ಬೆಂಗಳೂರು/ಮೈಸೂರು: ನಿಟ್ಟೂರು ಮತ್ತು ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 64ರಲ್ಲಿ ತಾತ್ಕಾಲಿಕ ಗರ್ಡರ್’ಗಳನ್ನು ಸೇರಿಸಲು ಮತ್ತು ತೆಗೆದುಹಾಕಲು ಎಂಜಿನಿಯರಿAಗ್ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಕಾಮಗಾರಿ ನಡೆಯುವ ಹಿನ್ನೆಲೆಯಲ್ಲಿ ಹಲವು ರೈಲುಗಳು ತಾತ್ಕಾಲಿಕವಾಗಿ ರದ್ದಾಗಲಿದ್ದು, ಇನ್ನು ಕೆಲವು ರೈಲುಗಳು ಭಾಗಷಃ ರದ್ದಾಗಲಿದೆ.
ಯಾವೆಲ್ಲಾ ರೈಲುಗಳ ತಾತ್ಕಾಲಿಕ ರದ್ದು?(ಜನವರಿ 2ರಿಂದ 9ರವರೆಗೂ)
ತುಮಕೂರು-ಚಾಮರಾಜನಗರ ಡೈಲಿ ಪ್ಯಾಸೆಂಜರ್ ಸ್ಪೆಷಲ್ (07346)
ಚಾಮರಾಜನಗರ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ (07328)
ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ (16239)
ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (16240)
ತುಮಕೂರು-ಕೆಎಸ್’ಆರ್ ಬೆಂಗಳೂರು ಮೆಮು ಸ್ಪೆಷಲ್ (06576)
ಕೆಎಸ್’ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06575)
ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್ ಸಿಟಿ ಡೈಲಿ ಎಕ್ಸ್’ಪ್ರೆಸ್ (16579)
ಶಿವಮೊಗ್ಗ ಟೌನ್-ಯಶವಂತಪುರ ಇಂಟರ್ ಸಿಟಿ ಡೈಲಿ ಎಕ್ಸ್’ಪ್ರೆಸ್ (16580) ರೈಲು
ಯಾವೆಲ್ಲಾ ರೈಲುಗಳು ಭಾಗಶಃ ರದ್ದು?
ಜನವರಿ 02 ಮತ್ತು 09, 2025 ರಂದು ಕೆಎಸ್’ಆರ್ ಬೆಂಗಳೂರು-ತುಮಕೂರು ಮೆಮು ವಿಶೇಷ (06571) ರೈಲು ಹಿರೇಹಳ್ಳಿ-ತುಮಕೂರು ನಿಲ್ದಾಣಗಳ ನಡುವೆ, ತುಮಕೂರು-ಕೆಎಸ್’ಆರ್ ಬೆಂಗಳೂರು ಮೆಮು ವಿಶೇಷ (06572) ರೈಲು ತುಮಕೂರು-ಹಿರೇಹಳ್ಳಿ ನಿಲ್ದಾಣಗಳ ನಡುವೆ, ತಾಳಗುಪ್ಪ-ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ (20652) ರೈಲು ಅರಸೀಕೆರೆ-ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ, ಕೆಎಸ್’ಆರ್ ಬೆಂಗಳೂರು-ಧಾರವಾಡ ಸಿದ್ಧಗಂಗಾ ಡೈಲಿ ಸೂರ್ಪ ಫಾಸ್ಟ್ ಎಕ್ಸ್’ಪ್ರೆಸ್ (12725) ರೈಲು ಕೆಎಸ್’ಆರ್ ಬೆಂಗಳೂರು-ಅರಸೀಕೆರೆ ನಿಲ್ದಾಣಗಳ ನಡುವೆ, ಧಾರವಾಡ-ಕೆಎಸ್’ಆರ್ ಬೆಂಗಳೂರು ಸಿದ್ಧಗಂಗಾ ಡೈಲಿ ಸೂರ್ಪ ಫಾಸ್ಟ್ ಎಕ್ಸ್’ಪ್ರೆಸ್ (12726) ರೈಲು ಅರಸೀಕೆರೆ-ಕೆಎಸ್’ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಮತ್ತು ತುಮಕೂರು-ಯಶವಂತಪುರ ಮೆಮು ವಿಶೇಷ (06201) ರೈಲು ತುಮಕೂರು-ಹಿರೇಹಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿವೆ.
