
ಶಿವಮೊಗ್ಗ: ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನೂತನ ‘ಬೈಟ್ ಬ್ರಿಗೆಡ್’ ಕ್ಲಬ್ ಉದ್ಘಾಟನೆಗೊಂಡಿದ್ದು, ತಾಂತ್ರಿಕ ಮತ್ತು ತಾಂತ್ರಿಕೇತರ ಕೌಶಲ್ಯಗಳನ್ನು ಹೆಚ್ಚಿಸುವಂತಹ ಕಲಿಕಾ ವಾತಾವರಣವನ್ನು ನಿರ್ಮಾಣ ಮಾಡುವುದು ಕ್ಲಬ್ನ ದೂರದೃಷ್ಟಿಯಾಗಿದೆ.

ಕೋಡಿಂಗ್ ಸ್ಪರ್ಧೆಗಳು, ಹ್ಯಾಕಥಾನ್ಗಳು, ಹೊಸ ತಂತ್ರಜ್ಞಾನಗಳ ಕುರಿತು ಸೆಮಿನಾರ್ಗಳ ಜೊತೆಗೆ ತಾಂತ್ರಿಕೇತರ ಕಾರ್ಯಕ್ರಮಗಳಾದ ರಸಪ್ರಶ್ನೆ, ಗುಂಪು ಚರ್ಚೆಗಳು ಮತ್ತು ಸಾರ್ವಜನಿಕ ಭಾಷಣ ಕಾರ್ಯಾಗಾರಗಳು ಆಯೋಜಿಸಲಾಗುತ್ತದೆ.

ಇದರೊಂದಿಗೆ ವಿದ್ಯಾರ್ಥಿಗಳಲ್ಲಿ ಉದಯೋನ್ಮುಖ ತಂತ್ರಜ್ಞಾನಗಳ ತರಬೇತಿ, ಉದ್ಯಮ ಸಂಬಂಧಿತ ಪರಿಕರಗಳಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆಯಲು ಪ್ರೋತ್ಸಾಹದಾಯಕ ವಾತಾವರಣ ಸೃಷ್ಟಿ ಮಾಡುವ ಇರಾದೆ ಬೈಟ್ ಬ್ರಿಗೇಡ್ ಕ್ಲಬ್ನದಾಗಿದೆ.

ನೂತನ ಕ್ಲಬ್ ನನ್ನು ಇಸ್ರೋ ಸಂವಹನ ಕೇಂದ್ರದ ಉಪನಿರ್ದೇಶಕರಾದ ಶಿವಾನಿ ಉದ್ಘಾಟಿಸಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಸಂಯೋಜಕಿ ಉಜ್ವಲ ರವಿಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.