ಶಿವಮೊಗ್ಗ, ಜ.20:
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಡಿ , ಶಿಕಾರಿಪುರ ತಾಲೂಕಿನ ಹೂಸಗೊದ್ದನಕೊಪ್ಪ ಗ್ರಾಮದಲ್ಲಿ ಗುಂಪು ಚರ್ಚೆ ಮತ್ತು ಪ್ರಾತ್ಯಕ್ಷಿಕೆಯ ಅಡಿಯಲ್ಲಿ ರೈತರಿಗೆ ಮಾಹಿತಿ ನೀಡಲು, ಸೋಲಾರ್ ಇನ್ಸೆಕ್ಟ ಟ್ರಾಪ್ ಬಳಕೆಯ ಬಗ್ಗೆ ತಿಳಿಸಿದರು.
ಇದನ್ನು ಖುದ್ದಾಗಿ ತಾವು ಬೆಳೆದಂತಹ ಬೆಳೆ ಸಂಗ್ರಹಾಲಯದಲ್ಲಿ ರೈತರನ್ನು ಕರೆದುಕೊಂಡು ಹೋಗಿ ತೋರಿಸಿದರು.. ಹೊಲಗಳಲ್ಲಿ ಕೀಟ ನಿಯಂತ್ರಣಕಾರಿ ಅಸ್ತ್ರವಾಗಿ ಕೆಲಸ ಮಾಡುತ್ತದೆ . ಇದರಲ್ಲಿರುವ ಸೋಲಾರ್ ಪ್ಯಾನೆಲ್ ಸೂರ್ಯನ ಕಿರಣಗಳನ್ನು ಸ್ವೀಕರಿಸಿ ಚಾರ್ಜ್ ಅನ್ನು ಒದಗಿಸುತ್ತದೆ . ಕತ್ತಲಿನ ವೇಳೆ ಸೋಲಾರ್ ಚಾರ್ಜ ಮುಖಾಂತರ ಬಣ್ಣದ ಬಲ್ಬಬೆಳಗುತ್ತದೆ.
ಈ ಬಲ್ಬ್ ಎರಡು ಬಣ್ಣಗಳಲ್ಲಿ ಬೆಳಗುತ್ತದೆ, ಈ ಬೆಳಕಿನಿಂದ ಎಲ್ಲಾ ಹುಳುಗಳು ಆಕರ್ಷಿತವಾಗಿ, ಟ್ರ್ಯಪ್ ಒಳಗೆ ಬಂದು ಬೀಳುತ್ತವೆ. ಬಂದು ಬಿದ್ದ ಹುಳಗಳು ಮತ್ತೆ ಹಾರದಿರಲು,ಟ್ರ್ಯಾಪ್ ಒಳಗೆ ನೀರಿನ ಜೊತೆಗೆ ಶಾಂಪೂ ಅಥವಾ ಸೋಪಿನ ಪೌಡರನ್ನು ಮಿಕ್ಸ್ ಮಾಡಲಾಗುತ್ತದೆ. ಮಳೆಗಾಲದಲ್ಲಿ ಅಥವಾ ಬಿಸಿಲು ಕಡಿಮೆ ಇದ್ದ ಸಮಯದಲ್ಲಿ ಮೊಬೈಲ್ ಚಾರ್ಜ್ ಅಥವಾ ಪವರ್ ಬ್ಯಾಂಕ್ ಅನ್ನು ಬಳಸಿ ಇದನ್ನು ಚಾರ್ಜ್ ಮಾಡಬಹುದು.
ಇದರ ಅಳವಡಿಕೆಯಿಂದ ಶೇಕಡ 70ರಷ್ಟು ಕೀಟ ನಿಯಂತ್ರಣ ಕಂಡು ಬರುತ್ತದೆ. ಸಾಮಾನ್ಯವಾಗಿ ಒಂದು ಎಕರೆಗೆ ಬಂದು ಟ್ರ್ಯಪ್ ಬಳಸಲಾಗುತ್ತದೆ. ಎಲ್ಲಾ ಬೆಳೆಗಳಿಗೂ ಇದು ಬಹು ಉತ್ತಮವಾಗಿದೆ ಅದರಲ್ಲೂ ತೋಟಗಾರಿಕೆ ಬೆಳೆಗಳಿಗೆ ಇದು ಪ್ರಮುಖ ಕೀಟ ರಕ್ಷಕವಚ., ಇನ್ನು ಇದರ ಬೆಲೆ ರೂ. 1200-1500… ಅನೇಕ ಫೆರಮೋನ್ ಕೀಟ ಲ್ಯೂರ್ ಇದರಲ್ಲಿ ಬಳಸಬಹುದಾಗಿದೆ. ಇದರ ಬಳಕೆಯಿಂದ ಬೆಳೆ ನಷ್ಟ ತಡೆಗಟ್ಟಬಹುದು ಹಾಗೂ ಇಳುವರಿಯನ್ನು ಹೆಚ್ಚಿಸಬಹುದೆಂದು ರೈತರಿಗೆ ತಿಳಿಸಿದರು.