ರೈಲುಗಳ ಮಾರ್ಗ ಬದಲಾವಣೆ
ಜನವರಿ 1 ಮತ್ತು 8 ರಂದು ವಾಸ್ಕೋ ಡ ಗಾಮಾದಿಂದ ಹೊರಡುವ ರೈಲು ಸಂಖ್ಯೆ 17310 ವಾಸ್ಕೋ ಡ ಗಾಮಾ-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು ಅರಸೀಕೆರೆ, ಹಾಸನ, ನೆಲಮಂಗಲ ಮತ್ತು ಯಶವಂತಪುರ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಈ ರೈಲು ತಿಪಟೂರು ಮತ್ತು ತುಮಕೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆ ಇರುವುದಿಲ್ಲ.
ರೈಲು ಸಂಖ್ಯೆ 22687 ಮೈಸೂರು-ವಾರಣಾಸಿ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ರೈಲು ಜನವರಿ 2 ಮತ್ತು 9, 2025 ರಂದು ಮೈಸೂರಿನಿಂದ ಹೊರಡುವ ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ತುಮಕೂರು ನಿಲ್ದಾಣದಲ್ಲಿ ಇರುವುದಿಲ್ಲ.
ರೈಲು ಸಂಖ್ಯೆ 20667 ಯಶವಂತಪುರ-ಜೈಪುರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ರೈಲು ಜನವರಿ 2 ಮತ್ತು 9, 2025 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ಈ ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲಿನ ನಿಯಮಿತ ನಿಲುಗಡೆ ತುಮಕೂರು ನಿಲ್ದಾಣದಲ್ಲಿ ತಪ್ಪಿರುತ್ತದೆ.
ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಜನವರಿ 2 ಮತ್ತು 9, 2025 ರಂದು ಮೈಸೂರಿನಿಂದ ಹೊರಡುವ ಈ ರೈಲು ಕೆಎಸ್’ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸೀಕೆರೆ ಮತ್ತು ದಾವಣಗೆರೆ ನಿಲ್ದಾಣಗಳ ಮೂಲಕ ಚಲಿಸಲಿದೆ.
ಜನವರಿ 2 ಮತ್ತು 9, 2025 ರಂದು ರೈಲು ಸಂಖ್ಯೆ 17326 ಮೈಸೂರು-ಬೆಳಗಾವಿ ವಿಶ್ವಮಾನವ ಡೈಲಿ ಎಕ್ಸ್’ಪ್ರೆಸ್ ರೈಲು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸೀಕೆರೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ರೈಲು ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆ ತಪ್ಪಿರುತ್ತದೆ.
ಈ ರೈಲುಗಳ ನಿಯಂತ್ರಣ
ಡಿ.31 ಮತ್ತು ಜನವರಿ 7, 2025 ರಂದು ಬಿಕಾನೇರ್ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16588 ಬಿಕಾನೇರ್-ಯಶವಂತಪುರ ದ್ವಿ-ಸಾಪ್ತಾಹಿಕ ಎಕ್ಸ್’ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 120 ನಿಮಿಷ ನಿಯಂತ್ರಿಸಲಾಗುವುದು.
ಜ.2 ಮತ್ತು 9 ರಂದು ತಮ್ಮ ಮೂಲ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12629 ಯಶವಂತಪುರ-ಹಜರತ್ ನಿಜಾಮುದ್ದೀನ್ ದ್ವಿ-ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್’ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 50 ನಿಮಿಷ, ರೈಲು ಸಂಖ್ಯೆ 20651 ಕೆಎಸ್’ಆರ್ ಬೆಂಗಳೂರು-ತಾಳಗುಪ್ಪ ಡೈಲಿ ಸೂರ್ಪ ಫಾಸ್ಟ್ ಎಕ್ಸ್’ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ10 ನಿಮಿಷ, ರೈಲು ಸಂಖ್ಯೆ 17325 ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಎಕ್ಸ್’ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 30 ನಿಮಿಷ ಮತ್ತು ರೈಲು ಸಂಖ್ಯೆ 07345 ಚಾಮರಾಜನಗರ-ತುಮಕೂರು ದೈನಂದಿನ ಪ್ಯಾಸೆಂಜರ್ ರೈಲು ಮಾರ್ಗ ಮಧ್ಯದಲ್ಲಿ 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
ಸಮಯ ಮರುನಿಗದಿ
ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ ಡ ಗಾಮಾ ಡೈಲಿ ಎಕ್ಸ್’ಪ್ರೆಸ್ ಜನವರಿ 2 ಮತ್ತು 9 ರಂದು ಯಶವಂತಪುರ ನಿಲ್ದಾಣದಿಂದ 30 ನಿಮಿಷ ತಡವಾಗಿ ಹೊರಡಲಿದೆ.