ಶಿವಮೊಗ್ಗ ಜ.15 :: ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಜ.೧೨ರಂದು ನಡೆದ ಚುನಾವಣೆಯಲ್ಲಿ ಮಹಿಳಾ ಮೀಸಲು ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದೆ. ಆದರೆ ವೈಯಕ್ತಿಕ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿ ನಂತರ ನಾಮಪತ್ರ
ಹಿಂತೆಗೆದುಕೊಳ್ಳಲು ಮುಂದಾದಾಗ ಅವಧಿ ಮೀರಿದ್ದರಿಂದ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ್ದೆ. ನಾನು ಚುನಾವಣಾ ಕಣದಿಂದ ಹಿಂದೆ ಸರಿದು ನಿವೃತ್ತರಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದಿದ್ದರೂ, ಓಡಾಟ ನಡೆಸಿ ಮತ ಕೇಳದಿದ್ದರೂ ಅಭಿಮಾನ, ಪ್ರೀತಿಯಿಂದ
ಚುನಾವಣೆಯಲ್ಲಿ ೩೮೪ ಮತ ನೀಡಿದ್ದೀರಿ, ಮತದಾನ ಮಾಡಿದ ಮತದಾರರಿಗೆ ಕೃತಜ್ಞತೆಗಳು ಎಂದು ಪೂರ್ಣಿಮಾ ಸುನೀಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.