ಶಿವಮೊಗ್ಗ: ಜನವರಿ. 23 : ಶಿವಮೊಗ್ಗ ತಾಲೂಕಿನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾ/ವರ್ಗದ ವಿದ್ಯಾರ್ಥಿಗಳಿಗೆ ಸಹಾಯಕ
ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ, ವಿದ್ಯಾನಗರ, ಶಿವಮೊಗ್ಗ ತಾಲೂಕು ಇವರ ಕಚೇರಿಯಿಂದ ಲ್ಯಾಪ್ಟಾಪ್ ನೀಡಲಾಗುತ್ತಿದೆ
ಎಂಬ ಅನಾಮದೇಯ ಹಾಗೂ ಮಧ್ಯವರ್ತಿಗಳಿಂದ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಸುಳ್ಳು ಕರೆಗಳು ಬರುತ್ತಿದ್ದು,
ಈ ಸುಳ್ಳು ಸುದ್ಧಿಗೆ ಸಾರ್ವಜನಿಕರು/ವಿದ್ಯಾರ್ಥಿಗಳು ಕಿವಿಗೊಡಬಾರದು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.