ಶಿವಮೊಗ್ಗ, ಜ.17 : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹರಿತವಾದ ಆಯುಧದಿಂದ ಚುಚ್ಚಿ ಹೊಸಳ್ಳಿಯ ಕಾರ್ ಮೆಕ್ಯಾನಿಕ್ನನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಘೋಷಿಸಿದೆ.
ಟ್ರ್ಯಾಕ್ಟರ್ ಚಾಲಕನಿಗೆ ಹಲ್ಲೆ: ಅರಣ್ಯ ಇಲಾಖೆಯ ವಾಹನ ಚಾಲಕನ ವಿರುದ್ಧ ದೂರು ದಾಖಲು
ಟ್ರ್ಯಾಕ್ಟರ್ ಚಾಲಕನಿಗೆ ಹಲ್ಲೆ: ಅರಣ್ಯ ಇಲಾಖೆಯ ವಾಹನ ಚಾಲಕನ ವಿರುದ್ಧ ದೂರು ದಾಖಲು
ಜಿಕ್ರುಲ್ಲಾ (28 ) ಕೊಲೆಯಾದವನು. ಕೊಲೆ ಮಾಡಿ ಶಿಕ್ಷೆಗೊಳಗಾದವರೆಂದರೆ ಮಿಳಘಟ್ಟದ ಶಹಬಾಜ್ ಶರೀಫ್ (20 ) ಟೆಂಪೋ ಸ್ಟ್ಯಾಂಡ್ ಬಳಿಯ ವಸೀಂ ಅಕ್ರಂ ಅಲಿಯಾಸ್ ಉಂಗ್ಲಿ (20 ), ಬುದ್ಧನಗರದ ವಸೀಂ ಅಕ್ರಂ ಅಲಿಯಾಸ್ ಕಾಲಾ ವಸೀಂ (20 ) ಮತ್ತು ಮುರಾದ್ನಗರದ ಫಯಾಜ್ ಉಲ್ಲಾ ರೆಹಮಾನ್ ಅಲಿಯಾಸ್ ರುಮಾನ್ (23 ).
ಮದ್ಯ ಸೇವನೆ ವೇಳೆ ಗೆಳೆಯರರಲ್ಲಿ ಗಲಾಟೆ: ಓರ್ವ ಆಸ್ಪತ್ರೆಗೆ ದಾಖಲು
ಮದ್ಯ ಸೇವನೆ ವೇಳೆ ಗೆಳೆಯರರಲ್ಲಿ ಗಲಾಟೆ: ಓರ್ವ ಆಸ್ಪತ್ರೆಗೆ ದಾಖಲು
ಬುದ್ಧನಗರದಲ್ಲಿ ಕಾರ್ ಪಾರ್ಕಿಂಗ್ ಮಾಡುವ ವಿಚಾರವಾಗಿ ಗ್ಯಾಸ್ ಇಮ್ರಾನ್ ನೊಂದಿಗೆ ಜಗಳ ಮಾಡಿಕೊಂಡಿದ್ದನು. ಹಾಗೂ ಈ ಹಿಂದೆ ಟ್ವಿಸ್ಟ್ ಇಮ್ರಾನ್ನೊಂದಿಗೂ ಗಲಾಟೆ ಮಾಡಿಕೊಂಡಿದ್ದನು. ಈ ದ್ವೇಷದ ಹಿನ್ನೆಲೆಯಲ್ಲಿ 2022 ರ ಮಾ. 19 ರಂದು ರಾತ್ರಿ ಎನ್ ಟಿ ರಸ್ತೆ ಫಲಕ್ ಶಾದಿ ಮಹಲ್ ಪಕ್ಕ ರಸ್ತೆಯಲ್ಲಿ ಜಿಕ್ರುಲ್ಲಾ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತ ನಿಂತಿದ್ದಾಗ ಈ ಮೇಲಿನ ಆರೋಪಿಗಳು ಹರಿತವಾದ ಆಯುಧದಿಂದ ಜಿಕ್ರುಲ್ಲಾ ನ ಮೈಕೈ ಗೆ ಚುಚ್ಚಿ, ತಲೆಗೆ ಹೊಡೆದು ತೀವ್ರ ಸ್ವರೂಪದ ಮಾರಣಾಂತಿಕ ಹಲ್ಲೆ ಮಾಡಿದ್ದರು.
ಜಿಕ್ರುಲ್ಲಾನನ್ನು ಕೂಡಲೇ ಚಿಕಿತ್ಸೆಗೆಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮರುದಿನ ಆತ ಮೃತಪಟ್ಟಿದ್ದ. ಮೃತನ ಸಹೋದರ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಆಗಿನ ತನಿಖಾಧಿಕಾರಿ ಸಿಪಿಐ ಅಂಜನ್ಕುಮಾರ್ ತನಿಖೆ ಪೂರೈಸಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.