
ಚುನಾವಣಾ ವಿಭಾಗದ ಬರ್ಜರಿ ಟ್ರಿಪ್/ ಮಾಯಣ್ಣಗೌಡರಿಗೆ ಅಭಿನಂದನೆ/ ಇದೊಂದು ಸ್ವಾಗತಾರ್ಹ ಕಾರ್ಯ – ಪೋಟೋ ಕಾಣದಂತಿರೋದ್ಯಾಕೆ?
ಹುಡುಕಾಟದ ವರದಿ- 2
ಶಿವಮೊಗ್ಗ, ಫೆ.11:
ಕಳೆದ ಶನಿವಾರ ನಿಮ್ಮ ತುಂಗಾತರಂಗ ನೀಡಿದ ಶಿವಮೊಗ್ಗ ಮಹಾನಗರ ಪಾಲಿಕಯಲ್ಲಿನ ಮ್ಯಾನ್ ಫವರ್ ಏಜೆನ್ಸಿ ಮೂಲಕ ಬಂದ ಡಾಟಾ ಎಂಟ್ರಿ ಮೇಡಂ ಒಬ್ಬರ ಸುದ್ದಿ ನೀಡಿ ಆಯುಕ್ತರಿಗೆ ಒಂದಿಷ್ಟು ಆತ್ಮೀಯ ಸಲಹೆ ನೀಡಿತ್ತು.
ಈ ಸುದ್ದಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಭಾರೀ ಚರ್ಚೆ ಹಾಗೂ ನೈಜತೆಯ ವರದಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು.
ಅದರಲ್ಲಿ ಆ ಡಾಟಾ ಆಪರೇಟರ್ ಹೆಸರನ್ನೂ ಹಾಕಿರಲಿಲ್ಲ
ಏಕೆಂದರೆ ಅದು ಕ್ರಮ ಕೈಗೊಳ್ಳಬಹುದಾದ ಆಯುಕ್ತರ ಗಮನದಲ್ಲಿ ಇದೆ ಎಂಬ ಕಾರಣಕ್ಕೆ. ಇದರ ನಡುವೆ ಆಯುಕ್ತರು ಯಾಕೋ ಮೌನಿಯಾಗಿದ್ದಾರೆ.

ಹಿಂದೆ ಇದೇ ಡಾಟಾ ಆಪರೇಟರ್ ಮೂರ್ನಾಲ್ಕು ದಿನ ಆಯುಕ್ತರ ಪಿಎ ಆಗಿ ಈ ಆಯುಕ್ತರಿಂದಲೇ ಹೊರ ಹಾಕಿಸಿಕೊಡಿದ್ದರು ಎಂದು ಪಾಲಿಕೆ ಅಂಗಳ ಗುಸುಗುಸು ಹೇಳುತ್ತಿದೆ.
ಪಾಲಿಕೆಯ ಚುನಾವಣಾ ವಿಭಾಗದ ಅಧಿಕಾರಿಗಳು ಹಾಗೂ ಎಲ್ಲಾ ಗುತ್ತಿಗೆ ನೌಕರರು ಮೊನ್ನೆಯಷ್ಟೇ ಹಿಂದಿನ ಆಯುಕ್ತರಾದ ಮಾಯಣ್ಣ ಗೌಡ ಅವರಿಗೆ ರಾಷ್ಟ್ರ ಪ್ರಶಸ್ತಿ ಸಂದ ವಿಷಯಕ್ಕೆ ಸಂಬಂಧಪಟ್ಟಂತೆ ಅಭಿನಂದನೆ ಮಾಡಿ ಬಂದಿದ್ದಾರೆ. ಇದು ಅತ್ಯಂತ ಸ್ವಾಗತ ಹಾಗೂ ಇಡೀ ಶಿವಮೊಗ್ಗ ಜನತೆ ಒಪ್ಪಿಕೊಳ್ಳುವ ಕಾರ್ಯ. ಆದರೆ ಆ ಅಭಿನಂದನಾ ಕಾರ್ಯದ ಒಂದೇ ಒಂದು ಚಿತ್ರ ಹೊರಬೀಳದಿರುವುದು ಚುನಾವಣಾ ವಿಭಾಗದ ಹಿರಿಯ ಅಧಿಕಾರಿ ಬಗ್ಗೆ ನಾನಾ ಅನುಮಾನಗಳನ್ನು ಹುಟ್ಟು ಹಾಕಿದೆಯಂತೆ.
ಮಾಯಣ್ಣ ಗೌಡರಿಗೆ ಸನ್ಮಾನ ಮಾಡಿದ್ದನ್ನು ಶಿವಮೊಗ್ಗ ಮಾಧ್ಯಮ ರಂಗ ಹಾಗೂ ನಗರದ ಗಣ್ಯರು ಖಂಡಿತ ಮೆಚ್ಚಿಕೊಳ್ಳುತ್ತಾರೆ ಅದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಮಾಡಿದ ಒಳ್ಳೆಯ ಕಾರ್ಯದ ಬಗ್ಗೆ ಒಂದೇ ಒಂದು ಚಿತ್ರವನ್ನು ಹೊರ ಬಿಡದಿರಲು ಸೂಚನೆ ನೀಡಿದ್ದು ಯಾರು? ಮತ್ತೆ ಏಕೆ ಎಂಬುದು ನಾನಾ ಅನುಮಾನಗಳನ್ನು ಸೃಷ್ಟಿ ಮಾಡಿದೆ.

ಕೂಡಲೇ ಆಯುಕ್ತರು ಇತ್ತ ಗಮನಹರಿಸಿ ಪಾಲಿಕೆಯ ಹಾಗೂ ಅಧಿಕಾರಿಗಳ ಮತ್ತು ನೌಕರರ ಗೌರವ ಉಳಿಸುವ ಕಾರ್ಯ ಮಾಡಬೇಕಿದೆ ಎಂಬುದು ಪಾಲಿಕೆಯ ಬಹಳಷ್ಟು ಅಧಿಕಾರಿಗಳ ಹಾಗೂ ನೌಕರರ ಅಭಿಪ್ರಾಯ.
ಹಿಂದೆ ಸಹ ತುಂಗಾತರಂಗ ಅವರ ಹೆಸರನ್ನು ಬರೆದಿಲ್ಲ. ಇದು ಏಕೆಂದರೆ ಇದು ಪಾಲಿಕೆ ಅಂಗಳದ ಗುಸುಪಿಸು ಸುದ್ದಿ. ಅದನ್ನು ತಿಳಿದುಕೊಳ್ಳುವುದು ಆಯುಕ್ತರಿಗೆ ಕಷ್ಟವೇನಲ್ಲ ಅಲ್ಲವೇ?
