ಶಿವಮೊಗ್ಗ : ನಮ್ಮ ದೇಶದಲ್ಲಿ ಗುರು ಪರಂಪರೆಗೆ ವಿಶೇಷ ಸ್ಥಾನವಿದ್ದು, ಬಂಜಾರ ಸಮಾಜದ ಗುರುಗಳಾದ ಸಂತ ಸೇವಾಲಾಲರು ಸತ್ಯ, ನಿಷ್ಟೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು.
ಜಿಲ್ಲಾಡಳಿತ, ಜಿ.ಪಂ., ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಂಜಾರ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕುವೆಂಪು ರಂಗಮAದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮದು ಸಾಂಸ್ಕೃತಿಕ ರಾಷ್ಟ್ರ. ವಿವಿಧತೆಯಲ್ಲಿ ಏಕತೆ ಇರುವ ದೇಶ. ಗಿಡ, ಮರ, ನೆಲ, ಜಲ ಹೀಗೆ ಪ್ರಕೃತಿಯನ್ನೇ ಪೂಜಿಸುತ್ತೇವೆ ನಾವು. ಇಂತಹ ಸಮಾಜದಲ್ಲಿ ಸಂತ ಸೇವಾಲಾಲರು ಸತ್ಯ, ನಿಷ್ಟೆ ಪ್ರಾಮಾಣಿಕತೆಗೆ ಹೆಸರಾದವರು. ಬಂಜಾರ ಸಮಾಜದ ಉದ್ದಾರಕರು. ಬಂಜಾರ ಸಮಾಜ ಮುಂದುವರೆಯಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಕರಿಸುತ್ತಿದೆ. ಸಮುದಾಯದವರು ಉತ್ತಮ ಶಿಕ್ಷಣ ಪಡೆದು ಮುಂದೆ ಬರಬೇಕೆಂದರು.

ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್ ಮಾತನಾಡಿ, ಸಂತ ಸೇವಾಲಾಲರಂತಹ ದಾರ್ಶನಿಕರು ಒಂದು ಜಾತಿಗೆ ಸೀಮಿತರಲ್ಲ. ಅವರು ಬಂಜಾರ ಸಮಾಜ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಬಹಳಷ್ಟು ಉತ್ತಮ ಸಂದೇಶ ನೀಡಿದ್ದಾರೆ. ಆದರೆ ಸಂತರು, ಶರಣರು ಸಾಗಿ ಬಂದ ಹಾದಿ ಸುಗಮವಾಗಿರಲಿಲ್ಲ. ಅವರು ಕಲ್ಲುಮುಳ್ಳುಗಳ ಹಾದಿಯಲ್ಲಿ ಸಾಗಿ ಬಂದಿರುತ್ತಾರೆ. ಇವರ ವಚನ, ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ನಮ್ಮ ಸಮಾಜದವರು ಶಿಕ್ಷಣಕ್ಕೆ ಸಮಾಜದವರು ಹೆಚ್ಚಿನ ಒತ್ತು ನೀಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಹಾಗೂ ಆರೋಗ್ಯದ ಕಡೆ ಗಮನ ಕೊಡಬೇಕು. ಇಂತಹ ಶಿಕ್ಷಣ ಪಡಿದಿದ್ದರಿಂದಲೇ ನಾನಿಂದು ಈ ಸ್ಥಾನದಲ್ಲಿದ್ದೇನೆ ಎಂದರು.

ಕೌಶಲ್ಯ ನಮ್ಮ ಸಮಾಜದ ಪ್ರತಿಬಿಂಬ. ಕೌಶಲ್ಯದಿಂದ ಶ್ರೀಮಂತವಾದ ಸಮುದಾಯವಿದು. ಇದರ ಸದ್ಬಳಕೆ ಆಗಬೇಕು. ಮುಂದಿನ ದಿನಗಳಲ್ಲಿ ಕಸೂತಿ ಹೆಣ್ಣು ಮಕ್ಕಳಿಗೆ ಹೇಳಿಕೊಡುವ ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ ಎಂದರು.
