ಶಿವಮೊಗ್ಗ/ಮೈಸೂರು: ಕಡೂರು ಮತ್ತು ಬೀರೂರು ನಿಲ್ದಾಣದ ಯಾರ್ಡ್’ಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ, ಒಂದು ರೈಲು ಭಾಗಶಃ ರದ್ದು ಹಾಗೂ ಎರಡು ರೈಲುಗಳ ಮರುವೇಳಾಪಟ್ಟಿಯನ್ನು ನಿಗದಿ ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ಪ್ರಕಟಿಸಿದ್ದು, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು, ಮರು ವೇಳಾಪಟ್ಟಿ ನಿಗದಿ/ನಿಯಂತ್ರಿಸಲಾಗುತ್ತಿದೆ.
ಈ ರೈಲು ಭಾಗಶಃ ರದ್ದು:
- ಜನವರಿ 25 ಮತ್ತು ಫೆಬ್ರವರಿ 1, 2025 ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಬೀರೂರು ಮತ್ತು ಚಿಕ್ಕಮಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲಿನ ಸೇವೆ ಬೀರೂರಿನಲ್ಲಿ ಕೊನೆಗೊಳ್ಳಲಿದೆ.
ರೈಲುಗಳ ಮರು ವೇಳಾಪಟ್ಟಿ/ನಿಯಂತ್ರಣ:
- ಜನವರಿ 21 ಮತ್ತು ಫೆಬ್ರವರಿ 4 ರಂದು 16213 ಸಂಖ್ಯೆಯ ಪ್ರಾರಂಭವಾಗುವ ರೈಲು ಅರಸೀಕೆರೆ-ಹುಬ್ಬಳ್ಳಿ ಡೈಲಿ ಎಕ್ಸ್’ಪ್ರೆಸ್ ರೈಲು ಅರಸೀಕೆರೆಯಿಂದ 75 ನಿಮಿಷ ತಡವಾಗಿ ಹೊರಡಲಿದೆ.
- ಜನವರಿ 21 ಮತ್ತು ಫೆಬ್ರವರಿ 4 ರಂದು ಪ್ರಾರಂಭವಾಗುವ 56906 ಸಂಖ್ಯೆಯ ರೈಲು ಹುಬ್ಬಳ್ಳಿ-ಸೋಲಾಪುರ ಡೈಲಿ ಪ್ಯಾಸೆಂಜರ್ ರೈಲು ಹುಬ್ಬಳ್ಳಿಯಿಂದ 75 ನಿಮಿಷ ತಡವಾಗಿ ಹೊರಡಲಿದೆ.
- ಜನವರಿ 25 ಮತ್ತು ಫೆಬ್ರವರಿ 1 ರಂದು ಪ್ರಾರಂಭವಾಗುವ 16214 ಸಂಖ್ಯೆಯ ರೈಲು ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್’ಪ್ರೆಸ್ ರೈಲು ಹುಬ್ಬಳ್ಳಿಯಿಂದ 75 ನಿಮಿಷ ತಡವಾಗಿ ಹೊರಡಲಿದೆ. ಮತ್ತು ಈ ರೈಲು ಮಾರ್ಗ ಮಧ್ಯ 60 ನಿಮಿಷ ನಿಯಂತ್ರಣವಾಗಲಿದೆ.