ನ.೧೬ ರಂದು ಜಿಲ್ಲಾ ಮಟ್ಟದ ಯುವಜನೋತ್ಸವ
ಶಿವಮೊಗ್ಗ ನವೆಂಬರ್ 16 : ಜಿಲ್ಲಾಡಳಿತ, ಜಿಲ್ಲಾ ಪಂಚಾಂiiತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿ.ವಿ. ಹಾಗೂ ನಿಸರ್ಗ ಮಹಿಳಾ ಮಂಡಳಿ, ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ನ.೧೬ ರಂದು ಬೆಳಗ್ಗೆ ೧೦.೩೦ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ನೆರೆವೇರಿಸಲ್ಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ಮಿ ಅಧ್ಯಕ್ಷ ಬಿ.ಕೆ. ಸಂಗಮೇಶ್ವರ ಮತ್ತು ಶಾಸಕರು ಹಾಗೂ ಕ.ರಾ.ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಗಮಿಸಲಿದ್ದಾರೆ. ಶಿವಮೊಗ್ಗ ನಗರ ಶಾಸಕ ಎಸ್.ಎನ್ ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಸಂಸದರು, ವಿಧಾನ ಸಭಾ/ವಿಧಾನ ಪರಿಷತ್ ಶಾಸಕರು, ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರುಗಳು, ಜನ ಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಣಾ ಅಧಿಕಾರಿಗಳು, ವಿವಿದ ಸಂಘ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಲ್ಲಿದ್ದಾರೆ.

ಬೆಳೆ ನಷ್ಟ ಪರಿಹಾರಕ್ಕೆ ಪ್ರಸ್ತಾವನೆ: ಆಕ್ಷೇಪಣೆ ಸಲ್ಲಿಸಬಹುದು
ಶಿವಮೊಗ್ಗ ನವೆಂಬರ್16 ಅಕ್ಟೋಬರ್ ತಿಂಗಳಿನ ಅಕಾಲಿಕ ಮಳೆಯಿಂದಾಗಿ ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿ, ತಡಸನಹಳ್ಳಿ, ಮದಗಹಾರನಹಳ್ಳಿ, ದಿಂಡದಹಳ್ಳಿ, ಮತ್ತು ದಬ್ಬಣಬೈರನಹಳ್ಳಿ ಗ್ರಾಮಗಳಲ್ಲಿ ರೈತರು ಬೆಳೆದ ಬಾಳೆ, ಶುಂಠಿ ಮತ್ತು ತರಕಾರಿ ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಿದ್ದು ನಷ್ಟ ಪರಿಹಾರ ಕೊಡಲು ಸಕ್ಷಮ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿರುವುದರಿಂದ ಸಾರ್ವಜನಿಕರು ಆಕ್ಷೇಪಣೆಗಳನ್ನು ನ. ೨೧ ರಂದು ಲಿಖಿತವಾಗಿ ಹಿರಿಯ ಸಹಾಯಕ ತೋಟಗಾರಿಕ ನಿರ್ದೇಶಕ ಕಚೇರಿ, ಶಿಕಾರಿಪುರ ಇಲ್ಲಿಗೆ ಸಲ್ಲಿಸುವುದು.

ಸುಣ್ಣದಕೊಪ್ಪ ಗ್ರಾಂ.ಪಂ, ತಡಸಹಳ್ಳಿ ಗ್ರಾ. ಮಹೇಶಕುಮಾರ ಎ.ಜಿ ಇವರ ೦.೩೬ ಹೆ. ಟೋಮ್ಯಾಟೋ ಬೆಳೆ ಮತ್ತು ೦.೧೮ ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ. ತಡಸಹಳ್ಳಿ ಗ್ರಾ. ಪ್ರಾಂಶಾತ ಇವರ ೦.೪೦ ಹೆ. ಟೋಮ್ಯಾಟೋ ಬೆಳೆ ಮತ್ತು ೦.೧೮ ಹೆ. ಬದನೆಕಾಯಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ವಿಜಯಾ ಬಿ.ಬಿ ಇವರ ೦.೧೮ ಹೆ. ಶುಂಠಿ ಹಾಗೂ ೦.೦೮ ಹೆ. ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಗಳ್ಳಿ ಗ್ರಾ, ಮಾಲತೇಶ ಇವರ ೦.೧೮ ಹೆ. ಶುಂಠಿ ಬೆಳೆ ಮತ್ತು ೦.೦೭ ಹೆ, ಶುಂಠಿ ಬೆಳೆ ಹಾನಿಯಾಗಿದೆ. ಕಡೇನಂದಿಹಳ್ಳಿ ಗ್ರಾ, ಜಯಾನಂದ ಇವರ ೦.೧೮ ಹೆ. ಶುಂಠಿ ಬೆಳೆ ಹಾಗೂ ೦.೦೮ ಹೆ. ಶುಂಠಿ ಬೆಳೆ ಹಾನಿಯಾಗಿದೆ. ಮದಗಹಾರನಹಳ್ಳಿ ಗ್ರಾಂ.ಪಂ, ಮದಗಹಾರನಹಳ್ಳಿ ಗ್ರಾ, ಸಿದ್ದನಗೌಡ ಇವರ ೦.೫೦ ಹೆ. ಬಾಳೆ ಮತ್ತು ೦.೨೫ ಹೆ. ಬಾಳೆ ಬೆಳೆ ಹಾನಿಯಾಗಿದೆ. ದಿಂಡದಹಳ್ಳಿ ಗ್ರಾಂ.ಪಂ. ಕಿಟ್ಟದಹಳ್ಳಿ ಗ್ರಾ, ಕೊಲ್ಲಮ್ಮ, ಗಣೇಶಪ್ಪ, ನಾಗಪ್ಪ, ಮಂಜಮ್ಮ, ಸಂಜೀವಪ್ಪ ಮತ್ತು ದಾನಪ್ಪ ಇವರುಗಳ ಜಂಟಿಯಲ್ಲಿ ೧.೨೦ ಹೆ. ಶುಂಠಿ ಬೆಳೆ ಹಾನಿಯಾಗಿದೆ. ಬೇಗೂರು ಗ್ರಾಂ.ಪಂ, ದಬ್ಬಣ ಬೈರನಹಳ್ಳಿ ಗ್ರಾ, ಬಸವಗೌಡ ೦.೧೫ ಹೆ. ಶುಂಠಿ ಬೆಳೆ ಹಾನಿಯಾಗಿರುತ್ತದೆ ಎಂದು ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶರು ಪ್ರಕಡಣೆಯಲ್ಲಿ ತಿಳಿಸಿದಾರೆ.

ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಶಿವಮೊಗ್ಗ ನವೆಂಬರ್ 16 ಹೊಳಲೂರು ೬೬/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಮಾರ್ಗಗಳಲ್ಲಿ ಲಿಂಕ್ ಲೈನ್ ಮಾರ್ಗ ರಚಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ. ೧೭ ರಿಂದ ೨೦ ರವರೆಗೆ ಬೆಳಗ್ಗೆ ೧೦.೦೦ ರಿಂದ ಸಂಜೆ ೬.೦೦ರವರೆಗೆ ಹಾಡೋನಹಳ್ಳಿ, ಹಳೆ/ಹೊಸ ಮಡಿಕೆಚೀಲೂರು ಮತ್ತು ಬಿ.ಕೆ.ತಾವರೆ ಗ್ರಾಮಗಳ ವ್ಯಾಪ್ತಿಯಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಕಾಣೆಯಾದವರ ಮಾಹಿತಿ ನೀಡಲು ಮನವಿ
ಶಿವಮೊಗ್ಗ ನವೆಂಬರ್ 16 ; : ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಣೆಯಾದವರ ಕುರಿತು ಪ್ರಕಟಣೆಗಾಗಿ
ಹೊಳಲೂರು ಗ್ರಾಮ ವಾಸಿ ೬೬ ವರ್ಷದ ವಿರೂಪಾಕ್ಷಪ್ಪ ಬಿನ್ ಲೇ ರಂಗಪ್ಪ ಎಂಬುವವರು ಜೂ. ೫ರಂದು ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ ೫ ಅಡಿ ಎತ್ತರ, ದುಂಡುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಶರ್ಟ್, ನೀಲಿ ಪಂಚೆ ಮತ್ತು ಕೆಂಪು ಟವೆಲ್ ಧರಿಸಿರುತ್ತಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.
ತೊಪ್ಪಿನಘಟ್ಟ, ೧ನೇ ಕ್ರಾಸ್,ಹರಿಗೆ ವಾಸಿ ೪೮ ವರ್ಷದ ಸತೀಶ್ ಡಿ ಬಿನ್ ಲೇ ದೇವರಾಜ್ ಎಂಬ ವ್ಯಕ್ತಿಯು ಸೆ.೨೪ರಂದು ಮನೆಯಿಂದ ಕೆಲಸಕ್ಕೆ ಹೋದವರು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ ೫.೬ ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಕಪ್ಪು ಕೂದಲು ಹೊಂದಿದ್ದು, ಮನೆಯಿಂದ ಹೋಗುವಾಗ ಕ್ರೀಮ್ ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಕಾಟನ್ ಶರ್ಟ್ ಧರಿಸಿರುತ್ತಾರೆ. ಕನ್ನಡ ಮತ್ತು ತಮಿಳು ಭಾಷೆ ಮಾತನಾಡುತ್ತಾರೆ
ಗೊಂದಿಚಟ್ನಹಳ್ಳಿ ಗ್ರಾಮ ವಾಸಿ ೨೦ ವರ್ಷದ ಅಮೃತ ಟಿ ಬಿನ್ ಎಸ್ ತಿಪ್ಪೇಶಪ್ಪ ಎಂಬ ಮಹಿಳೆ ಆ.೨೧ರಂದು ಮನೆಯಿಂದ ಸ್ನೇಹಿತೆಯ ಜೊತೆ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆ ಚಹರೆ ೫.೧ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್‌ದು, ಮನೆಯಿಂದ ಹೋಗುವಾಗ ನೀಲಿ ಮತ್ತು ಬಿಳಿ ಬಣ್ಣದ ಮಿಶ್ರಿತ ಚೂಡಿದಾರ ಧರಿಸಿರುತ್ತಾರೆ. ಕನ್ನಡ ಮತ್ತು ಮರಾಠಿ ಭಾಷೆ ಮಾತನಾಡುತ್ತಾರೆ.
