ಶಿವಮೊಗ್ಗ :ಬಿಜೆಪಿ ಪಕ್ಷ ಶುದ್ಧೀಕರಣವಾದರೆ ಮಾತ್ರ ನಾನು ಸೇರುತ್ತೇನೆ. ಇಲ್ಲದಿದ್ದರೆ ಹೋಗುವುದಿಲ್ಲ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಲ್ಲ ರಾಜಕೀಯ ಪಕ್ಷಗಳೂ ಹಾಳಾಗಿ ಹೋಗಿವೆ. ಎಲ್ಲೂ ಸಿದ್ಧಾಂತ ಉಳಿದಿಲ್ಲ. ಬಿಜೆಪಿಯಾದರೂ ಬೇಕು, ಕಾಂಗ್ರೆಸ್ ಬೇಡ ಎನ್ನುವ ಸ್ಥಿತಿ ಇದೆ. ಅವೆಲ್ಲಕ್ಕೂ ಕ್ರಾಂತಿವೀರ ಬ್ರಿಗೇಡ್ನ ಚಟುವಟಿಕೆಗಳಿಗೂ ಸಂಬಂಧವಿಲ್ಲ .ಒಂದು ವೇಳೆ ಬಿಜೆಪಿ ಸೇರಿದರೂ ಬ್ರಿಗೇಡ್ನ ಚಟುವಟಿಕೆಗಳನ್ನು ನಿಲ್ಲಿಸುವುದಿಲ್ಲ. ಮುಂದುವರಿಯಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.