- ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ)
ವಾರದ ಅಂಕಣ – 19
ಕೈಯಲ್ಲಿ ಕಾಸಿದ್ದರೂ ಎಲ್ಲಾ ಕಡೆ ನನ್ ಹತ್ರ ಇಲ್ಲ ಅನ್ಬೇಡಿ. ಕೊಡೋಕ್ಕಾಗಲ್ಲ ಅಂತ ಹೇಳಿ. ಆದರೆ ಇದ್ದರೂ ಇಲ್ಲ ಅಂತ ಸುಖಾ ಸುಮ್ಮನೆ ಸುಳ್ಳು ಹೇಳಬೇಡಿ. ಏಕೆಂದರೆ ಮೇಲಿರುವ ಭಗವಂತ ಅಸ್ತು ಎನ್ನುತ್ತಾನಂತೆ. ಹಾಗಾದರೆ ನೀವು ಏನೂ ಇಲ್ಲದವರಂತಾಗುತ್ತೀರಂತೆ..!, ಎಂಬುದೇ ಈ ವಾರದ ನೆಗೆಟಿವ್ ಥಿಂಕಿಂಗ್ ಅಂಕಣದ ವಾಸ್ತವ ಕಥೆ ಹಾಗೂ ಕೇಳಿರುವ ಕೇಳಬಹುದಾದ ಚಿತ್ರಣ.
ಬಹಳಷ್ಟು ಜನರನ್ನು ಗಮನಿಸಿ ಕೈಲಿ ಕಾಸಿದ್ದರೂ ನನ್ನತ್ರ ಎಂತಾ ಇಲ್ಲ ಎಂದರೆ ಸಮಪಾಲು ಎಂದಾಗಲೂ ಕಾಸು ಬಿಚ್ಚಲು ಕೈ ಕೈ ಹಿಸುಸಿಕೊಳ್ಳುತ್ತಾರೆ. ಏನೇನೋ ಇಲ್ಲದಂತೆ ನಾಟಕ ಮಾಡುತ್ತಾರೆ. ಕೇಳಿದರೆ ಅದೇ ರಾಗ ಹಾಡುವವರು, ನಾನು ಪಾಪರ್ ಎಂದು ಪಾಪಾರೆಂಬ ಪದ ನಿಜ ಜೀವನದಲ್ಲಿ ಸತ್ಯವಾಗಬಾರದು ಅಲ್ಲವೇ?
ಇಂತಹದೊಂದು ಮಾತು ಬಹುತೇಕ ವಾಸ್ತವಗಳಲ್ಲಿ ಕಂಡ ಸತ್ಯಗಳು ಬಾಯಿ ಮಾತಲ್ಲಿ ಹೊಟ್ಟೆ ತುಂಬಿಸುವ ಜನ ಕೈಯ ಮಾತಲ್ಲಿ ಬಿಚ್ಚಿಡಲು ಹಿಂದೆ ಮುಂದೆ ನೋಡುತ್ತಾರೆ. ಹಾಗೆಂದ ಮಾತ್ರಕ್ಕೆ ಸಂಪೂರ್ಣ ಕಳೆದುಕೊಳ್ಳುವುದು ಬೇಡ.
ಬಿಚ್ಚುವುದು ಬೇಡ ಎಂಬುದು ನಮ್ಮ ಚಿತ್ರಣ.
ಬಾಯಿ ಮಾತಲ್ಲಿ ಹಾಗೆ, ಹೀಗೆ ನಾನು ಕೊಡಿಸುತ್ತೇನೆ, ನಾನು ನೋಡಿಕೊಳ್ಳುತ್ತೇನೆ. ನನ್ನ ಜವಾಬ್ದಾರಿ ಎಂದು ಎಷ್ಟೋ ಜನ ಅದೆಷ್ಟೋ ಕಡೆ ವೇದಾಂತದ ಉಪದೇಶವನ್ನು ನೀಡಿರುತ್ತಾರೆ. ಅದನ್ನೇ ನಂಬಿದ ಎಷ್ಟೋ ಅಮಾಯಕರು ಬೀದಿ ಪಾಲಾಗುತ್ತಾರೆ. ಹಾಗಾಗಿ ನಂಬಿಕೆಯಲ್ಲಿ ಅನರ್ಹ ಹಾಗೂ ಅವಕಾಶವೇ ಇಲ್ಲದ ಮಾತಾಗುತ್ತದೆ.
ಅದೆಷ್ಟೋ ಸಾವಿನ ಸಂದರ್ಭಗಳಲ್ಲಿ ಸಾವು ಕಂಡವ ದೇವರಂತವನಾಗುತ್ತಾನೆ. ಅವನ ಕುಟುಂಬ, ಅವರ ಪರಿಸ್ಥಿತಿ, ಮಕ್ಕಳ ವಿದ್ಯಾಭ್ಯಾಸ, ಮಗದೊಂದು ಯೋಚಿಸುತ್ತಾ ನಾನು ಅದಕ್ಕೆ ಸಹಾಯ ಮಾಡುತ್ತೇನೆ. ನಾನು ಓದಿಸುತ್ತೇನೆ ಎಂದು ಹೇಳಿದ ಆತ ಮರು ದಿನದಿಂದಲೇ ಅದನ್ನು ಮರೆತುಬಿಟ್ಟಿರುತ್ತಾನೆ. ಆ ಕುಟುಂಬವೇನಾದರೂ ಅವನನ್ನೇ ನಂಬಿಕೊಂಡಿದ್ದರೆ, ಅವರ ಪಾಡು ಭಗವಂತನಿಗೆ ಇಷ್ಟವಾಗಬೇಕಷ್ಟೆ…!
