ಶಿವಮೊಗ್ಗ, ಡಿ, 10 : ಶ್ರೀಗಳ ಅವಿರತ ಪರಿಶ್ರಮ, ಅವರು ಕೂಡಿಟ್ಟ ಆಧ್ಯಾತ್ಮ ತುಡಿತದ ಮನೋ ಭೂಮಿಕೆಯಿಂದ ಸಾವಿರಾರು ಮಕ್ಕಳು ಶಿಕ್ಷಣದ ಜೊತೆಗೆ , ಕ್ರೀಡಾ ಕ್ಷೇತ್ರಗಳಲ್ಲಿ ಇಂದು ಅಗ್ರ ಪಂಕ್ತಿಯ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಶಿವಮೊಗ್ಗದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಪೂಜ್ಯ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ಇಂದು ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಶಾಲಾ, ಕಾಲೇಜಿನ ಆವರಣದಲ್ಲಿ ನಡೆದ ಪೂಜ್ಯ ಶ್ರೀ ಪ್ರಸನನನಾಥ ಸ್ವಾಮೀಜಿಯವರ 57ನೇ ವರ್ಧಂತಿಯ ಮಹೋತ್ಸವದಲ್ಲಿ ಮಕ್ಕಳಿಗೆ ಸಿಹಿ ವಿತರಿಸಿ,ಆಶೀರ್ವಚನ ನೀಡುತ್ತಾ,ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಂಬು ಗ್ರಾಮ ಒಂದು ಕುಗ್ರಾಮದ ಪೂರ್ವಾಶ್ರಮದಲ್ಲಿ ಜನಿಸಿದರು.
ಏನನ್ನಾದರೂ ಮಹತ್ತರ ವಾದದನ್ನು ಸಾಧಿಸಬೇಕೆಂಬ ಸದುದ್ದೇಶದಿಂದ ಐಹಿಕ ಜೀವನದಲ್ಲಿ ವೈರಾಗ್ಯವನ್ನು ಹೊಂದಿ, ಪರಮ ಪೂಜ್ಯ ಜಗದ್ಗುರುಗಳವರಿಂದ ಬ್ರಹ್ಮಚಾರಿ ದೀಕ್ಷೆಯನ್ನು ಪಡೆದುಕೊಂಡರು.ಜಾತಿ ಮತದ ಭೇದ ಭಾವವಿಲ್ಲದೆ ಸರ್ವರನ್ನು ಸಮಾನವಾಗಿ ಗುರುತಿಸುವ ಶ್ರೀಗಳು,
ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಕಾಲಿಟ್ಟ ಕಡೆಯೆಲ್ಲ ಶಿಸ್ತು, ಸ್ವಚ್ಛತೆ ಉತ್ಸಾಹವೇ ತುಂಬಿ ಹರಿದು ಸದೃಢ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣದ ಅಡಿಗಲ್ಲಾಗಿ ನಿಂತಿದ್ದಾರೆ ಎಂದರು. ನೂತನ ವಿನೂತನ ಶಿಕ್ಷಣ ಹಾಗೂ ಪ್ರತಿಭೆಗಳ ಆವಿಷ್ಕಾರಕ್ಕೆ ತಮ್ಮದೇ ಆದ ಕೊಡುಗೆ ಪೂಜ್ಯರು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು ಇನ್ನು ಮುಂತಾದವರು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆ ಹಾಗೂ ಉತ್ತರಕನ್ನಡ ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಸಾಕಷ್ಟು ಸಮಾಜಮುಖಿ ಕಾರ್ಯಗಳು ಸಹ ಶ್ರೀ ಮಠದ ಶಿವಮೊಗ್ಗ ಶಾಖೆಯಿಂದ ನಡೆಯುತ್ತಿವೆ. ಸಾಮೂಹಿಕ ವಿವಾಹ, ಚುಂಚಾದ್ರಿ ಕಲೋತ್ಸವ, ಮಕ್ಕಳ ಸಾಹಿತ್ಯ ಸಮ್ಮೇಳನಗಳು, ರಸಪ್ರಶ್ನೆ, ವಿಜ್ಞಾನ ವಸ್ತು ಪ್ರದರ್ಶನ , ಮಹಿಳಾ ಜಾಗೃತಿ ಮತ್ತು ತರಭೇತಿ ಶಿಬಿರ, ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಯುವ ಜನತೆ ತಮ್ಮ ಬೇಸಿಗೆ ರಜಾದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಹ ಬೇಸಿಗೆ ಶಿಬಿರಗಳನ್ನು, ಆಯೋಜಿಸಲಾಗುತ್ತಿದೆ ಎಂದರು.
ತುಮಕೂರು ಜಿಲ್ಲೆ, ಮಾಯಸಂದ್ರದಲ್ಲಿ ಇತ್ತೀಚಿಗೆ ಉದ್ಘಾಟನೆಗೊಂಡ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಆರಂಭಗೊಂಡ ಖಾಸಗಿ ಕೃಷಿ ವಿಜ್ಞಾನ ಕಾಲೇಜನ್ನು ಆರಂಭಿಸಿ, ಪೂಜ್ಯ ಜಗದ್ಗುರುಗಳಿಂದ ಲೋಕಾರ್ಪಣೆ ಮಾಡಿಸಿದ್ದಾರೆ. ಪೂಜ್ಯ ಶ್ರೀ ಪ್ರಸನ್ನ ನಾಥ ಸ್ವಾಮೀಜಿಯವರು ಅಂದು, ಇಂದು ಎಂದೆಂದಿಗೂ ನಮ್ಮೆಲ್ಲರಿಗೂ ಸ್ಪೂರ್ತಿ ಮತ್ತು ಪ್ರೇರಕ ಶಕ್ತಿ, ಸದಾ ಹಸನ್ಮುಖಿಗಳಾಗಿ, ಹಿಂದಿನಿಂದಲೂ ಕ್ರೀಡೆ,ಸಾಹಿತ್ಯ,ಕಲೆ ಮತ್ತು ಶಿಕ್ಷಣಕ್ಕೆ ಶ್ರೀಗಳ ಕೊಡುಗೆ ಅವಿಸ್ಮರಣೀಯ ಎಂದರು.
ಸುರೇಶ್ ಎಸ್. ಹೆಚ್.
ಪ್ರಾಂಶುಪಾಲರು, ಬಿಜಿಎಸ್ ಶಾಲಾ, ಕಾಲೇಜು,ಗುರುಪುರ, ಶಿವಮೊಗ್ಗ