ಶಿವಮೊಗ್ಗ ಜ.23 : ರಿಪ್ಪನ್ಪೇಟೆ;-ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರಾಮಹೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಗೋಪಾಕೃಷ್ಣ ಬೇಳೂರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
“
ರಿಪ್ಪನ್ಪೇಟೆ;-ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬ ದೇವಿಯ ಜಾತ್ರಾಮಹೋತ್ಸವವು ವಿಜೃಂಭಣೆಯಿಂದಿಗೆ ಜರುಗಿತು.
ವರ್ಷದಲ್ಲಿ ಎರಡು ಭಾರಿ ಆಚರಿಸಲಾಗುವ ಈ ಜಾತ್ರಾ ಮಹೋತ್ಸವವು ಬೇಸಿಗೆಯಲ್ಲಿ ಬುಧವಾರ ಮಳೆಗಾಲದಲ್ಲಿ ಮಂಗಳವಾರ ಬರುವ ಈ ಜಾತ್ರೆಗೆ ಬೇಡಿ ಭಕ್ತರ ಆಶೋತ್ತರಗಳನ್ನು ಪರಿಹರಿಸುವ ಏಕೈಕ ದೇವಿ ಎಂದೆ ಮಲೆನಾಡಿನ ವ್ಯಾಪ್ತಿಯಲ್ಲಿ ಪ್ರಖ್ಯಾತಿ ಹೊಂದಿ ನೆಲೆ ನಿಂತಿದ್ದಾಳೆ
.
ಯುವಕರು.ಯುವತಿಯರು ವಿವಾಹ ಯೋಗ ಕರುಣಿಸುವಂತೆ ಸಂತಾನಭಾಗ್ಯ ಹೀಗೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರೆ ಕೇವಲ ಅರು ತಿಂಗಳಲ್ಲಿ ಬೇಡಿದ ಭಕ್ತರ ಬೇಡಿಕೆಯನ್ನು ಈಡೇರಿಸುವ ಕರುಣಾಮಯಿ ತಾಯಿ ಮಾರಿಕಾಂಬೆ ಇಂದು ಬೇಸಿಗೆ ಜಾತ್ರೆಯಲ್ಲಿ ಈ ಹಿಂದೆ ಮಳೆಗಾಲದ ಜಾತ್ರೆಯಲ್ಲಿ ಮಾಡಿಕೊಂಡ ಪ್ರಾರ್ಥನೆ ಈಡೇರಿದ್ದು ಹರಿಕೆ ಕಾಣಿಕೆ ಸಮರ್ಪಿಸಿ ದೇವಿಯ ದರ್ಶನಾಶೀರ್ವಾದ ಪಡೆದು ಪುನೀತರಾದರು.
ಮುಂಜಾನೆಯಿಂದಲೇ ದೇವಿಗೆ ವಿಶೇಷ ಅಲಂಕಾರ ಪೂಜೆ ಮಹಾಮಂಗಳಾರತಿ ಹಣ್ಣು ಕಾಯಿ ಸಮರ್ಪಣೆಗೆ ಭಕ್ತರು ಸರತಿ ಸಾಲಿನಲ್ಲಿ ನಿಂತು ಸಲ್ಲಿಸುತ್ತಿದ್ದು ಕಂಡುಬಂತು.
ಜಾತ್ರಾ ಮಹೋತ್ಸವದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ಶಾಸಕ ಗೋಪಾಲಕೃಷ್ಣಬೇಳೂರು,ಭಾಗವಹಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.