ಇನ್ನು ಕೆಲವರು ಪಡೆದದ್ದನ್ನು ಕೊಡುವಾಗಲೂ ನೂರಾಹತ್ತು ನಾಟಕ ಮಾಡುತ್ತಾರೆ. ಈಗ ಅಲ್ಲಿಂದ ಬರುವುದಿದೆ. ಬಂದ ಕ್ಷಣ ಕೊಡುತ್ತೇನೆ ಖಂಡಿತ ಎಂದು ಬಂದದ್ದನ್ನು ತಿಂದು ಕೊಡುವುದನ್ನು ಮರೆಯುವ ವಿಕೃತ ಮನಸ್ಸುಗಳು ಸಹ ನಮ್ಮ ನಡುವೆ ಯಥೇಚ್ಛವಾಗಿ ಕಂಡುಬರುತ್ತವೆ ಅಲ್ಲವೇ?
ಇದ್ದಾಗ ಇಲ್ಲವೆನ್ನುವುದು ಪಡೆದದ್ದನ್ನು ವಾಪಸ್ ಕೊಡಲು ನಾನಾ ನಕರ ಕೆಲಸ ಮಾಡುವುದು ಸೇರಿದಂತೆ ಕೊಡುವಿಕೆಯ ನಡುವಿನ ಕಿರಾತಕ ಬುದ್ಧಿಗಳ ಕೆಲವು ವಿಕೃತವನ್ನು ನಾವು ಬಹಳಷ್ಟು ಕಡೆ ನೋಡಿದ್ದೇವೆ ಅವರಿಂದ ಅನುಭವಿಸಿದ್ದೇವೆ ಎಂಬುದು ಸಾಕಷ್ಟು ಓದುಗರ ಅಭಿಪ್ರಾಯ.
ಕೊಡುತ್ತಾನೆಂದರೆ ಅವನಿಂದ ಪಡೆಯುವುದಷ್ಟೇ ಅಲ್ಲ ಕಿತ್ತುಕೊಳ್ಳುವುದು ಅವನ ಮುಂದೆ ನಾಟಕವಾಡುವುದನ್ನು ನಡೆಸುವ ಕೆಲ ಕಿರಾತಕ ಮನಸ್ಸುಗಳು ನಮ್ಮ ನಡುವೆ ಯಥೇಚ್ಛವಾಗಿ ಕಂಡುಬರುತ್ತಿರುವುದು ಸಾಮಾನ್ಯ ವಿಷಯ. ಅದನ್ನು ಸಾಕಷ್ಟು ಬಾರಿ ಸಾಕಷ್ಟು ನಿದರ್ಶನಗಳಲ್ಲಿ ಕಂಡಿದ್ದೇವೆ, ಕೇಳಿದ್ದೇವೆ, ನೋಡಿದ್ದೇವೆ ಆದರೆ ಆ ಮನುಸುಗಳನ್ನು ಮುಂದಿಟ್ಟುಕೊಂಡು ವಾಸ್ತವಾಂಶಗಳಲ್ಲಿ ನೈಜತೆಯ ಮುಖಗಳನ್ನು ಸಹ ಗುರುತಿಸಬೇಕಾಗಿರುವುದು ಸಹಬಾಳು ಸಮಪಾಲು ಎಂಬ ತತ್ವ ಅನುಕರಣೆ ಮಾಡುವುದು ಸಹ ಬದುಕಿನ ಕಾಲಘಟ್ಟದಲ್ಲಿ ಅತ್ಯಂತ ಅಮೂಲ್ಯವಾದುದಲ್ಲವೇ?
ಒಂದೆಡೆ ಒಂದಿಷ್ಟು ಸ್ನೇಹಿತರು ಸಮ ಪಾಲು ಆಧಾರದಲ್ಲಿ ಜಾಲಿಯಾದ ಪ್ರವಾಸ ಮುಗಿಸುತ್ತಾರೆ. ಪರಸ್ಪರ ಸಹತತ್ವ ಅನುಕರಣೆ ಇದ್ದಾಗ ಯಾವುದೇ ಕಿರಿಕಿರಿಯಾಗುವುದಿಲ್ಲ. ಇಲ್ಲದಿದ್ದಾಗ ನಾನು ರಗಳೆಗಳು ಮೂಡುತ್ತವೆ. ಆಗಲೇ ಬರುವುದು ಕೆಲವರ ಬಾಯಿಂದ ನಾನು ಪಾಪರ್, ನಿಜವಾಗಿಯೂ ಆ ಪಾಪರ್ ಆಗದಿರಲಿ. ಬಾಯಿಂದ ಅಂತಹ ಪದ ಬಾರದಿರಲಿ ಎಂಬುದು ಬಹಳಷ್ಟು ಜನರ ಮುಗ್ಧ ಮನಸ್ಸುಗಳ ಸಭ್ಯ ಮಾತು. ಕೊಡುವುದು ಅವರಿಚ್ಚೆಯಾದರೂ ಸುಖಾ ಸುಮ್ಮನೆ ಪಾಪರ್ ಆಗದಿರಿ.
( ಮುಂದುವರೆಯುತ್ತದೆ)