ಆನಂದಪುರ: ಕಾಡಾನೆಗಳು ರಾತ್ರಿ ರೈತರ ಅಡಿಕೆ ತೋಟಕ್ಕೆ ನುಗ್ಗಿ ಮರಗಳನ್ನು ಮುರಿದು ಹಾಕಿದ ಘಟನೆ ಸಮೀಪದ ಆಚಾಪುರ ಗ್ರಾಮ ಪಂಚಾಯತ್‌ ನ ತಂಗಳವಾಡಿ ಗ್ರಾಮದಲ್ಲಿ ನಡೆದಿದೆ.

ಕಳೆದ 2-3 ದಿನಗಳಿಂದ ಗಿಳಾಲಗುಂಡಿ, ಕೆರೆಹಿತ್ಲು, ಗಿಳಾಲ ಗುಂಡಿ ಭಾಗದಲ್ಲಿ ಆನೆಗಳು ಕಾಣಿಸಿಕೊಂಡಿದ್ದು, ಈ ಭಾಗದ ರೈತರಲ್ಲಿ ಆತಂಕ ಉಂಟಾಗಿದೆ.

ತಂಗಳುವಾಡಿ ಗ್ರಾಮದ ಸಂಗಪ್ಪ ಗೌಡ್ರು ಎಂಬವರ ಅಡಿಕೆ ತೋಟಕ್ಕೆ ನುಗ್ಗಿದ ಆನೆಗಳು 15ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಹಾನಿಯುಂಟು ಮಾಡಿವೆ. ರಾಮಚಂದ್ರ, ಮೋಹನ್ ಎಂಬ ರೈತರ ಅಡಿಕೆ ಮತ್ತು ಬಾಳೆ ತೋಟ, ಶುಂಠಿ ಹೊಲಕ್ಕೆ ಆನೆಗಳು ನುಗ್ಗಿ ಬೆಳೆ ಹಾಳು ಮಾಡಿವೆ.

ಕಾರಿಗೆ ಲಾರಿ ಡಿಕ್ಕಿ: ವ್ಯಕ್ತಿ ಸಾವು

ಕುಂಸಿ‌: ಸಮೀಪದ ದೊಡ್ಡದಾನವಂದಿ ಬಳಿ ಭಾನುವಾರ ಕಾರಿಗೆ ಲಾರಿಯೊಂದು ಡಿಕ್ಕಿಯಾಗಿ ಕಾರು ಚಾಲಕ ಮೃತಪಟ್ಟಿದ್ದಾರೆ.

ಶಿವಮೊಗ್ಗದ ಗಾಡಿಕೊಪ್ಪದ ನಿವಾಸಿ, ನಿವೃತ್ತ ಸಹಾಯಕ ಇಂಜಿನಿಯರ್ ನಾಗರಾಜ್ ( 75) ಮೃತಪಟ್ಟವರು. ಅವರ ಪತ್ನಿ ಸೌಭಾಗ್ಯವತಿ ಹಾಗೂ ಪುತ್ರ ಅಭಿಲಾಷ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


ಸಾಗರದ ವಿಟ್ಲುಕೊಪ್ಪದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಹೋಗಿ ಶಿವಮೊಗ್ಗಕ್ಕೆ ವಾಪಸ್‌ ಬರುತ್ತಿದ್ದಾಗ ಶಿವಮೊಗ್ಗದಿಂದ ಸಾಗರ ಕಡೆಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ.

ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!