ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ 2024ರ ಒಂದು ವರ್ಷದ ಅವಧಿಯಲ್ಲಿ ದಾಖಲಾಗಿದ್ದ 612 ವಿವಿಧ ರೀತಿಯ ವಸ್ತು ಕಳ್ಳತನ ಪ್ರಕರಣಗಳಲ್ಲಿ ಜಿಲ್ಲಾ ಪೊಲೀಸರು 298 ಪ್ರಕರಣಗಳನ್ನು ಬೇಧಿಸಿ, ಅವರುಗಳ ಮಾಲೀಕರಿಗೆ ವಾಪಾಸ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತಂತೆ ಡಿಎಆರ್ ಮೈದಾನದಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ಮಾಹಿತಿ ನೀಡಿ, ನಂತರ ಮಾಲೀಕರಿಗೆ ಆಯಾ ವಸ್ತುಗಳನ್ನು ಮರಳಿ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 2024ರ ಜನವರಿ 16ರಿಂದ ಡಿಸೆಂಬರ್ 16ರವರೆಗೂ ಜಿಲ್ಲೆಯಾದ್ಯಂತ 612 ವಿವಿಧ ಕಳುವು ಪ್ರಕರಣಗಳು ದಾಖಲಾಗಿದ್ದು, 298 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ಅವಧಿಯಲ್ಲಿ 3,76,99,299 ಹಣ ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
3,22, 37,654 ಮೌಲ್ಯಗಳ ಎಲೆಕ್ಟಾçನಿಕ್ಸ್ ವಸ್ತುಗಳು, ಜಾನುವಾರು, ಅಡಿಕೆ, ಬಂಗಾರ, ಬೆಳ್ಳಿ, ಮೊಬೈಲ್ ಫೋನ್, ವಾಹನಗಳು ಮೊದಲಾದ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
ಇನ್ನು, ಹಿಂದಿನ ವರ್ಷದ 54 ಪ್ರಕರಣಗಳು ಈ ವರ್ಷ ಪತ್ತೆಯಾಗಿದ್ದು, ಇದರಲ್ಲಿ 26 ಮನೆಕಳ್ಳತನ, 11 ಸಾಮಾನ್ಯಕಳವು, 17 ವಾಹನ ಸೇರಿದಂತೆ 54 ಪ್ರಕರಣಗಳು ಪತ್ತೆಯಾಗಿದೆ ಇವುಗಳು ಸೇರಿ 298 ಪ್ರಕರಣಗಳ ಪತ್ತೆಯಾಗಿದೆ.
ಪತ್ತೆಯಾದ ವಿವಿಧ ರೀತಿಯ ವಸ್ತುಗಳನ್ನು ಅವುಗಳ ಮಾಲೀಕರಿಗೆ ಎಸ್’ಪಿ ಅವರು ಮರಳಿ ಹಸ್ತಾಂತರ ಮಾಡಿದ್ದಾರೆ. ಅಲ್ಲದೇ, ಈ ಎಲ್ಲಾ ಪತ್ತೆಯ ತನಿಖಾ ಕಾರ್ಯದಲ್ಲಿ ಶ್ರಮಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅವರು ಅಭಿನಂದಿಸಿದ್ದಾರೆ.
ಯಾವೆಲ್ಲಾ ಪ್ರಕರಣಗಳ ಪತ್ತೆ?
- ಇಸಿಐಆರ್ ಪೋರ್ಟಲ್’ನಲ್ಲಿ ಪತ್ತೆಯಾದ ಮೊಬೈಲ್- 477
- ಕೊಲೆ ಪ್ರಕರಣ – 2
- ದರೋಡೆ – 3
- ಸುಲಿಗೆ – 19
- ಸರಗಳ್ಳತನ -4
- ಕನ್ನಕಳುವು -51
- ಮನೆ ಕಳುವು – 14
- ಸಾಮಾನ್ಯ ಕಳುವು – 62
- ಜಾನುವಾರು ಕಳುವು – 6
- ವಾಹನ ಕಳುವು – 70
- ವಂಚನ ಪ್ರಕರಣ – 13