36 ವರ್ಷ ಕಳೆದರೂ ಮದುವೆಯಾಗಿಲ್ಲ ಎಂಬ ನೋವಿನಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ನಡೆದಿದೆ.
ನಂಗೂನೂರು ಮಂಡಲದ ಸಿದ್ದಣ್ಣಪೇಟೆ ಗ್ರಾಮದ ಯುವಕ 36 ವರುಷ ಕಳೆದರೂ ಮದುವೆಯಾಗದೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ,ಪಾಪ ಮದುವೆ, ಸಂಸಾರ ಕನಸು ಬಿಡಬೇಕಲ್ವೆ?
ಕಳೆದ ಕೆಲವು ವರ್ಷಗಳಿಂದ ಮದುವೆ ಸಂಗಾತಿಯನ್ನು ಹುಡುಕುತ್ತಿದ್ದ. ಅವರ ಪರಿಚಯಸ್ಥರಲ್ಲದೆ, ಅವರು ಮದುವೆ ಬ್ಯೂರೋಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಮದುವೆಗೆ ಹುಡುಗಿ ಸಿಗದೆ ಖಿನ್ನತೆಗೊಳಗಾಗಿದ್ದ ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ವಾಹನ ಚಾಲನೆಗೆ ತೆರಳಿದ್ದಾತ ತಮ್ಮ ಕೊಠಡಿಯಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ್ಸು ಈಗ ಗೊತ್ತಾಗಿದೆ.
ಮನೆಯವರು ಕೊಠಡಿಯ ಬಾಗಿಲು ತೆರೆದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಮದುವೆ ಆಗದಿದ್ದಕ್ಕೆ ಮನನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತೆಲಂಗಾಣದ ಸುದ್ದಿ, ಕೃಪೆ ವಿಜಯವಾಣಿ