ಶಿವಮೊಗ್ಗ ಜ.23 :
ಉತ್ತಮ ಗುರಿ ಇಟ್ಟುಕೊಂಡು ಪ್ರಮಾಣಿಕ ಪ್ರಯತ್ನ ಮಾಡಿದಾಗ ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಸಿಗಲು ಸಾಧ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ ಹೇಳಿದ್ದಾರೆ.
ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ, ಭಾರತ ಸಂವಿಧಾನದ ವಜ್ರ ಮಹೋತ್ಸವ ಮತ್ತು ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ “ರಾಷ್ಟ್ರೀಯ ಯುವದಿನ”ದ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ‘ರಸಪ್ರಶ್ನೆ ಸ್ಪರ್ಧಾ’ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಜೀವನಕ್ಕೆ ಅಗತ್ಯವಾಗಿರುವ ಸ್ಪರ್ಧಾ ಮನೋಭಾವವನ್ನು ರಸಪ್ರಶ್ನೆ ಕಾರ್ಯಕ್ರಮಗಳು ಬೆಳೆಸುತ್ತವೆ. ದೈಹಿಕ ಚಟಿವಟಿಕೆಗಳು ದೈಹಿಕ ಆರೋಗ್ಯ ಕಾಪಾಡುತ್ತವೆ. ಇದೇ ರೀತಿ ಮನೋ ಬೆಳವಣಿಗೆಗೆ ಇಂಥ ಸ್ಪರ್ಧೆಗಳು ಬೇಕು ಎಂದರು. ಪಠ್ಯೇತರ ಜ್ಞಾನ ಬೆಳೆಯಲು ಹಾಗೂ ನಿಮ್ಮ ಸಾಮರ್ಥ್ಯ ಸಾಭೀತು ಪಡಿಸಲು ಇದೊಂದು ಉತ್ತಮ ವೇದಿಕೆ ಎಂದು ಹೇಳಿದರು.
ವೇದಿಕೆಯಲ್ಲಿ ಪೂಜ್ಯ ಸಂವಿಧಾನನಾಥ ಸ್ವಾಮೀಜಿ, ರಾಜಶೇಖರ ನಾಥ ಸ್ವಾಮೀಜಿ, ಶರಾವತಿ ನಗರದ ಆದಿಚುಂಚನಗಿರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಸ್.ವಿ. ಗುರುರಾಜ್, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ದಿವ್ಯ, ಗಿರೀಶ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಕೊಳಗಿ ವಾಸಪ್ಪ ಗೌಡ, ನಟರಾಜ್ ವೇದಿಕೆಯಲ್ಲಿ ಇದ್ದರು.,