ಶಿವಮೊಗ್ಗ ಜ.21 :ರಿಪ್ಪನ್ಪೇಟೆ;-ಶಿವಮೊಗ್ಗ ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಆನೆಗಳ ಹಾವಳಿಯಿಂದಾಗಿ ರೈತರ ಸಮೂಹ ಕೆಂಗಟ್ಟಿದ್ದು ತಕ್ಷಣವೇ ಆರಣ್ಯ ಇಲಾಖೆಯವರು ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಜನವರಿ ೨೪ ರಂದು ಜಿಲ್ಲಾ ಮುಖ್ಯ ಆರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಎದುರು ರೈತರಿಂದ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ತಾಲ್ಲೂಕ್ ಪಂಚಾಯ್ತಿ ಮಾಜಿ ಆಧ್ಯಕ್ಷ ವೀರೇಶ ಅಲುವಳ್ಳಿ ತಿಳಿಸಿದರು.
ರಿಪ್ಪನ್ಪೇಟೆಯ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಹೊಸನಗರ ತಾಲ್ಲೂಕ್ ಬಸವಾಪುರ ರೈತ ತಿಮ್ಮಪ್ಪನ ಪ್ರಾಣವನ್ನು ಆನೆಗಳು ಬಲಿ ಪಡೆದಿದ್ದು.ಪ್ರತಿನಿತ್ಯ ರೈತರು ಶಾಲಾ ಕಾಲೇಜ್ ವಿದ್ಯಾರ್ಥಿಗಳು ನಾಗರೀಕರು ಜೀವಭಯದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಆನೆಗಳು ಆಪಾರ ಪ್ರಮಾಣದ ಬೆಳೆ ನಾಶ.ರೈತರ ಪ್ರಾಣಬಲಿಪಡೆಯುತ್ತಿದ್ದರೂ ಕೂಡಾ ಅರಣ್ಯ ಇಲಾಖೆಯವರು ಕಣ್ಣಿದ್ದರು ಕುರುಡರ ಹಾಗೆ ವರ್ತಿಸುತ್ತಿರುವ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಯನ್ನು ಖಂಡಿಸಿ ಜನವರಿ ೨೪ ರಂದು ಶುಕ್ರವಾರ ಶಿವಮೊಗ್ಗ ಸಿಸಿಎಫ್ ಕಛೇರಿಯ ಎದುರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಹರತಾಳು ಹಾಲಪ್ಪ ನವರ ಸಂಚಾಲಕತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ.ಈ ಪ್ರತಿಭಟನೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ,ಶಿವಮೊಗ್ಗ ಗ್ರಾಮಾಂತರ ಶಾಸಕಿ
ಶಾರದಾಪೂರ್ಯಾನಾಯ್ಕ್,ವಿಧಾನಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ,ಡಿ.ಎಸ್.ಆರುಣ್,ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ,ಮೇಘರಾಜ್,ಮಾಜಿ ಶಾಸಕರಾದ ಬಿ.ಸ್ವಾಮಿರಾವ್,ಕೆ.ಬಿ.ಆಶೋಕ್ನಾಯ್ಕ್,ಕೆ.ಜಿ.ಕುಮಾರಸ್ವಾಮಿ,ಜಿ.ಪಂ.ಮಾಜಿ ಸದಸ್ಯ ಹೊನಗೋಡು ರತ್ನಾಕರ,ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ,ಸೇರಿದಂತೆ ಜಿಲ್ಲೆಯ ರೈತ ಮುಖಂಡರು.ಜಿಲ್ಲಾ ಬಿಜೆಪಿ
ಮುಖಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು ಮತ್ತು ಬಸವಾಪುರ,ಹಾರೋಹಿತ್ತಲು,ಬೆಳ್ಳೂರು,ಅರಸಾಳು,ಕೆಂಚನಾಲ,ಚೋರಡಿ ತುಪ್ಪೂರು,ಹೂಸೂರು ಇನ್ನಿತರ ಗ್ರಾಮಗಳಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳಲಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕ್ ಉಪಾಧ್ಯಕ್ಷ ಎಂ.ಬಿ.ಮಂಜುನಾಥ,ಜಿಲ್ಲಾ ಬಿಜೆಪಿ ಮುಖಂಡ ಎಂ.ಸುರೇಶ್ಸಿಂಗ್,ರೈತಮೋರ್ಚಾ ಮುಖಂಡ ಮುರುಳಿ ಕೆರೆಹಳ್ಳಿ,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ,ಮಹಾಶಕ್ತಿಕೇಂದ್ರದ ಪ್ರಧಾನಕಾರ್ಯದರ್ಶಿ ಸುಂದರೇಶ್,ಯೋಗೇಂದ್ರಗೌಡರು,ರಾಜೇಶ್ಜೈನ್ ಇನ್ನಿತರರು ಹಾಜರಿದ್ದರು.