ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ
)

ವಾರದ ಅಂಕಣ- 20

ನಾನು, ನನ್ನಿಂದಲೇ ಎಲ್ಲಾ, ನನ್ನನ್ನು ಬಿಟ್ರೆ ಯಾರ ಕೈಲೂ ಆಗಲ್ಲ, ನನಗದು ಗೊತ್ತು ನನಗೆ ಗೊತ್ತಿಲ್ಲದ ವಿಷಯವೇ ಇಲ್ಲ “ನಾನೇ ನಾನು” ಎಂದು ಬೊಂಬಡ ಬಜಾಯಿಸುವ ಕೆಲವು ವಿಚಿತ್ರ ಮನಸ್ಸಿನ ನಮ್ಮ ನಡುವಿನ ಜೊತೆಗಾರರೇ ನಾನೇ ಎಂಬುದನ್ನು ಬದಿಗಿಟ್ಟು ನಾವು ನಮ್ಮಿಂದ ಎಲ್ಲರೂ ಸೇರಿ ಎಂಬುದನ್ನು ಸೇರಿಸಿಕೊಳ್ಳಿ ಎಂಬುದೇ ಎಂಬುದು

ಇಂದಿನ ನೆಗೆಟಿವ್ ಥಿಂಕಿಂಗ್ ಕಥನದ ಅಂಕಣ.
ನಮ್ಮ ನಡುವೆ ಕೆಲವೊಂದು ಘಟನೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದಾಗ ಇದು ಗೊತ್ತಾಗುತ್ತದೆ. ಇಲ್ಲಿ ಒಬ್ಬನಿದ್ದಾನೆ ಆತ ಹೇಳುವ ಮಾತು ಹಾಗೂ ಅನ್ಯರು ಮಾತನಾಡುವಾಗ ಮಧ್ಯಪ್ರವೇಶಿಸಿ ನನಗದು ಗೊತ್ತು ನನ್ ಮನೆಗೆ ಬಂದಿದ್ದ ಬಹಳ ಹಳೆ ಪರಿಚಯ.ಅವನಿಂದ ಬೇಕಾದಷ್ಟು ಬಂದಿದೆ ಎಂದು ಸುಳ್ಳು ಕಥೆ ಕಟ್ಟುವ “ನಾನು” ಎಂಬ ಮನುಷ್ಯ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಹೇಳುವುದೇ ಇಲ್ಲ. ಅಲ್ಲವೇ?


ನಾನು ಮನಸ್ಸು ಮಾಡಿದರೆ ಕಡಿದು ಕಟ್ಟೆ ಕಟ್ಟುತ್ತೇನೆ ಎಂದು ಪುಕ್ಕಟ್ಟೆಯಾಗಿ ಒಣ ವೇದಾಂತದ ಮಾತನಾಡುವಾತ ನಾನು ನಾನೆಂಬ ಮನಸಿಗೆ ಕಡಿವಾಣ ಹಾಕುವುದು ತುಂಬಾ ಅನಿವಾರ್ಯ ಹಾಗೂ ಅತ್ಯಗತ್ಯವಾಗಿದೆ.
ಕಂಡದ್ದನ್ನು ಕಂಡಂತೆ ಹೇಳಲು ಯೋಚಿಸುವ ಎಷ್ಟೋ ಜನರ ನಡುವೆ ಆ ಘಟನೆಯಾ ಅಯ್ಯೋ ನನಗದು ಗೊತ್ತು ನಾನು ನೋಡಿದ್ದೇನೆ ಎಂದು ದೂರದೂರಿನ ವಿಷಯವನ್ನು ಅತ್ಯಂತ ಸಮೀಪಕ್ಕೆ ತಂದು ಪ್ರಸ್ತಾಪಿಸುವ ಚಾಳಿ ಅಥವಾ ವಾಡಿಕೆ ಕೆಲವರಲ್ಲಿ ಬೆಳೆದಿರುತ್ತದೆ. ಇದರಲ್ಲಿ ನಾನು ಎಂಬುದೇ ಅವರ ಮುಖ್ಯ ವಿಷಯವಾಗಿರುತ್ತದೆ. ಇನ್ನು ಕೆಲವರು ಬಹಳಷ್ಟು ಮನದೊಳಗೆ ಕಲ್ಮಶ ತುಂಬಿಕೊಂಡು ಅಹಂಕಾರದ ಕೋಟೆಯಲ್ಲಿ ಬಂಧಿಗಳಾಗಿರುತ್ತಾರೆ. ಅವರ ಅಹಂ ಯಾವಾಗ ಎತ್ತ ತಿರುಗಿತ್ತದೋ ಆಗ ಕಾಡಿ ಬೇಡಿದರೂ ಮನದೊಳಗಿನ ಅಹಂ ಎಂಬ ಗೂಡಿನಿಂದ ಆತನ ಮನಸ್ಸನ್ನು ಹೊರ ತರಲು ಸಾಧ್ಯವಿಲ್ಲ ಅನ್ನುವುದನ್ನು ನಾವು ಸಾಕಷ್ಟು ಕಡೆ ಕಂಡಿದ್ದೇವೆ ಇದು ವಾಸ್ತವದ ಅಂಶವೂ ಹೌದಲ್ಲವೇ?


