![saavu](https://tungataranga.com/wp-content/uploads/2024/10/saavu.jpg)
ಶಿವಮೊಗ್ಗ, ಫೆಬ್ರವರಿ 10 : ಫೆ.07 ರಂದು ಶಿವಮಸೊಗ್ಗ ಖಾಸಗಿ ಬಸ್ ನಿಲ್ದಾಣದ ಹತ್ತಿರ ಪ್ರಜ್ಞೆಯಿಲ್ಲದೇ ಬಿದ್ದಿದ್ದ ಸುಮಾರು 45-50 ವರ್ಷದ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದು, ವೈದ್ಯರು ವ್ಯಕ್ತಿಯನ್ನು ಪರೀಕ್ಷಿಸಿ
![](http://tungataranga.com/wp-content/uploads/2023/04/Screenshot_2023_0226_070755-1.jpg)
ಮೃತಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ. ಈ ವ್ಯಕ್ತಿಯ ಹೆಸರು, ವಿಳಾಸ, ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.
ಮೃತನ ಚಹರೆ 5.5 ಅಡಿ ಉದ್ದ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಬಲಗೈ ಒಳಭಾಗದಲ್ಲಿ ನಿತು ಎಂಬ ಹಚ್ಚೆ ಗುರುತು
ಇರುತ್ತದೆ. ಮೈಮೇಲೆ ಆಕಾಶ ನೀಲಿ ಬಣ್ಣದ ಅರ್ಧ ತೋಳಿನ ಶರ್ಟ್, ಬೂದು ಬಣ್ಣದ ಜಾಕೀಟ್, ತೆಳು ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ಮೃತ ವ್ಯಕ್ತಿಯ ವಾರಸ್ಸುದಾರರ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ. : 08182-261414 / 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
—