
ಭದ್ರಾವತಿ | ಸಂಚಾರ ನಿಯಮ ಉಲ್ಲಂಘನೆ, ಲಾರಿ ಚಾಲಕನಿಗೆ 5ಸಾವಿರ ದಂಡ
ಭದ್ರಾವತಿ: ರಾಜ್ಯದ ವಿವಿಧೆಡೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದ ಲಾರಿ ಚಾಲಕನನ್ನು ನಗರದಲ್ಲಿ ಹಿಡಿದ ಸಂಚಾರ ಠಾಣೆ ಪೊಲೀಸರು ದಂಡ ವಿಧಿಸಿದ್ದಾರೆ.

ಸಂಚಾರ ಪೊಲೀಸ್ ಠಾಣಾಧಿಕಾರಿ ಶಾಂತಲಾ ಹಾಗೂ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಚಾಲಕ ಸಿಕ್ಕಿಬಿದ್ದಿದ್ದಾನೆ.

ಚಾಲಕನ ವಿರುದ್ಧ ರಾಜ್ಯದ ವಿವಿಧಡೆ ಒಟ್ಟು 10 ಐಎಂವಿ ಪ್ರಕರಣಗಳು ದಾಖಲಾಗಿವೆ.
ಚಾಲಕನಿಂದ ₹ 5,000 ದಂಡ ವಸೂಲಿ ಮಾಡಲಾಗಿದೆ ಎಂದು ಠಾಣಾಧಿಕಾರಿ ಶಾಂತಲಾ ತಿಳಿಸಿದ್ದಾರೆ.