ಶಿವಮೊಗ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ ಗ್ಯಾಂಗ್’ನ ಮತ್ತೋರ್ವ ಆರೋಪಿ ಲಕ್ಷ್ಮಣ್ ಶಿವಮೊಗ್ಗ ಜೈಲಿನಿಂದ ರಿಲೀಸ್ ಆಗಿದ್ದಾನೆ.
ಪ್ರಕರಣದ ಎ-12 ಆಗಿದ್ದ ಲಕ್ಷ್ಮಣ್ ಮತ್ತು ಎ-6 ಜಗದೀಶ್ ಆಗಸ್ಟ್ ೨೮ ರಲ್ಲಿ ಶಿವಮೊಗ್ಗದ ಓತಿಘಟ್ಟದಲ್ಲಿರುವ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದರು. ರೌಡಿಶೀಟರ್ ನಾಗ ನ ಜೊತೆ ಆರೋಪಿ ನಟ ದರ್ಶನ್ ಕಾಣಿಸಿಕೊಂಡ ಪ್ರಕರಣದಲ್ಲಿ ಡಿಗ್ಯಾಂಗ್ ನ 12 ಜನರನ್ನ ರಾಜ್ಯದ ಹಲವು ಜೈಲ್ ಗಳಿಗೆ ಶಿಫ್ಟ್ ಮಾಡಲಾಗಿತ್ತು.
ಇಂದು ಲಕ್ಷ್ಮಣ್ ಗೆ ಜಾಮೀನು ದೊರೆತಿದೆ. ಜಾಮೀನು ದೊರೆತ ಹಿನ್ನಲೆಯಲ್ಲಿ ಲಕ್ಷ್ಮಣ್ ಜಾಮೀನಿನ ಮೇಲೆ ಬಿಡುಗಡೆ ಆಗಿದೆ.