ಶಿವಮೊಗ್ಗ : ಪ್ರಿಪ್ಸೋ ಕರೆನ್ಸಿ ಮೂಲಕ ಹೆಚ್ಚಿನ ಲಾಭಾಂಶಗಳಿಸುವ ಆಸೆಯೊಂದಿಗೆ ವ್ಯಕ್ತಿಯೊಬ್ಬ ಆನ್ಲೈನ್ನಲ್ಲಿ 7.17 ಲಕ್ಷ ರೂ. ಕಳೆದು ಕೊಂಡಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗದ ವ್ಯಕ್ತಿಯು ಟೆಲಿಗ್ರಾಂನಲ್ಲಿ ಬಂದಿದ್ದ ಲಿಂಕ್ ಮೂಲಕ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಂಡಿದ್ದರು. ಯುಪಿಐ ಮೂಲಕ 500 ರೂ.ವರ್ಗಾವಣೆ ಮಾಡಿದ್ದು, ಅದಕ್ಕೆ 230 ರೂ. ಲಾಭಾಂಶ ದೊರೆತಿತ್ತು. ನಂತರ ಡಿ.3ರಿಂದ 5ರವೆರೆಗೆ ವಿವಿಧ ಯುಪಿಐ ಐಡಿಗಳಿಗೆ 7.17.600 ರೂ. ವರ್ಗಾಯಿಸಿದ್ದರು. ಆ ಹಣ ವನ್ನು ಹಿಂಪಡೆಯಲು ಹೋದಾಗ ಬಂದಿರಲಿಲ್ಲ. ಸಂಬಂಧಿಸಿದವರಿಗೆ ಆನ್ಲೈನ್ನಲ್ಲಿ ಸಂಪರ್ಕಿ ಸಿದ್ದು, ಹಣ ಪಡೆಯಬೇಕಾಗಿದೆ 50 ಸಾವಿರ ರೂ. ಹಾಕುವಂತೆ ಸೂಚಿಸಿದ್ದರು. ಇದರಿಂದ ಅನುಮಾನಗೊಂಡ ವ್ಯಕ್ತಿ ಶಿವಮೊಗ್ಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ. 9448256183, 7483162573