ಶಿವಮೊಗ್ಗ: ವಿಜಯಪುರದಲ್ಲಿ ರೈತರ ಹೊಲಕ್ಕೆ ವಕ್ಪ್ ಬೋರ್ಡ್ ಬೇಲಿ ಹಾಕಿರುವ ಪ್ರಕರಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ಲಕ್ಷ ಎಕರೆ ಇದ್ದ ವಕ್ಫ್ ಜಮೀನು ಇಂದು ೮-೧೦ ಲಕ್ಷ ಎಕರೆ ಜಮೀನು ಆಗಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.


ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಲಿಮೆಂಟ್ ನಲ್ಲಿ ವಕ್ಫ್ ಬಿಲ್ ತಿದ್ದುಪಡಿ ತರುವ ಮುನ್ನ ಈ ಎಲ್ಲಾ ಆಸ್ತಿಯನ್ನ ವಕ್ಫ್ ಆಸ್ತಿ ಎಂದು ಘೋಷಿಸಿಕೊಳ್ಳುವ ತರಾತು ನಡೆದಿದೆ. ಇದು ಆಸ್ತಿ ಕಬಳಿಸುವ ?ಡಂತ್ರ. ಅದಕ್ಕಾಗಿಯೇ ವಿಜಯಪುರದಲ್ಲಿ ರೈತರ ಹೊಲಕ್ಕೂ ವಕ್ಪ್ ಬೋರ್ಡ್ ನೋಟಿಸ್ ನೀಡಿದೆ ಎಂದು ಕಿಡಿಕಾರಿದರು.


ವಕ್ಫ್ ಬೋರ್ಡ್ ಕ್ರಮದ ವಿರುದ್ದ ಹರಿಹಾಯ್ದ ಅವರು, ಜಂಟಿ ಸಂಸದೀಯ ಸಮಿತಿಯ ಮುಂದೆ ವಕ್ಫ್ ಬೋರ್ಡ್ ತಿದ್ದುಪಡಿ ಚರ್ಚೆ ಆಗಲಿದೆ. ಚಳಿಗಾಲದ ಅಧಿವೇಶನದಲ್ಲಿ ಸುಧೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ. ಆಗ ಇದಕ್ಕೆಲ್ಲ ಕಡಿವಾಣ ಬೀಳಲಿದೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!