ಜ.22: ಕೃಷಿ ವಿವಿ ಘಟಿಕೋತ್ಸವ
ಶಿವಮೊಗ್ಗ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ೯ನೇ ಘಟಿಕೋತ್ಸವಕ್ಕೆ ಜನವರಿ 22ರಂದು ಇರುವಕ್ಕಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದು ಎಂದು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಚಾಲನೆ ನೀಡುವರು ಹಾಗೂ ಪದವಿ ಪೂರ್ಣಗೊಳಿಸಿದ ಪ್ರತಿಭಾವಂತರಿಗೆ ಪದವಿ ಪ್ರದಾನ ಮಾಡಲಿರುವರು. ಈ ಸಮಾರಂಭದಲ್ಲಿ ಸಮಾಜವಾದಿ ಚಿಂತಕ, ಮುತ್ಸದ್ದಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಿಗೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು.
ಕುವೆಂಪು ವಿವಿ ಘಟಿಕೋತ್ಸವ
ಶಿವಮೊಗ್ಗ: ಕುವೆಂಪು ವಿಶ್ವ ವಿದ್ಯಾಲಯದ ೩೪ನೇ ವಾರ್ಷಿಕ ಘಟಿಕೋತ್ಸವ ಜ.೨೨ ರಂದು ಬೆಳಗ್ಗೆ ೧೦.೩೦ಕ್ಕೆ ಶಂಕರಘಟ್ಟ ವಿಶ್ವ ವಿದ್ಯಾಲಯದ ಆವರಣದಲ್ಲಿರುವ ಬಸವ ಸಭಾಭವನದಲ್ಲಿ ಹಮ್ಮಿಕೊಳ್ಳ ಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಘಟಿಕೋತ್ಸವದ ಅಗ್ರಾಸನವನ್ನು ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾದ ಥಾವg ಚಂದ್ ಗೆಹ್ಲೊಟ್ ವಹಿಸಲಿದ್ದು, ಸಚಿವ ಹಾಗೂ ವಿವಿಯ ಸಹ ಕುಲಾಧಿಪತಿ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿದ್ದು, ಮುಖ್ಯ ಅತಿಥಿಯಾಗಿ ಹೈದರಾಬಾದ್ ವಿವಿ ನಿವೃತ್ತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಘಟಿಕೋತ್ಸ ಭಾಷಣ ಮಾಡಲಿದ್ದಾರೆ ಎಂದರು.
ಜ.22-26: ದೀಪೋತ್ಸವ ಸಮಾರಂಭ
ಹಾರನಹಳ್ಳಿಯ ಶ್ರೀಕ್ಷೇತ್ರ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಚೌಕಿಮಠದಲ್ಲಿ ಜ. ೨೨ರಿಂದ ೨೬ರವರೆಗೆ ಹರಪುರಾ ಧೀಶನ ದೀಪೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಶ್ರೀ ನೀಲಕಂಠ ಮಹಾಸ್ವಾಮಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜ.೨೧ರಿಂದ ೨೬ರವರೆಗೆ ಬೆಳಗ್ಗೆ ೬ರಿಂದ ೯ ಗಂಟೆಯವರೆಗೆ ಕರ್ತೃ ಗದ್ದು ಗೆಗೆ ವಿಶೇಷ ಪೂಜೆ, ಮಹಾರುದ್ರಾಭಿ ಷೇಕ, ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಮುತ್ತೈದೆಯರಿಗೆ ಉಡಿ ತುಂಬುವುದು ಕುಂಬೋತ್ಸವ, ಬಾಗಿನ ನೀಡಲಾಗು ವುದು. ಪ್ರತಿದಿನ ಸಂಜೆ ೭ ಗಂಟೆಗೆ ಮಾನ್ವಿ ತಾಲೂಕಿನ ಸುಕ್ಷೇತ್ರ ಬೆಟ್ಟದೂರಿನ ಶ್ರೀ ಪ್ರಭುಲಿಂಗೇಶ್ವರ ಮಠದ ಶ್ರೀ ಮಹಾದೇವ ಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಜ. ೨೨ರಂದು ಸಂಜೆ ೫.೩೦ಕ್ಕೆ ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖ ದಲ್ಲಿ ಹರಪುರಾಧೀಶನ ದೀಪೋತ್ಸವ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಶಾಸಕರಾದ ಬಿ.ವೈ. ವಿಜಯೇಂದ್ರ, ಶಾರದಾ ಪೂರ್ಯಾನಾಯ್ಕ್, ಗೋಪಾಲಕೃಷ್ಣ ಬೇಳೂರು ಆಗಮಿಸಲಿದ್ದಾರೆ ಎಂದರು.
ಜ.22: ಸಂಗೀತ ನೃತ್ಯೋತ್ಸವ
ಶಿವಮೊಗ್ಗ: ಬೆಂಗಳೂರಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಜ. ೨೨ರಂದು ಬೆಳಗ್ಗೆ ೧೦.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಂಗೀತ ನೃತ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಸದಸ್ಯ ಸಂಚಾಲಕಿ ಡಾ. ಬಿ.ವಿ. ಗೀತಾ ಇಂದು ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು.