
ಉದಾರಿಗಳಾಗಿರಿ, ಕೈಲಾದ ಸಹಾಯ ಮಾಡಿ ಎಂಬುದು ಎಲ್ಲರ ಪ್ರೀತಿಯ ಮಾತು. ಹಾಗೆಂದ ಮಾತ್ರಕ್ಕೆ ತೀರಾ ಉದಾರಿಗಳಾಗಬೇಡಿ, ನಿಮ್ಮ ಉಡುದಾರವನ್ನು ಬಿಚ್ಚಿಕೊಳ್ಳುತ್ತಾರೆ. ನಿಮ್ಮನ್ನು ಖಾಲಿ ಖಾಲಿಯನ್ನಾಗಿ ಮಾಡಿಬಿಡುತ್ತಾರೆ ಎಂಬುದು ನೈಜದ ಮತ್ತೊಂದು ಮಾತು.

ನೀವು ಒಂದಿಷ್ಟು ಪ್ರಾಮಾಣಿಕತೆ, ಮುಗ್ಧತೆ ಅಸಹಾಯಕತೆಯನ್ನು ಅರಿಯುವ ಮನೋಭಾವನೆ ಬಂದಿದ್ದರೆ ಮಾತ್ರ ಗ್ರಹಚಾರ ನಿಮಗೆ ಕಾಡುತ್ತದೆ. ತೀರಾ ಅಯ್ಯೋ ಪಾಪ ಅನ್ನಬೇಡಿ ಏಕೆಂದರೆ ನಂತರ ಅದೇ ಪಾಪದ ಕೂಪಕ್ಕೆ ನಮ್ಮನ್ನು ತಳ್ಳಿ ಬಿಡುತ್ತದೆ. ತೀರಾ ಕಟುಕರೂ ಆಗಬೇಡಿ. ಮನಸ್ಸು ಮುಗ್ಧವಾಗಿರಲಿ, ಉದಾರವಾಗಿರಲಿ ಆದರೆ ಜೊತೆಗೊಂದು ನಿಮ್ಮದೇ ಆದ ಎಚ್ಚರಿಕೆ ನಿಮಗಿರಲಿ.

ವಾಸ್ತವದ ಬದುಕಿನಲ್ಲಿ ಇಂದಿನ ಘಟನೆಗಳಲ್ಲಿ ಇಂತಹ ಸಾಕಷ್ಟು ಉದಾಹರಣೆಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ.
ಮನಸು ಮುಗ್ಧ ಹಾಗೂ ಸಹಜಪ್ರಜ್ಞೆಯಿಂದ ಕೂಡಿದ್ದರೆ ಮಾತ್ರ ಎಲ್ಲವೂ ಪರಿಶುದ್ಧವಾಗಿರುತ್ತದೆ. ಒಂದು ಚೂರು ಹೆಚ್ಚು ಕಡಿಮೆಯಾದರೆ ಎಲ್ಲವೂ ತಿರುಗಿ ಒದೆಯುತ್ತದೆ.

ಅಂಕಣಗಳ ಸಮಗ್ರ ಮಾಹಿತಿ ಓದಿ
Box-
ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಹತ್ತೊಂಬತ್ತನೇ ಅಂಕಣದ ಮತ್ತೊಂದು ವಿಶೇಷ. ಇಂದಿನ ಡಿಫರೆಂಟ್ ವಿಷಯ ಓದಿ, ಯಾವಾಗ್ಲೂ ಕಾಸಿಲ್ಲ ಅನ್ಬೇಡ್ರೀ, ಭಗವಂತ ಅಸ್ತು ಅಂತಾನಂತೆ..! ಅಂಕಣ ಓದಿ.
ನೆಗೆಟಿವ್ ಥಿಂಕಿಂಗ್ ಕಾಲಂಗೆ ಮೊದಲಿನಿಂದಲೂ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ
https://tungataranga.com/?p=36071
ಯಾವಾಗ್ಲೂ ಕಾಸಿಲ್ಲ ಅನ್ಬೇಡ್ರೀ, ಭಗವಂತ ಅಸ್ತು ಅಂತಾನಂತೆ..!, ಗಜೇಂದ್ರ ಸ್ವಾಮಿ ಅವರ ಇಂದಿನ ನೆಗಿಟೀವ್ ಥಿಂಕಿಂಗ್ ಅಂಕಣ ಓದಿ
ಸಂಪೂರ್ಣ ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕ್ ಬಳಸಿ ಸೇರಿ
https://chat.whatsapp.com/IzhQLfWK8ud0fRtId61ehs
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.
ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಕೆಟ್ಟ ಕಣ್ಣುಗಳಿಂದ ದೂರ ಇರ್ರಿ”” ಹಣದ ಲಾಲಸೆಗೆ ರಾಜಕಾರಣ” ಸಂಪನ್ನರನ್ನ ಕೆಣಕಬ್ಯಾಡ್ರಿ..!” , “ಅತಿಯಾದ ತಾಳ್ಮೆ ಆತಂಕ ತಂದೀತು ಜೋಕೆ” “ಬದುಕಿಗಾಗಿ ಮನಸಿಗೆ ತೇಪೆ ಬೇಕೆ?” “ತೀರಾ ಜಾಸ್ತಿ ಸಲಿಗೆ, ಸದರ ಬ್ಯಾಡ್ರಿ”, “ರಾಜೀ ಪಂಚಾಯ್ತೀ ಎಂಬುದೇ ನಾಟ್ಕ”, “ಇವನು ಆತ್ಮೀಯ, ನಂಬಿಕಸ್ತ ಎಂದು ತಿಳಿಕೊಳ್ಳಲು ನಾಕಾಣೆ ಸಾಲಕೊಡ್ತೀ”
“ಬಡ್ಡಿ, ದಾಖಲೆ ಇಲ್ದೆ ಸಾಲಕೊಟ್ರೇ ನೀವೇ ಬಡ್ಡಿ ಕೊಡ್ಬೇಕಾಗುತ್ತೆ., “ಈ ನಮ್ ಜನಸೂಕ್ಷ್ಮ ಆದಾಗಲೇ ಹೆಚ್ಚಿದ್ದು ಮೋಸಗಾರತನ!” ಅಂಕಣಗಳನ್ನು ಓದಿದ್ದೀರಿ.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳ ಕುರಿತಂತೆ ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
– ಸಂ