ನವರಾತ್ರಿ ಹಬ್ಬದ ಭಾಗವಾಗಿ ಆಯುಧಪೂಜೆ ಮತ್ತು ವಿಜಯ ದಶಮಿ ಆಚರಣೆಗೆ ಜಿಲ್ಲೆಯ ಜನರು ಸಜ್ಜುಗೊಂಡಿದ್ದು ಪೂಜೆಗೆ ಬೇಕಾದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು.


ಆಯುಧಪೂಜೆಯಂದು ಆಯುಧಗಳಿಗೆ ಮಾತ್ರವಲ್ಲದೆ, ವಾಹನಗಳಿಗೆ, ಯಂತ್ರೋಪಕರಣಗಳು, ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಿರುವ ಸಂಪ್ರದಾಯ ಇರುವುದರಿಂದ ಜನರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಅಂಗಡಿಗಳ ಮಾಲೀಕರು ಆಯುಧಪೂಜೆ ದಿನ ಅಂಗಡಿ ಪೂಜೆಯನ್ನೂ ನಡೆಸುತ್ತಾರೆ.


ಮಹಿಳೆಯರು ಮನೆ ಹಾಗೂ ಹೊರ ಆವರಣವನ್ನು ಸ್ವಚ್ಛಗೊಳಿಸುವುದರಲ್ಲಿ ನಿರತರಾಗಿದ್ದರೆ, ಪುರುಷರು, ಮಕ್ಕಳು ವಾಹನಗಳನ್ನು ತೊಳೆದರು. ಅಂಗಡಿಗಳು, ಕಾರ್ಖಾನೆಗಳಲ್ಲಿ ಮಾಲೀಕರು ಹಾಗೂ ಸಿಬ್ಬಂದಿ ಬೆಳಿಗ್ಗೆಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.


ನಗರ, ಪಟ್ಟಣಗಲ್ಲಿ ಜನಸಂದಣಿ: ಹಬ್ಬದ ಕಾರಣಕ್ಕೆ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಇಂದಿನಿಂದಲೇ ಜನಸಂದಣಿ ಹೆಚ್ಚಿತ್ತು. ಬೆಳಿಗ್ಗೆಯಿಂದಲೇ ಜನರು ಪೇಟೆಗೆ ಬಂದು ಹಬ್ಬದ ಆಚರಣೆಗೆ ಬೇಕಾದ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದರು. ಮಧ್ಯಾಹ್ನದ ನಂತರ ಜನರ ಸಂಖ್ಯೆ ಹೆಚ್ಚಾಯಿತು. ಸಂಜೆಯ ಹೊತ್ತು ವಿಪರೀತವಾಗುವಷ್ಟು ಇತ್ತು.


ಆಯುಧಪೂಜೆಗಾಗಿ ಹೂವು, ನಿಂಬೆ ಹಣ್ಣು, ಬೂದುಕುಂಬಳಕಾಯಿ, ಬಾಳೆ ಕಂದು, ಮಾವಿನ ಸೊಪ್ಪು, ಹಣ್ಣು ಹಂಪಲು, ಅರಿಸಿನ, ಕುಂಕುಮ ಸೇರಿದಂತೆ ಸುವಸ್ತುಗಳ ಖರೀದಿಯಲ್ಲಿ ತೊಡಗಿದ್ದರು.
ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತಳ್ಳುಗಾಡಿಗಳಲ್ಲಿ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು, ನಿಂಬೆ ಹಣ್ಣುಗಳನ್ನು ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು. ವಾಹನಗಳು, ಅಂಗಡಿಗಳನ್ನು ಅಲಂಕರಿಸಲು ಬಳಸುವ ಕೃತಕ ಹಾರಗಳು, ಇತರೆ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರ ಸಂಖ್ಯೆಯೂ ಹೆಚ್ಚಿತ್ತು.


ಕುಂಬಳಕಾಯಿಗೆ ಬೇಡಿಕೆ ಕಡಿಮೆ: ಹಲವು ವ್ಯಾಪಾರಿಗಳು ಬೂದುಕುಂಬಳಕಾಯಿ ರಾಶಿ ಹಾಕಿದ್ದರು, ವ್ಯಾಪಾರ ಕಡಿಮೆ ಇತ್ತು. ಗ್ರಾಹಕರು ಬೆಲೆ ವಿಚಾರಿಸಿ ಹೋಗುತ್ತಿದ್ದರು. ಸಂಜೆಯ ಹೊತ್ತಿಗೆ ಸ್ವಲ್ಪ ವ್ಯಾಪಾರ ಆಯಿತು. ೫೦ರಿಂದ ರೂ. ನಿಂದ ೨೦೦ ವರೆಗು ಕುಂಬಳಕಾಯಿ ಬೆಲೆ ಇತ್ತು.
ಗಾಂಧಿ ಬಜಾರ್, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಲಕ್ಷ್ಮಿ ಟಾಕೀಸ್ ವೃತ್ತ, ಗೋಪಾಳ, ಪೊಲೀಸ್ ಚೌಕಿ ಸೇರಿದಂತೆ ಎಲ್ಲೆಡೆ ಹಬ್ಬದ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ.


ನಿಂಬೆ ಹಣ್ಣು ಹಾಗೂ ಇತರ ಹೂ, ಹಣ್ಣುಗಳ ಬೆಲೆ ಈ ಬಾರಿ ಹೆಚ್ಚಳವಾಗಿದ್ದು, ಚೆಂಡುಹೂವಿಗೆ ಮಾರಿಗೆ ೬೦ರಿಂದ ೧೦೦ರವರೆಗೆ ಇದ್ದು, ಇತರ ಸೇವಂತಿಗೆ , ಜಾಜಿ, ಮತ್ತು ಕಾಕಡ ಮಾರಿಗೆ ೧೭೦ರಿಂದ ೨೫೦ರವರೆಗೆ ಇದೆ. ಬಿಡಿ ಹೂವುಗಳು ಕೆ.ಜಿ.೪೦೦ ರೂ.ಗಳಾಗಿದ್ದು, ಸೇಬು,ಬಾಳೆಹಣ್ಣು, ಮುಸುಂಬಿ ಎಲ್ಲಾ ರೀತಿಯ ಹಣ್ಣುಗಳು ಕೂಡ ಏರಿಕೆಯಾಗಿವೆ. ನಾಳೆ ಆಯುಧಪೂಜೆಯಿದ್ದು, ಈ ಬಾರಿ ಇನ್ನೂ ಕೂಡ ಮಾರುಕಟ್ಟೆಯಲ್ಲಿ ಖರೀದಿ ಆರ್ಭಟ ಪ್ರಾರಂಭವಾಗಿಲ್ಲ.


ಉಳಿದಂತೆ, ಬಾಳೆಕಂದು, ಕಬ್ಬಿನ ಪೈರು, ಮಾವಿನಸೊಪ್ಪಿನ ಕಟ್ಟಕ್ಕೆ ೨೦ರಿಂದ ೩೦ರವರೆಗೆ ಇತ್ತು.

By admin

ನಿಮ್ಮದೊಂದು ಉತ್ತರ

error: Content is protected !!