ಶಿವಮೊಗ್ಗ: ಜಿಲ್ಲೆಯ ಸಮಗ್ರ ಸಾಂಸ್ಕೃತಿಕ ಇತಿಹಾಸ ಪುನಃ ರೂಪಿಸುವ ಕೆಲಸ ಆಗಬೇಕಿದ್ದು, ಜಿಲ್ಲೆಯ ಏಳು ತಾಲೂಕಗಳಲ್ಲಿನ ಶಾಸನಗಳನ್ನು ಅಧ್ಯ ಯನ ನಡೆಸುವ ಅಗತ್ಯವಿದೆ ಎಂದು ಶಿವಮೊಗ್ಗ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ವಿಜಯಾದೇವಿ ಹೇಳಿದರು.
ಚಾಲುಕ್ಯ ನಗರದ ಗೋಪಿಶೆಟ್ಟಿಕೊಪ್ಪ ಬಡಾ ವಣೆಯ ಸಾಹಿತ್ಯ ಗ್ರಾಮದಲ್ಲಿ ರಾಷ್ಟ್ರಕವಿ ಡಾ.ಜಿ. ಎಸ್.ಶಿವರುದ್ರಪ್ಪ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ೧೫ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ತಿಳಿಸಿದ್ದ ಹಲ್ಮಿಡಿ ಶಾಸನಕ್ಕಿಂತ ಕನ್ನಡದ ಮೊದಲ ಶಾಸನ ಶಿವಮೊಗ್ಗದ ತಾಳಗುಂದದಲ್ಲಿ ದೊರೆತಿದೆ. ೭ನೇ ಶತಮಾನದ ಭೂವಿಕ್ರಮನ ತಾಮ್ರ, ಚಿನ್ನದ ನಾಣ್ಯಗಳು ಸಹ ದೊರೆತಿವೆ. ಅಲ್ಲಮನ ಕುರಿತ ಎರಡು ಶಾಸನಗಳಿವೆ ಎಂದರು.
ಉಡುತಡಿಯ ಕೋಟೆಯಲ್ಲಿ ಇದೀಗತಾನೆ ಕಸಪಯ್ಯನ ಹೊಸಶಾಸನ ಸಿಕ್ಕಿದೆ. ವಿಶ್ವದಾಖಲೆ ೨೭ ವರ್ಷ ಕೆಳದಿ ಚೆನ್ನಮ್ಮ ರಾಜ್ಯವಾಳಿದ ಇತಿಹಾಸವಿದೆ. ಎಲ್ಲ ಶೋಧಗಳ ಹಿನ್ನಲೆಯಲ್ಲಿ ಶಿಕಾರಿಪುರದ ಹೊಸ ಚರಿತ್ರೆ, ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾ ಜಿಕ ನೆಲೆಗಳಲ್ಲಿ ರಚನೆಯಾಗಬೇಕಿದೆ. ಕುವೆಂಪು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ರಾಜ್ಯ ಸರ್ಕಾರ ಸಮಗ್ರ ಸಾಂಸ್ಕೃತಿಕ ಇತಿಹಾಸ ರಚಿಸುವ ಕೆಲಸ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಮಾಧ್ಯಮ ಕಡ್ಡಾಯವಾಗಲಿ: ಭೂಮಿ ನಮಗೆಲ್ಲ ತಾಯಿ, ಭೂಮಿಯ ಭಾಷೆಯೆ ನಮ್ಮ ಮಾತೃಭಾಷೆ ಅದು ಕನ್ನಡ. ಕರ್ನಾಟಕದ ಕೇಂದ್ರಿಯ, ವಸತಿ, ಸರ್ಕಾರ ಹಾಗೂ ಸರ್ಕಾರೇತರ ಶಾಲೆಗಳು ಸೇರಿ ಎಲ್ಲ ಶಾಲೆಗಳಲ್ಲಿ ಪೂರ್ವಪ್ರಾಥಮಿಕದಿಂದ ೫ನೇ ತರಗತಿಯವರೆಗೆ ಕನ್ನಡ ಮಾಧ್ಯಮಕಡ್ಡಾಯ ಆಗಬೇಕು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ, ಮೇಯರ್ ಸುವರ್ಣ ಶಂಕರ್, ನಿಕಟ ಪೂರ್ವ ಸಮ್ಮೇಳನಾಧ್ಯಕ್ಷೆ ವಿಜಯಾಶ್ರೀಧರ್, ಉಪಮೇಯರ್ ಸುರೇಖಾ ಮುರುಳೀಧರ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಪಾಲಿಕೆ ಪ್ರತಿಪಕ್ಷ ನಾಯಕ ಹೆಚ್.ಸಿ. ಯೋಗೇಶ್ ಮತ್ತಿತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!