ರಾಗಿಗುಡ್ಡ ೦೨ನೇ ಕ್ರಾಸ್, ವಾಸಿ ೬೯ ವರ್ಷದ ದೇವೇಗೌಡ ಬಿನ್ ಲೇ ಚುಂಚೇಗೌಡ ಎಂಬುವವರು ಅ. ೩೧ ರಂದು ರಾತ್ರಿ ಮನೆಯಿಂದ ಹೊರಗೆ ಹೋಗಿದ್ದು, ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ ೫ ಅಡಿ ಎತ್ತರ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಶರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಬಿಜಾಪುರ ತಾ.ಘಾಳಪೂಜಿ ಗ್ರಾಮ ವಾಸಿ ೨೦ ವರ್ಷದ ಮೀನಾಕ್ಷಿ ಬಿನ್ ರಮೇಶ್ ಹಾರೆದೊಂಬರ ಎಂಬ ಯುವತಿ ನ. ೦೭ ರಂದು ಶಿವಮೊಗ್ಗ ಕಲ್ಲಾಪುರದ ಸಾವಿತ್ರಮ್ಮ ಮನೆಯಿಂದ ಹೋದವರು ಈ ವರೆಗೂ ವಾಪಸ್ಸಾಗಿರುವುದಿಲ್ಲ. ಈ ಮಹಿಳೆ ಚಹರೆ ೫ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ ಹೊಂದಿದ್ದು, ಮನೆಯಿಂದ ಹೋಗುವಾಗ ಅರಿಶಿಣ ಬಣ್ಣದ ಚೂಡಿದಾರ, ಪ್ಯಾಂಟ್ ಮತ್ತು ಕಪ್ಪು ಬಣ್ಣದ ದುಪ್ಪಟ್ಟ ಧರಿಸಿರುತ್ತಾರೆ. ಕನ್ನಡ, ಹಿಂದಿ ಮತ್ತು ದೊಂಬರ ಭಾಷೆ ಮಾತನಾಡುತ್ತಾರೆ.
ಚಿತ್ರದುರ್ಗ ಜಿಲ್ಲೆ, ಕಾಲ್ಕೆರೆ ಗ್ರಾಮ ವಾಸಿ ನಿಂಗರಾಜ ಕೆ.ಎಸ್ ಬಿನ್ ಲೇ ಶೇಖರಪ್ಪ ಎಂಬ ೨೩ ವರ್ಷದ ಬುದ್ಧಿಮಾಂದ್ಯ ವ್ಯಕ್ತಿ ಅ.೧೧ ರಂದು ಶಿವಮೊಗದ್ಗ ಚೀಲೂರು ಬಸ್ಸ್ ನಿಲ್ದಾಣದಿಂದ ಹೋದವರು ಈವರೆಗೂ ವಾಪಸ್ಸಾಗಿರುವುದಿಲ್ಲ. ಈ ವ್ಯಕ್ತಿ ಚಹರೆ ೫.೬ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹೊಂದಿದ್ದು, ನಡೆಯುವಾಗ ಎರಡೂ ಕಾಲು ತುದಿಯಲ್ಲಿ ಮಂಗಾಲಿನಲ್ಲಿ ನಡೆಯುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಬರ್ಮೂಡ ಚಡ್ಡಿ ಧರಿಸಿರುತ್ತಾರೆ. ಕನ್ನಡ ಬಾಷೆ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ.
ಕಾಣೆಯಾಗಿರುವ ಈ ವ್ಯಕ್ತಿಗಳ ಸುಳಿವು ದೊರೆಕಿದಲ್ಲಿ ಸಿಪಿಐ ಗ್ರಾಮಾಂತರ ವೃತ್ತ ಶಿವಮೊಗ್ಗ, ಪಿ.ಎಸ್.ಐ ಗ್ರಾಮಾಂತರ ಪೊಲೀಸ್ ಠಾಣೆ ದೂ. ಸಂ. ೦೮೧೮೨ ೨೬೧೪೦೦, ೨೬೧೪೧೮, ಮೊ. ನಂ ೯೪೮೦೮೦೩೩೩೨, ೯೪೮೦೮೦೩೩೫೦ ಅಥವಾ ಕಂಟ್ರೋಲ್ ಶಿವಮೊಗ್ಗ ೧೦೦ ಕ್ಕೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

By admin

ನಿಮ್ಮದೊಂದು ಉತ್ತರ

error: Content is protected !!