ಶಿವಮೊಗ್ಗ: ನಗರದ ಬೋಮ್ಮನಕಟ್ಟೆಯ ಗರಡಿ ಮನೆ ಸಮೀಪದಲ್ಲಿ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.
ಬೊಮ್ಮನಕಟ್ಟೆಯ ಹೇಮಾವತಿ(೫೦) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದ್ದು, ಪತಿ ಹಾಗೂ ಇಬ್ಬರು ಪುತ್ರರೊಂದಿಗೆ ವಾಸವಾಗಿದ್ದ ಅವರು, ಪ್ರತಿದಿನ ಬೆಳಗ್ಗೆ ಅದೇ ಮಾರ್ಗದಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದರು.
ಮಂಗಳವಾರ ವಾಕಿಂಗ್ ಹೋದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಮಗಳೂರು | ಆಟವಾಡುತ್ತಾ ಬಾವಿಗೆ ಬಿದ್ದ ಇಬ್ಬರು ಕಂದಮ್ಮಗಳು ದಾರುಣ ಸಾವು
ಚಿಕ್ಕಮಗಳೂರು: ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್’ನಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಸೀಮಾ(6) ಮತ್ತು ರಾಧಿಕಾ(2) ಎಂದು ಗುರುತಿಸಲಾಗಿದೆ.
ಮಧ್ಯ ಪ್ರದೇಶ ಮೂಲದ ಸುನೀತಾ ಎಂಬುವರು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಲು ಬಂದಿದ್ದರು. ಇವರ ಮಕ್ಕಳೇ ಇವರಿಬ್ಬರು.
ಕೂಲಿ ಕೆಲಸಕ್ಕಾಗಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕಾಫಿ ತೋಟಕ್ಕೆ ಹೋಗಿದ್ದ ತಾಯಿ ಕೂಲಿ ಮುಗಿಸಿ ಮತ್ತೆ ಮನೆಗೆ ಬಂದಾಗ ಮಕ್ಕಳು ನಾಪತ್ತೆಯಾಗಿದ್ದರು.
ಗಾಬರಿಗೊಂಡ ತಾಯಿ ಸುನೀತಾ ಸುತ್ತಮುತ್ತಲಿನ ಕಾರ್ಮಿಕರಿಗೆ ಮಕ್ಕಳು ಇಲ್ಲದಿರುವ ವಿಷಯವನ್ನು ತಿಳಿಸಿದಾಗ ಕಾರ್ಮಿಕರು ಸುತ್ತ ಪರಿಶೀಲನೆ ನಡೆಸಿದಾಗ ಸಮೀಪದ ಬಾವಿಯಲ್ಲಿ ಮಕ್ಕಳ ಮೃತ ದೇಹ ಪತ್ತೆಯಾಗಿದೆ.
ತಾಯಿ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋದಾಗ ಆಟವಾಡುತ್ತಾ ಬಾವಿಯ ಬಳಿ ಬಂದು ಆಯ ತಪ್ಪಿ ಪ್ರಾಣ ಕಳೆದು ಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಭೂ ಮಟ್ಟದಿಂದ ಬಾವಿ ಕೇವಲ ಮೂರರಿಂದ ನಾಲ್ಕು ಅಡಿಯಷ್ಟು ನೀರಿನ ಮಟ್ಟ ಇದ್ದು ಕೈಗೆ ತಾಗುತ್ತದೆ. ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ 9448256183, 7483162573