ಸಾಮಾಜಿಕ ಜಾಲತಾಣಗಳ ಪ್ರಭಾವ ಕುರಿತು ಸಂವಾದ
ಶಿವಮೊಗ್ಗ: ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಐಕ್ಯೂಎಸಿ ಮತ್ತು ಮಹಿಳಾ ಸಬಲೀಕರಣ ಘಟಕದ ವತಿಯಿಂದ ಯುವ ಸಮುದಾಯದ ಮೇಲೆ ಸಾಮಾಜಿಕ ಜಾಲತಾಣಗಳ ಪ್ರಭಾವ ಕುರಿತು ಸಂವಾದ ಕಾರ್ಯಕ್ರಮವು ಫೆ.೨೭ರ ಶನಿವಾರ ಬೆಳಿಗ್ಗೆ 10.30ಕ್ಕೆ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಬಿ.ಎನ್. ನಂದಿನಿ, ಕಾಲೇಜಿನ ಪ್ರಾಂಶುಪಾಲೆ ಡಾ| ಎಂ.ಕೆ. ವೀಣಾ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ| ಶಿವಮೂರ್ತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವರೆಂದು ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಡಾ| ಕೆ.ಎಸ್. ಸರಳ ತಿಳಿಸಿದ್ದಾರೆ.
ತಾ.ಪಂ. ನೂತನ ಕಟ್ಟಡದ ಶಂಕುಸ್ಥಾಪನೆ
ಶಿವಮೊಗ್ಗ: ಮಧ್ಯಾಹ್ನ 12.೦೦ಕ್ಕೆ ತಾಲೂಕು ಪಂಚಾಯತಿ ಅವರಣದಲ್ಲಿ ಶಿವಮೊಗ್ಗ ತಾಲೂಕು ಪಂಚಾಯಿತಿ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ಉಪಸ್ಥಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಆಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪರವರು ನೆರವೇರಿಸುವರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಸಭೆ ಶಾಸಕರುಗಳಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಕೆ.ಬಿ.ಅಶೋಕ್ ನಾಯ್ಕ, ವಿಧಾನ ಪರಿಷತ್ ಶಾಸಕರುಗಳಾದ ಆರ್. ಪ್ರಸನ್ನಕುಮಾರ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ
ಶಿವಮೊಗ್ಗ: ಮಧ್ಯಾಹ್ನ 3ಕ್ಕೆ ಕರ್ನಾಟಕ ಸಂಘದಲ್ಲಿ ಪುಸ್ತಕ ಬಹುಮಾನ ೨೦೧೯ರ ಬಹುಮಾನ ವಿಜೇತ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಹೆಚ್.ಡಿ. ಉದಯಶಂಕರಶಾಸ್ತ್ರಿ ವಹಿಸಲಿದ್ದು, ಖ್ಯಾತ ಕವಿಯತ್ರಿ ಪ್ರೊ. ಸ.ಉಷಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಗೌರವ ಕಾರ್ಯದರ್ಶಿ ಪ್ರೊ. ಆಶಾಲತಾ ಕೋರಿದ್ದಾರೆ.
ಅಭಿವಿನ್ಯಾಸ ಕಾರ್ಯಕ್ರಮ
ಶಿವಮೊಗ್ಗ: ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ಆಂತರಿಕ ಗುಣಮಟ್ಟದ ಭರವಸೆ ಕೋಶದ ದೃಷ್ಟಿಕೋನ ಮತ್ತು ಇಂಡಕ್ಷನ್ ಪ್ರೋಗ್ರಾಂ ಕುರಿತು ಪ್ರಥಮ ಬಿ.ಎ., /ಬಿಸ್ಸಿ/ ಬಿ.ಕಾಂ., ವಿದ್ಯಾರ್ಥಿಗಳಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ಫೆ.೨೭ರ ಶನಿವಾರ ಬೆಳಿಗ್ಗೆ ೧೦ಕ್ಕೆ ಡಿವಿಎಸ್ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ವ್ಯಾಘ್ರ ಕಿರುಚಿತ್ರದ ಪ್ರೀಮಿಯರ್ ಶೋ
ಶಿವಮೊಗ್ಗ: ವ್ಯಾಘ್ರ ಕಿರುಚಿತ್ರದ ಪ್ರೀಮಿಯರ್ ಶೋವನ್ನು ಸಂಜೆ 5ಕ್ಕೆ ಭಾರತ್ ಸಿನಿಮಾ ಟಾಕೀಸ್ (ಸಿಟಿ ಸೆಂಟರ್)ರಲ್ಲಿ ಸಮನ್ವಯ ತಂಡದ ವತಿಯಿಂದ ಏರ್ಪಡಿಸಲಾಗಿದೆ.
ಈ ಶೋ ವೀಕ್ಷಣೆಗೆ ೨೦೦ ಜನರಿಗೆ ಮಾತ್ರ ಅವಕಾಶವಿದ್ದು, ಉಚಿತ ಪಾಸ್ ವ್ಯವಸ್ಥೆ ಇರುತ್ತದೆ. ಮೊದಲು ಬಂದವರಿಗೆ ಆದ್ಯತೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊ: ೯೯೪೫೩೮೭೬೫೦ ಸಂಪರ್ಕಿಸಿ.


