![Screenshot_2025_0210_183202](https://tungataranga.com/wp-content/uploads/2025/02/Screenshot_2025_0210_183202.jpg)
ಶಿವಮೊಗ್ಗ: ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಕಂದಾಯ ಅಧಿಕಾರಿಗಳ ವಿರುದ್ಧ ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿಯ ಅಹೋರಾತ್ರಿ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ.
ಶಿವಮೊಗ್ಗ ತಾಲ್ಲೂಕು, ಹಸೂಡಿ ಗ್ರಾಮದ ಸರ್ವೆ ನಂ. 134/6 ರಲ್ಲಿ 2 ಎಕರೆ ಜಮೀನನ್ನು ಪಿ.ಟಿ.ಸಿ.ಎಲ್. ಕಾಯ್ದೆ ಅಡಿಯಲ್ಲಿ ಜಮೀನನ್ನು ಮರುಸ್ವಾಧೀನಪಡಿಸಿ ಕೊಡಬೇಕೆಂದು ಈ ಹಿಂದೆ ಮಾನ್ಯ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪಿ.ಟಿ.ಸಿ.ಎಲ್. ಸಿ.ಆರ್. ನಂ. 29/1980-81,, ದಿನಾಂಕ: 11-12-1985 ರಂದು ಆದೇಶವಾಗಿದ್ದು ಹಾಗೂ ಹೈಕೋರ್ಟ್ನಲ್ಲಿ ಜಮೀನು ತೆರವುಗೊಳಿಸುವ ನೋಟಿಸ್ ನೀಡಿ ಶೀಘ್ರದಲ್ಲಿ ಜಮೀನನ್ನು ಸ್ವಾಧೀನ ಮರುಸ್ಥಾಪಿಸಬೇಕೆಂದು ಆದೇಶಿಸಿದ್ದು, ಕಂದಾಯ ಅಧಿಕಾರಿಗಳು ಹೈಕೋರ್ಟ್ ಆದೇಶಕ್ಕೂ ಮನ್ನಣೆ ನೀಡದೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೈಕೋರ್ಟ್ ಆದೇಶದಂತೆ ಜ.೦೯ರಂದು ಜಮೀನನ್ನು ನಮಗೆ ಜಿ.ಜೆ. ವೆಂಕಟೇಶ್ ಬಿನ್ ಜಗದೀಶ್ ಕೆ ಇವರಿಂದ ಬಿಡಿಸಿಕೊಡಬೇಕೆಂದು ಜಿ.ಪಿ.ಉಮಾದೇವಿ ಅವರು ಕೇಳಿಕೊಂಡಿದ್ದರು ಸಹ ಉಪವಿಬಾಗಾಧಿಕಾರಿಗಳು ಹಾಗೂ ಕಂದಾಯ ಅಧಿಕಾರಿಗಳು ನಿರ್ಲರ್ಕ್ಷ್ಯ ವಹಿಸುತ್ತಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ರಾಜ್ಯಾಧ್ಯಕ್ಷ ಮಂಜುನಾಥ್, ಉಪಾದ್ಯಕ್ಷ ಜಗದೀಶ್, ಉಮಾದೇವಿ, ಶಿರಾ,ವೇಣುಗೋಪಾಲ್,ಚಂದ್ರಪ್ಪ,ಕರಿಯಪ್ಪ, ಚನ್ನಕೇಶವ ಬಾಧಿತರು,ರುದ್ರಮ್ಮ ಸೇರಿದಂತೆ ಮತ್ತಿತರರಿದ್ದರು.