ನನ್ನದು ಮಾತ್ರ ಆಗಬೇಕು ಅದು ನನ್ನಿಂದಲೇ ಆಗಬೇಕು, ಅದನ್ನು ನನ್ನವರು ನೋಡಬೇಕು ಎಂದು ಯೋಚಿಸುವ ಕೆಲವೊಂದು ಪದವನ್ನು ಬಳಸಿಕೊಳ್ಳದಿರುವುದನ್ನು ಬಹಳಷ್ಟು ಬಾರಿ ಕಂಡಿದ್ದೇವೆ, ಕೇಳಿದ್ದೇವೆ. ಹಿಂದೆ ಮಾಡಿದ್ದ ಚಿಕ್ಕ ಸಹಾಯವನ್ನು ಸ್ಮರಿಸುವ ಅದೆಷ್ಟೋ ಒಳ್ಳೆಯ ಮನಸುಗಳ ನಡುವೆ ಇಂದಿನ ದಿನಮಾನಗಳಲ್ಲಿ ಕಾಣಿಸಿಕೊಳ್ಳುವ ಹಿಂದಿನ ಘಟನೆಗಳನ್ನು ಅಲ್ಲಲ್ಲಿಗೆ ಮರೆತುಬಿಡುವ, ಸಹಾಯವನ್ನು ಸ್ಮರಿಸದಿರುವ ಕೆಲವು ಮನಸುಗಳು ನಾನು ನಾನೆಂಬ ಗೋಡೆಯಲ್ಲಿ ಬಂದಿಗಳಾಗಿರುತ್ತಾರೆ. ಅವರಿಗೆ ಸಹಾಯದ ಹಾರೈಕೆಯ ಅನಿವಾರ್ಯತೆ ಬಂದಾಗ ನಾನು ನಾನೆಂಬ ಪದ ಮರೆಯಾಗುವ ಕಾಲಘಟ್ಟವು ನಮ್ಮ ನಡುವೆ ಕಾಣಿಸಿಕೊಳ್ಳುತ್ತದೆ ಅಲ್ಲವೇ?
ಸಾಕಷ್ಟು ಮೃದು ಹಾಗೂ ಒಳ್ಳೆಯ ಮನಸುಗಳು ಚಿಕ್ಕದಾದ ಸಹಾಯವನ್ನು ದೊಡ್ಡದಾಗಿ ಸ್ಮರಿಸುವ ಅದನ್ನು ಗೌರವಿಸುವ ಸಹಾಯ ಮಾಡಿದವರನ್ನು ಪೂಜ್ಯ ಸ್ಥಾನದಲ್ಲಿಟ್ಟು ನೋಡುವ ವ್ಯವಧಾನವನ್ನು ಕಲಿತಿರುತ್ತಾರೆ. ಆದರೆ ಕೆಲವೇ ಕೆಲವು ಮನಸುಗಳು ಹೊಳೆಯಲ್ಲಿ ಹುಣಸೆಹಣ್ಣು ಕದರಿ ಹೊಳೆ ನೀರು ಹುಳಿಯಾಯಿತೆಂದು ನೋಡುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ.


ನಾನು ನಾನೇ, ಇಲ್ಲಿ ನೀನು ನೀನೇ, ನಾನು ಎಂಬುವನಿಲ್ಲಿ ನೆಪವಾಗಿರುವಾಗ.., ಎಂಬ ಹಾಡನ್ನು ಕೇಳಿದ್ದೀರಲ್ಲವೇ? ಹಾಗಾಗಿ ನಾನು ಎಂಬ ಮನಸ್ಸಿನ ಗೋಡೆಯೊಳಗೆ ಬಂಧಿಯಾಗಿರುವ ಜೊತೆಗೆ ಅಹಂಕಾರದ ತುತ್ತ ತುದಿಯಲ್ಲಿರುವ ಸಮಾಜದ ಕೆಲವರು ಬದಲಾವಣೆ ಆಗುವುದು ಅನಿವಾರ್ಯ. ಆದರೆ ಕೆಲವರಲ್ಲಿ ಅದನ್ನು ನಿರೀಕ್ಷಿಸುವುದು ನಮ್ಮ ಮೂರ್ಖತನವಾಗುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ?
(ಮುಂದುವರೆಯುತ್ತದೆ)

By admin

ನಿಮ್ಮದೊಂದು ಉತ್ತರ

You missed

error: Content is protected !!