ಶಿವಮೊಗ್ಗ, ಫೆ.15:
ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಪ್ರಯಾಗ್ ರಾಜ್ ಚೌಕಿಗೆ ಹೋಗಲು ಶಿವಮೊಗ್ಗದಿಂದ ಬರುವ ಫೆಬ್ರವರಿ 22ರಂದು ವಿಶೇಷವಾದ ರೈಲಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಫೆ. 22ರ ಸಂಜೆ 4. 40 ಕ್ಕೆ ಶಿವಮೊಗ್ಗ ಹೊರಡಲಿರುವ ಈ ರೈಲು ಫೆಬ್ರವರಿ 24ರ ಮಧ್ಯಾಹ್ನ 3 ಗಂಟೆಗೆ ಪಯಾಗ್ ರಾಜ್ ಚೌಕಿಗೆ ತಲುಪಲಿದೆ.

ಹಾಗೆಯೇ ಫೆಬ್ರವರಿ 25ರ ಮಂಗಳವಾರ ಬೆಳಗಿನ ಜಾವ ಒಂದು ಮೂವತ್ತಕ್ಕೆ ವಾಪಸ್ ಆಗಲಿದ್ದು, ಫೆಬ್ರವರಿ 27ರಂದು ಬೆಳಿಗ್ಗೆ 6:45 ಕ್ಕೆ ಶಿವಮೊಗ್ಗಕ್ಕೆ ತಲುಪಲಿದೆ ಎಂದು ಸಂಸದರ ಪ್ರಕಟಣೆ ತಿಳಿಸಿದೆ.
ಇದರ ಸದುಪಯೋಗ ಪಡೆಯಲು ಕೋರಲಾಗಿದೆ.