ವಿಧಾನ ಪರಿಷತ್ ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಜಗತ್ತೇ ಒಂದು ಕುಟುಂಬ. ನಾವೆಲ್ಲಾ ಇಲ್ಲಿ ಅಕ್ಕ ತಮ್ಮಂದಿರAತೆ ಬಾಳಬೇಕು ಎನ್ನುವ ಪರಿಕಲ್ಪನೆಯನ್ನು ಸಂತ ಸೇವಾಲಾಲ್ ಈ ಸಮಾಜಕ್ಕೆ ಕೊಟ್ಟಿದ್ದಾರೆ. ಸಂತ ಸೇವಾಲಾಲ್ ಅವರು ನಡೆದು ಬಂದ ದಾರಿ ಇಂದಿಗೂ ಪ್ರಸ್ತುತ. ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿನ ಅನೇಕ ವಿಷಯಗಳನ್ನು ಸಂತ ಸೇವಾಲಾಲರು ಬಹಳ ಮುಂಚೆಯೇ ಸಮುದಾಯಕ್ಕೆ ನೀಡಿದ್ದರು.ನಾವೆಲ್ಲಾ ಒಂದೇ ಸಮುದಾಯ. ಸರ್ವೇಜನ ಸುಖಿನೋ ಭವಂತು. ಪರ ಸ್ರ್ತೀಯನ್ನು ದೇವರಂತೆ ನೋಡಬೇಕು ಹಾಗೂ ಮಣ್ಣು, ನೆಲ, ಜಲ, ಗಿಡ ಪ್ರಕೃತಿಯನ್ನು ಪೂಜಿಸಬೇಕೆಂದು ತಿಳಿಸಿದ್ದರು. ಸಂತ ಸೇವಾಲಾಲರು 270 ವರ್ಷಗಳ ಹಿಂದೆಯೇ ಅಹಿಂಸೆಯಿAದ ಮಾತ್ರ ಸಮಾಜ ಕಟ್ಟಲು ಸಾಧ್ಯ ಎಂದು ತಿಳಿಸಿದ್ದರು. ಅವರ ಎಲ್ಲ ವೇದವಾಕ್ಯ ಪಾಲಿಸಿದರೆ ಒಟ್ಟಾಗಿ ಬದುಕಲು ಸಾಧ್ಯವೆಂದರು.
ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷರಾದ ಕೆ.ಬಿ.ಅಶೋಕ್ ನಾಯ್ಕ್ ಮಾತನಾಡಿ, ಸ್ವಾಭಿಮಾನ, ಭಕ್ತಿ, ತ್ಯಾಗ ಹಾಗೂ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಬಂಜಾರ ಸಮುದಾಯ. ಬಂಜಾರ ಸಮುದಾಯಕ್ಕೆ ವಿಶೇಷವಾದ ಇತಿಹಾಸ ಇದೆ. ತಿರುಪತಿ ತಿಮ್ಮಪ್ಪನಿಗೆ ಈ ಸಮಾಜದ ಗುರುವಿನಿಂದಲೇ ಮೊದಲ ಪೂಜೆ ನಡೆಯುವುದು. ಈ ದೇಶದ ಸಂಸತ್ ಭವನ ಕಟ್ಟಲು ಜಾಗ ಕೊಟ್ಟಿದ್ದು ಕೂಡ ಇದೇ ಸಮಾಜ. ಹಾಗಾಗಿ ಇದನ್ನು ಲಾಯಲ್ ಕಮ್ಯುನಿಟಿ ಇನ್ ಇಂಡಿಯಾ ಎನ್ನಲಾಗುತ್ತದೆ. ಬಂಜಾರ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಹಾಗೂ ಪ್ರಾತಿನಿಧ್ಯತೆಯನ್ನು ಸಂತ ಸೇವಾಲಾಲರು ನೀಡಿದ್ದಾರೆ ಎಂದು ಸ್ಮರಿಸಿದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ, ಜಿಲ್ಲಾ ಬಂಜಾರ ಸಂಘದ ಉಪಾಧ್ಯಕ್ಷ ಆರ್.ಜಗದೀಶ್, ಕಾರ್ಯದರ್ಶಿ ಕೆ.ಆನಂದ್, ತಾಲ್ಲೂಕು ಬಂಜಾರ ಸಂಘ ಅಧ್ಯಕ್ಷ ಮಂಜುನಾಥ್ ನಾಯಕ್, ಸಿಂಡಿಕೇಟ್ ಸದಸ್ಯರಾದ ಸಾಕಮ್ಮ ಬಾಯಿ, ಮಾಜಿ ಪಾಲಿಕೆ ಸದಸ್ಯರಾದ ಆರ್.ಸಿ.ನಾಯ್ಕ, ಸಮಾಜದ ಮುಖಂಡರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಎಸ್ ಪಿ ಕಾರ್ಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್ ಉಮೇಶ್ ಪಾಲ್ಗೊಂಡಿದ್ದರು.