ಶಿವಮೊಗ್ಗ: ನಗರದ ದಾಮೋದರ್ ಕಾಲೋನಿಯಲ್ಲಿರುವ ವಿಜಯ ಕರಿಯಣ್ಣ ಅಪಾರ್ಟ್ಮೆಂಟ್ ನಲ್ಲಿ , ಮಟಮಟ ಮಧ್ಯಾಹ್ನ ಒಳಗೆ ನುಗ್ಗಿದ ದರೋಡೆಕೋರರು, ಯಾವುದೇ ಆತಂಕವಿಲ್ಲದೇ 2 ಮನೆಗಳಿಗೆ ಕನ್ನ ಹಾಕಿ ಪರಾರಿಯಾಗಿರುವ ಘಟನೆ ವರದಿಯಾಗಿ.
ಜ. 28 ರ ಗುರುವಾರ ಮಧ್ಯಾಹ್ನ ಅಪಾರ್ಟ್ಮೆಂಟ್ ನ ಮೇನ್ ಗೇಟ್ ನಿಂದಲೇ, ಒಳಗೆ ಬಂದಿರುವ ಕಳ್ಳರು, ಮೊದಲನೇ ಮಹಡಿಯಲ್ಲಿರುವ ಫ್ಲ್ಯಾಟ್ ನಂ. 1 ಮತ್ತು 2 ರಲ್ಲಿ ಈ ದರೋಡೆ ನಡೆಸಿದ್ದಾರೆ. ಇಲ್ಲಿರುವ ಫ್ಲ್ಯಾಟ್ ನಂ. 1 ರಲ್ಲಿ ನೆಲೆಸಿರುವ ಎಂಪಿಎಂ ನ ನಿವೃತ್ತ ಉದ್ಯೋಗಿ ನರಸಿಂಹ ನಾರಾಯಣ ಭಟ್ ಮನೆಯಲ್ಲಿ 103 ಗ್ರಾಂ ಬಂಗಾರ ಮತ್ತು 20 ಸಾವಿರ ನಗದನ್ನು ಎಗರಿಸಿದ್ದಾರೆ. ಇಷ್ಟೇ ಅಲ್ಲದೇ, ಫ್ಲ್ಯಾಟ್ ನಂ. 2 ರಲ್ಲಿ ನೆಲೆಸಿರುವ ಸುನಿಲ್ ಕುಮಾರ್ ಮನೆಯಲ್ಲಿ 174 ಗ್ರಾಂ ಬಂಗಾರ ಮತ್ತು 335 ಗ್ರಾಂ ಬೆಳ್ಳಿ ಮತ್ತು 3 ಸಾವಿರ ರೂ. ಕ್ಯಾಷ್ ನ್ನು
ಮಾಡಿದ್ದಾರೆ ಎನ್ನಲಾಗಿದೆ.
ನರಸಿಂಹ ನಾರಾಯಣ ಭಟ್ ಅವರು, ಒಂದು ವಾರದ ಹಿಂದೆಯಷ್ಠೇ, ಬೆಂಗಳೂರಿನಲ್ಲಿರುವ ತಮ್ಮ ಪುತ್ರನ ಮನೆಗೆ ತೆರಳಿದ್ದರಂತೆ. ಅಲ್ಲದೇ, ಸುನಿಲ್ ಕುಮಾರ್ ಪಾಟಿಲ್ ಅವರು, ಜ. 27 ರಂದು ಗೋವಾ ಪ್ರವಾಸಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ. ಈ ಇಬ್ಬರ ಫ್ಲ್ಯಾಟ್ ಗಳು ಖಾಲಿ ಇರುವುದನ್ನು ಪತ್ತೆ ಮಾಡಿರುವ ದುಷ್ಕರ್ಮಿಗಳು, ಈ ದರೋಡೆ ಕೃತ್ಯ ಎಸಗಿರುವುದು ನಾಗರೀಕರಲ್ಲಿ ಆತಂಕ ಮನೆ ಮೂಡಿಸಿದೆ.
ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಶೋಧದಲ್ಲಿ ಪೊಲೀಸರು ತೊಡಗಿಕೊಂಡಿದ್ದಾರೆ.