
ಸಾಮಾಜಿಕ ಜಾಲತಾಣದ ಚಿತ್ರ
ಇದು ನಮ್ಮ ನಡುವಿನ ಕೆಲವೇ ಕೆಲವರಲ್ಲಿ ಇರುವ ಮನೋಭಾವನೆ ಹಾಗೂ ವ್ಯಕ್ತಿತ್ವ ಎಂದರೆ ತಪ್ಪಾಗಲಿಕ್ಕಿಲ್ಲ. ಏನಾದರೂ ಆಗಲಿ ಯಾರು ಹಾಳಾದರೆ ನಮಗೇನು?ಒಟ್ಟಾರೆ ನಮ್ಮ ಬೇಳೆ ಕಾಳು ಬೆಂದರೆ ಸಾಕು. ಬೇರೆ ವಿಷಯ ನಮಗೆ ಯಾಕೆ? ಎಂದು ನಾನಾ ರೂಟುಗಳಲ್ಲಿ ಅವರ ಬೇಳೆ ಕಾಳುಗಳನ್ನು ಬೇಯಿಸಿಕೊಳ್ಳಲು ಹೊಸ, ಹೊಸ ಚಿತ್ರವಿಚಿತ್ರ ಪ್ರಯತ್ನಗಳನ್ನು ನಿರಂತರವಾಗಿ ನಡೆಸುತ್ತಾರೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ.

ನಾನೊಬ್ಬ ಜನಪ್ರತಿನಿಧಿ,, ನಾನೊಬ್ಬ ಪತ್ರಕರ್ತ, ನಾನೊಬ್ಬ ಅಧಿಕಾರಿ, ನಾನೊಬ್ಬ ಪೊಲೀಸ್ ಎಂದು ಅವರದೇ ರೂಟುಗಳಲ್ಲಿ ಸ್ವಂತಿಕೆಯ ಹೆಜ್ಜೆ ಹಾಕುತ್ತಿರುವುದನ್ನು ಹಲವೆಡೆ ನಾವು ಕಂಡಿದ್ದೇವೆ. ಅಪಾರ ಪ್ರಮಾಣದ ಒಳ್ಳೆಯವರ ನಡುವೆ ಕೆಲವೇ ಕೆಲವು ವಿಕೃತರ ಮನೋಭಾವ ಇಲ್ಲಿ ತಮ್ಮ ತಮ್ಮ ಸ್ವಯಂ ಉದ್ದೇಶಗಳಿಗೆ ಬಳಕೆಯಾಗುತ್ತಿರುವುದನ್ನು ಕಂಡಿದ್ದೇವೆ, ಕೇಳಿದ್ದೇವೆ, ನೋಡಿದ್ದೇವೆ. ಅವರನ್ನು ಬದಲಿಸುವುದು ನಾಗರಹಾವನ್ನು ವಿಷ ಕಕ್ಕದಂತೆ ಮಾಡುವುದು ಎರಡೂ ಒಂದೇ ಆಗುತ್ತದೆ ಎಂಬುದು ಸಹಜ ಅಲ್ಲವೇ?
ಎಲ್ಲರಿಗೂ ಅವರವರ ಸ್ವಂತಿಕೆ ಬಗ್ಗೆ ಆಲೋಚನೆ, ಅವಲೋಕನ ಇರುವುದು ಸಹಜ, ಅದು ತಪ್ಪಲ್ಲ. ಆದರೆ ಅದೇ ಕಸುಬಾಗಿ ಮಾಡಿಕೊಂಡು ಇನ್ನೊಬ್ಬರ ಹೊಟ್ಟೆ ಮೇಲೆ ಹೊಡೆಯುವುದು ಎಷ್ಟರಮಟ್ಟಿಗೆ ಸರಿ?
ಗಜೇಂದ್ರ ಸ್ವಾಮಿ, ಶಿವಮೊಗ್ಗ
