ಶಿವಮೊಗ್ಗ: ಅಧಿಕಾರ, ಪ್ರತಿಷ್ಠೆ, ಪ್ರಚಾರ, ಪ್ರಸಿದ್ಧಿ, ಸ್ವಾರ್ಥ ಉದ್ದೇಶ ಇಟ್ಟುಕೊಂಡು ಸಮಾಜ ಸೇವೆ ಮಾಡಬಾ ರದು. ಸಮಾಜ ಸೇವೆ ನಿಸ್ವಾರ್ಥವಾಗಿದ್ದಾಗ ಮಾಡಿದ ಸೇವೆಗೆ ಸಾರ್ಥಕತೆ ಬರುತ್ತದೆ ಎಂದು ಲಯನ್ಸ್ ಕ್ಲಬ್ ವಲಯ-೯ರ ಪ್ರಾದೇಶಿಕ ಮುಖ್ಯಸ್ಥ ಲಯನ್ ಅನಂತ ಕೃಷ್ಣ ನಾಯಕ್ ಹೇಳಿದರು.
ದಿ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಲಯನ್ಸ್ ಕ್ಲಬ್ ಹಾಗೂ ಶಿವಮೊಗ್ಗ ಕಾಸ್ಮೋಪಾಲಿಟನ್ ಲಯನ್ಸ್ ಕ್ಲಬ್ ಜಿಲ್ಲೆ-೩೧೭ ಸಿ ವತಿಯಿಂದ ಇಲ್ಲಿನ ಸಾಗರ ರಸ್ತೆಯಲ್ಲಿರುವ ಲಯನ್ಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದಶಕಗಳ ಕಾಲದಿಂದಲೂ ಲಯನ್ಸ್ ಕ್ಲಬ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಕೋವಿಡ್-೧೯ನಿಂದ ಲಾಕ್‌ಡೌನ್ ಆದಾಗ ಕ್ಲಬ್ ವತಿಯಿಂದ ಸಂಕಷ್ಟದಲ್ಲಿರುವವರ ಸಮಸ್ಯೆಗೆ ಸ್ಪಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರಚಾರ ಪಡೆಯದೆ ಕ್ಲಬ್ ಸದಸ್ಯರು ಎಲೆ ಮರೆ ಕಾಯಿಯಂತೆ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಝೋನ್ ಛೇರ್‌ಪರ್ಸನ್ ಜಿ.ಎಸ್.ಕುಮಾರ್, ಶಿವಮೊಗ್ಗ ಕಾಸ್ಮೋಪಾಲಿಟನ್ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ರಾಜೇಶ್, ಕಾರ್ಯದರ್ಶಿ ಸಿ.ಹೊನ್ನಪ್ಪ, ಖಜಾಂಚಿ ಎಂ.ಎಂ.ಡೇನಿಯಲ್, ವಿ.ರಾಜು ಮತ್ತಿತರರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!