಂದು ಬೆಳಿಗ್ಗೆ ಸ್ಥಳೀಯ ನಿವಾಸಿ ಕ್ಯಾಂಟರ್ ಗೆ ಬಲಿಯಾಗಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ಹೊಳೆಹೊನ್ನೂರು ತಲುಪುವ ಎಮ್ಮೆಹಟ್ಟಿ ಹಾಗೂ ಅಗಸನಹಳ್ಳಿ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಎಷ್ಟು ಬಾರಿ ಹೇಳಿದರೂ, ಮನವಿ ಕೊಟ್ಟರೂ ಮಾತು ಕೇಳದ ಮನವಿಯನ್ನು ಮೂಲೆಗೆ ಹಾಕಿದ ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಹಾಗೂ ಸ್ಥಳೀಯ ಶಾಸಕರ ಅವರ ವಿರುದ್ಧ ಆಕ್ರೋಸದ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಟಿ ವಿ ಎಸ್ ಎಕ್ಸೆಲ್ ನಲ್ಲಿ ಅಗಸನಹಳ್ಳಿ ಮಾರ್ಗವಾಗಿ ಹೊಳೆ ಹೊನ್ನೂರಿಗೆ ಬರುತ್ತಿದ್ದ ಅದೇ ಗ್ರಾಮದ ಪುಟ್ಟಪ್ಪ ಎಂಬ 52 ವರ್ಷದ ವ್ಯಕ್ತಿಗೆ ಕ್ಯಾಂಟರ್ ಹೊಡೆದಿದೆ. ಪುಟ್ಟಪ್ಪ ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಈ ಘಟನೆಯ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಈಗಾಗಲೇ ನಾವು ಸಂಸದರಿಗೆ ಹತ್ತಾರು ಬಾರಿ ಮನವಿ ಸಲ್ಲಿಸಿದ್ದು ಎಮ್ಮೆಹಟ್ಟಿ ಮಾರ್ಗದ ಈ ರಸ್ತೆಯಲ್ಲಿ ಅಂಡರ್ ಪಾಸ್ ಮಾಡಿಕೊಡಲು ಕೋರಿದ್ದೆವು. ಆದರೆ ಅದನ್ನು ಮಾಡದೆ ಈಗ ಪ್ರಾಯೋಗಿಕವಾಗಿ ಸಂಚಾರಕ್ಕೆ ಅವಕಾಶ
ನೀಡುವ ಮೂಲಕ ಸಾವಿಗೆ ಕಾರಣರಾಗಿದ್ದಾರೆ. ಇಲ್ಲಿ ಯಾವುದೇ ಒಬ್ಬ ಇಂಜಿನಿಯರ್ ಆಗಲಿ ಇಲ್ಲಿ ಬಂದಿಲ್ಲ ಎಂದು ಪ್ರತಿಭಟನೆಗಿಳಿದಿದ್ದಾರೆ